ಸೆ. 17ರಂದು ಲೀಲಾ ಬೈಕಾಡಿ ಅವರ ಛಾಯಾಚಿತ್ರ ಪ್ರದರ್ಶನ

ಸೆ. 17ರಂದು ಲೀಲಾ ಬೈಕಾಡಿ ಅವರ ಛಾಯಾಚಿತ್ರ ಪ್ರದರ್ಶನ

ಉಡುಪಿ: ಅಮೆರಿಕೆಯ ಪೆನ್ಸಿಲ್ವೆನಿಯಾದ ಭಾರತೀಯ ಮೂಲನಿವಾಸಿ ಶ್ರೀಮತಿ ಲೀಲಾ ಬೈಕಾಡಿ ಅವರು ತೆಗೆದ ಛಾಯಾಚಿತ್ರಗಳ ಪ್ರದರ್ಶನ `ಗ್ಲಿಂಸಸ್’ ಸೆ. 17ರಂದು ಉಡುಪಿ ಅದಿತಿ ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳಲಿವೆ.

red-bellied-woodpecker-pa

ಕೇವಲ ಪ್ರದರ್ಶನಕ್ಕೆ ಸೀಮಿತವಾಗದ ಈ ಕಾರ್ಯಕ್ರಮದಲ್ಲಿ ಛಾಯಾಚಿತ್ರ ಕಲಾವಿದರ ವಿಶೇಷ ಸ್ಲೈಡ್ ಪ್ರದರ್ಶನವನನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಕಲಾವಿದರೊಂದಿಗೆ ಮುಕ್ತ ಮಾತುಕತೆಯನ್ನೂ ಆಯೋಜಿಸಲಾಗಿದೆ.

ಪ್ರಕೃತಿ ಮತ್ತು ಪ್ರವಾಸೋದ್ಯಮಕ್ಕೆ ಹೆಚ್ಚು ಪ್ರಾಶಸ್ತ್ಯನೀಡಿ ನಿರ್ಮಿಸಲಾಗಿರುವ ಛಾಯಾಚಿತ್ರಗಳು ಈ ವೇಳೆ ಪ್ರದರ್ಶನಗೊಳ್ಳಲಿವೆ. ಉದಯವಾಣಿಯ ವಿಶ್ರಾಂತ ಸಂಪಾದಕರಾದ ಎನ್. ಗುರುರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಸಂವಹನದಲ್ಲಿ ಭಾಗವಹಿಸಲಿದ್ದಾರೆ ಎಂದು ಗ್ಯಾಲರಿಯ ವ್ಯವಸ್ಥಾಪಕ ವಿಶ್ವಸ್ಥರಾದ ಡಾ| ಕಿರಣ್‍ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Please enter your comment!
Please enter your name here