ಹಳಿತಪ್ಪಿದ ತಿರುವನಂತಪುರಂ- ಮಂಗಳೂರು ಎಕ್ಸ್ ಪ್ರೆಸ್ ರೈಲು, ಪ್ರಯಾಣಿಕರು ಸುರಕ್ಷಿತ

ಹಳಿತಪ್ಪಿದ ತಿರುವನಂತಪುರಂ- ಮಂಗಳೂರು ಎಕ್ಸ್ ಪ್ರೆಸ್ ರೈಲು, ಪ್ರಯಾಣಿಕರು ಸುರಕ್ಷಿತ

ತಿರುವನಂತಪುರಂ: ಕೇರಳದ ತಿರುವನಂತಪುರದಿಂದ ಮಂಗಳೂರಿಗೆ ಹೋಗುತ್ತಿದ್ದ ಎಕ್ಸ್ ಪ್ರೆಸ್ ರೈಲೊಂದು ಕರುಕಟ್ಟಿ ನಿಲ್ದಾಣದ ಬಳಿ ರವಿವಾರ ಬೆಳಗ್ಗಿನ ಜಾವ 2.30 ಕ್ಕೆ ಹಳಿತಪ್ಪಿದ್ದು, 12 ಬೋಗಿಗಳು ಮಗುಚಿಬಿದ್ದಿದ್ದು ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.

Thiruvananthapuram-Mangaluru-express-derails-20160828-01 Thiruvananthapuram-Mangaluru-express-derails-20160828

ತೊಂದರೆಗೊಳಗಾದ ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡಲಾಗಿದ್ದು, ಈ ಮಾರ್ಗದಲ್ಲಿ ಸಂಚರಿಸಬೇಕಾದ ಕೆಲವು ರೈಲುಗಳ ಪಥ ಬದಲಿಸಲಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿದೆ.

ತಿರುವನಂತಪುರ-ಮುಂಬೈ, ಕನ್ಯಾಕುಮಾರಿ -ಬೆಂಗಳೂರು, ಅಲಪುಳ-ಧನ್ಪಾದ್, ತಿರುವನಂತಪುರ-ಗೋರಕ್ಪುರ ರಫ್ತಿಸಾರ್, ತಿರುವನಂತಪುರ-ಹೈದರಾಬಾದ್ ಶತಾಬ್ದಿ ಎಕ್ಸ್ ಪ್ರೆಸ್ ರೈಲುಗಳ ಪಥ ಸಂಚಾರವನ್ನು ಬದಲಿಸಲಾಗಿದೆ. ಅಮೃತ ಎಕ್ಸ್ ಪ್ರೆಸ್, ನಿಲಂಬೂರು ರಾಜ್ಯರಾಣಿ ಎಕ್ಸ್ ಪ್ರೆಸ್, ಎಗ್ಮೋರ್ -ಗುರುವಾಯೂರ್ ಎಕ್ಸ್ ಪ್ರೆಸ್ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರೈಲ್ವೆ ಇಲಾಖೆಯ ಸಹಾಯವಾಣಿ ಸಂಖ್ಯೆ 0471-2320012 ಮತ್ತು +919746769960

Leave a Reply

Please enter your comment!
Please enter your name here