ಸೂರ್ಯ ನಮಸ್ಕಾರ, ಯೋಗ ಮತ್ತು ಇಸ್ಲಾಂ

Spread the love

ಸೂರ್ಯ ಜಗತ್ತಿಗೆ ಬೆಳಕು ನೀಡುತ್ತದೆ ನಿಜ. ಹಾಗಂತ ಅದನ್ನು ಆರಾಧಿಸಬೇಕೇ? ಹಾಗೆ ಸೂರ್ಯನನ್ನು ಆರಧಿಸಬೇಕೆಂದರೆ ರಾತ್ರಿವೇಳೆಯಲ್ಲಿ ಸೂರ್ಯನು ಮರೆಯಾಗಿರುವಾಗ ನೀವ್ಯಾರನ್ನು ಆರಾಧಿಸುವಿರಿ? ದೇವರೆಂದ ಮೇಲೆ ಅವನಿಗೆ ನ್ಯೂನತೆ ಇರಬಾರದು. ರಾತ್ರಿಯಲ್ಲಿ ಪ್ರಕಾಶಿಲಾಗದ್ದು ಸೂರ್ಯನ ನ್ಯೂನತೆಯಲ್ಲವೇ? ಅದೂ ಅಲ್ಲದೆ ಸೂರ್ಯನಿಗೂ ಅಂತ್ಯವಿದೆಯೆಂದು ವಿಜ್ಞಾನ ಹೇಳುತ್ತಿದೆ ಸೂರ್ಯನ ಪತನದ ನಂತರ ಈ ಆರಾಧಕರ ಗತಿಯೇನು? ಅವರನ್ನು ಸಂರಕ್ಷಿಸುವವರು ಯಾರು?

ಒಂದು ತಿಳಿಯಿರಿ,ಸೃಷ್ಟಿಗಳೆಲ್ಲವೂ ಅದರದ್ದೇ ಆದ ದೌರ್ಬಲ್ಯತೆಗಳನ್ನು ಹೊಂದಿವೆ. ಆದುದರಿಂದಲೇ ನಾವು ಮುಸ್ಲಿಮರು ಸೃಷ್ಟಿಗಳನ್ನು ಆರಾಧಿಸದೆ ಸೃಷ್ಟಿಕರ್ತನನ್ನು ಆರಾಧಿಸುತ್ತೇವೆ. ನಿಮಗೆ ಮತ್ತು ನಮಗೆ ಒಂದೇ ವ್ಯತ್ಯಾಸ ಅದೇನೆಂದರೆ ನೀವು ಎಲ್ಲವನ್ನೂ ದೇವರೆನ್ನುತ್ತೀರಿ ಮತ್ತು ಅದೆಲ್ಲವನ್ನೂ ಆರಾಧಿಸುತ್ತೀರಿ ನಾವು ಎಲ್ಲವೂ ದೇವರದ್ದೆಂದು ನಂಬುತ್ತೇವೆ ಮತ್ತು ಆ ದೇವರನ್ನು ಮಾತ್ರ ಆರಾಧಿಸುತ್ತೇವೆ.

ಯೋಗವನ್ನು ಸಮರ್ಥಿಸುವ ಭರದಲ್ಲಿ ಕೆಲವರು ಇಸ್ಲಾಮನ್ನು ಪ್ರಕೃತಿ ವಿರೋಧಿ ಧರ್ಮವೆಂದು ಆಕ್ಷೇಪಿಸಲು ಪ್ರಾರಂಭಿಸಿದ್ದಾರೆ. ಇಸ್ಲಾಂ ಮಾನವ ಸ್ನೇಹಿಯಾದ ಪ್ರಾಕೃತಿಕ ಧರ್ಮವಾಗಿದೆ. ಸೂರ್ಯನಿಗೆ ಗೃಹಣವಾದಾಗ ಸೂರ್ಯನನ್ನು ಆರಾಧಿಸದೆ ಅದನ್ನು ಸೃಷ್ಟಿಸಿದ ಸರ್ವೇಶ್ವರನಿಗೆ ಸೂರ್ಯಗೃಹಣ ನಮಾಝ್ ನಿರ್ವಹಿಸಲು ಕಲಿಸಿದೆ. ಒಂದು ನಿಮಿಷದ ನಂತರ ಜಗತ್ತೇ ಅಂತ್ಯವಾಗುತ್ತದೆಯೆಂದು ದೃಢವಾಗಿದ್ದಾಗ ನಿನ್ನ ಕೈಯ್ಯಲ್ಲೊಂದು ಗಿಡವಿದ್ದರೆ ಅದನ್ನು ನೆಟ್ಟುಬಿಡು ಎಂದಿದ್ದಾರೆ ಪ್ರವಾದಿ ಸ.ಅ. ಅವರು ರೋಗಿಗಳನ್ನು ಸಂದರ್ಶಿಸಲು ಹೋಗುವಾಗ ಅವರ ರೋಗಕ್ಕೆ ಶಮನವಿರು ಹಣ್ಣುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಹೀಗೆ ಇಸ್ಲಾಂ ಪ್ರಕೃತಿಯನ್ನು ಸಂರಕ್ಷಿಸಲು, ಮಾನವನಿಗೆ ಉಪಕಾರವಾಗುವಂತೆ ಅದನ್ನು ಉಪಯೋಗಿಸಿಕೊಳ್ಳಲು, ಅದನ್ನು ಪ್ರೀತಿಸಲು, ಅದನ್ನು ಆದರದಿಂದ ಕಾಣಲು ಕಲಿಸಿದೆಯೇ ಹೊರತು ಆರಾಧಿಸಲು ಕಲಿಸಿಲ್ಲ. ಹಾಗೆ ಅದನ್ನು ಆರಾಧಿಸುವುದಾದರೆ ಇಂದು ಜಗತ್ತಿನಲ್ಲಿ ಅದೆಷ್ಟೊ ಸಸ್ಯ, ಪ್ರಾಣಿ ತಳಿಗಳು ನಶಿಸಿಹೋಗೆದೆಯಲ್ಲವೇ ?

ಪವಿತ್ರ ಇಸ್ಲಾಂ ಭಾವನೆಗಳ ಸಂಯೋಜನೆಯಲ್ಲ, ಋಷಿಯ ಊಹೆಗಳಲ್ಲ, ಕವಿಯ ಕಾವ್ಯ ಲಹರಿಯೂ ಅಲ್ಲ. ಇಸ್ಲಾಂ ಪ್ರಯೋಗಿಕ ಧರ್ಮ, ಎಂದಿಗೂ ಒಂದೇ ನಿಲುವಿರುವ, ಒಬ್ಬನನ್ನೇ ಒಂದೇ ರೀತಿಯಲ್ಲಿ ಆರಾಧಿಸುವ ಧರ್ಮ. ನಮಗೆ ಸೂರ್ಯನೆಂದರೆ ಆದರವಿದೆ, ಪ್ರೀತಿ ಇದೆ, ಆದರೆ ಆರಾಧನೆ ಇಲ್ಲ.

ಯೋಗ ಒಂದು ಪುರಾತನ ಕಲೆ ಮತ್ತು ಅದು ಆರೋಗ್ಯಕ್ಕೆ ಉತ್ತಮ. ಆದರೆ ಅದಕ್ಕಿಂತಲೂ ಉತ್ತಮವಾದದ್ದು ಮತ್ತು ಒಪ್ಪಗೆಯಾಗುವಂತಹ ಆರೋಗ್ಯಕರ ಆರಾಧನೆಯೊಂದನ್ನು ಇಸ್ಲಾಂ ಕಲಿಸಿದೆ ಮತ್ತು ನಾವದನ್ನು ದಿನ ನಿತ್ಯವೂ ಐದು ಹೊತ್ತು ನಿರ್ವಹಿಸುತ್ತಿದ್ದೇವೆ. ಅದಕ್ಕೆ ವಯೋಮಿತಿ ಇಲ್ಲ, ಅದು ನಿರ್ವಹಿಸಿದವನಿಗೆ ದಣಿವಿಲ್ಲ, ಅದು ಶಾರೀರಿಕ ಆರೋಗ್ಯವನ್ನು ವೃದ್ದಿಸೂವುದರೊಂಗೆ ಮಾನಸಿಕ ಆರೋಗ್ಯಕ್ಕೆ ಪುಷ್ಟಿ ನೀಡುತ್ತದೆ. ರಕ್ತದ ಏರಿಳಿತ, ಶಾರೀರಿಕ ಪರಿಚಲನೆ ಇತ್ಯಾದಿಗಳನ್ನು ಪರಿಗಣಿಸಿ ಅದಕ್ಕೆ ನಿರ್ದಿಷ್ಟ ಸಮಯವನ್ನು ಸೃಷ್ಟಿಗಳ ಸರ್ವಸ್ವವನ್ನೂ ತಿಳಿದಿರುವ ಸೃಷ್ಟಿದಾತ ನಿರ್ಣಯಿಸಿದ್ದಾನೆ.ವಿಜ್ಞಾನ ಹೇಳುವಂತೆ ಅದರಲ್ಲಿ ಕಣ್ಣಿನಿಂದ ಹಿಡಿದು ರೋಮದ ವರೆಗಿನ ಪ್ರತಿಯೊಂದು ಅಂಗಗಳಿಗೂ ವ್ಯಾಯಾಮವಿದೆ, ಅದರ ಪ್ರಧಾನ ಅಂಗವಾದ ಸುಜೂದ್ ನಿರ್ವಹಿಸುವಾಗ ಬುದ್ದಿಯು ವೃದ್ದಿಯಾಗುತ್ತದೆ. ಅದುವೇ ಮುಸ್ಲಿಮರಿಗೆ ಕಡ್ಡಾಯವಾಗಿರುವ ದಿನಕ್ಕೆ ಐದು ಹೊತ್ತಿನ ನಮಾಝ್. ನಮಗೆ ಅದುವೇ ಸಾಕು. ನಾವು ಅದನ್ನು ವರ್ಷಕ್ಕೆ ಒಂದು ದಿನ ಆಚರಿಸುತ್ತಿಲ್ಲ ಪ್ರತಿ ದಿನ ಐದು ಬಾರಿ ನಿರ್ವಹಿಸುತ್ತಿದ್ದೇವೆ.

ಯೋಗ ಶಿರ್ಕಿನೆಡೆಗೆ ಕೊಂಡೊಯ್ಯತ್ತದೆ ಅದು ಅಸಿಂಧು ಎಂದು ಮಲೇಶ್ಯ ಸರಕಾರ ಈ ಮೊದಲೇ ಅದನ್ನು ನಿರ್ಭಂಧಿಸಿತ್ತು. ಇದೀಗ ಭಾರತದ ಮುಸ್ಲಿಂ ಪರ್ಸನಲ್ ಲಾ ಬೋರ್ಡ್, ಸಮಸ್ತ ಕೇರಳ ಜಂಈಯ್ಯತ್ತುಲ್ ಉಲಮಾ ಕೂಡ ಅದು ಅಸಿಂಧುವೆಂದು ಹೇಳಿದೆ.


Spread the love