ಹಾಸನ ಉಪ ವಿಭಾಗಾಧಿಕಾರಿ ವಿಜಯಾ ಆತ್ಮಹತ್ಯೆಗೆ ಯತ್ನ

ಹಾಸನ ಉಪ ವಿಭಾಗಾಧಿಕಾರಿ ವಿಜಯಾ ಆತ್ಮಹತ್ಯೆಗೆ ಯತ್ನ

ಹಾಸನ: ಇಲ್ಲಿನ ಉಪ ವಿಭಾಗಾಧಿಕಾರಿ ವಿಜಯಾ ಅವರು ಗುರುವಾರ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯಾ ಅವರು ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡಿರುವ ವಿಜಯಾ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

hassan-ac-vijay

‘ಕೆಲಸದ ಒತ್ತಡದಿಂದ ಮಗಳು ಆತ್ಮಹತ್ಯೆಗೆ ಯತ್ನಿಸಿದ್ದಾಳೆ’ ಎಂದು ವಿಜಯಾ ಅವರ ತಾಯಿ ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ.

‘ವಿಜಯಾ ಅವರು ಇಲ್ಲಿನ ಬಿ.ಎಂ ರಸ್ತೆಯಲ್ಲಿರುವ ಪೊಲೀಸ್‌ ವಸತಿ ಸಮುಚ್ಚಯದ ಮನೆಯಲ್ಲಿ ಫ್ಯಾನ್‌ಗೆ ಸೀರೆಯಿಂದ ನೇಣು ಹಾಕಿಕೊಂಡಿದ್ದಾರೆ. ಇದಕ್ಕೂ ಮೊದಲು ವಿಜಯಾ ಅವರು, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶೋಭಾರಾಣಿ ಅವರಿಗೆ ಕರೆ ಮಾಡಿ, ‘ನಾನು ಬದುಕಲ್ಲ. ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಕರೆ ಸ್ಥಗಿತಗೊಳಿಸಿದ್ದಾರೆ. ಆಗ ಪಕ್ಕದ ಮನೆಯಲ್ಲಿಯೇ ಇದ್ದ ಶೋಭಾರಾಣಿ ಅವರು ಅಕ್ಕಪಕ್ಕದವರ ನೆರವು ಪಡೆದು ಬಾಗಿಲು ಮುರಿದು, ವಿಜಯಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ’ ಎಂಬುದಾಗಿ ಡಿವೈಎಸ್‌ಪಿ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ,

ಜೂನ್‌ 22ರಂದು ಹಾಸನದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಡಳಿತಾಧಿಕಾರಿಯಾಗಿ ವಿಜಯಾ ಅವರ ವರ್ಗಾವಣೆಯಾಗಿತ್ತು. ವಿಜಯಾ ಅವರ ಸ್ಥಾನಕ್ಕೆ ಎನ್‌. ನಾಗರಾಜ್‌ ಅವರನ್ನು ನೇಮಕಮಾಡಲಾಗಿತ್ತು. ಎರಡು ದಿನ ಕೆಲಸ ಮಾಡಿದ್ದ ವಿಜಯಾ ಅವರು, ಕೆಐಟಿಯಿಂದ ತಡೆಯಾಜ್ಞೆ ತಂದು ಮತ್ತೆ ಉಪ ವಿಭಾಗಾಧಿಕಾರಿಯಾಗಿ ಮುಂದುವರೆದಿದ್ದರು.

ವಿಜಯಾ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಹಾಗಾಗಿ, ಉಪ ವಿಭಾಗಾಧಿಕಾರಿಯಾಗಿ ಮುಂದುವರೆಯುವುದು ಬೇಡ. ಅವರು ಇಲ್ಲಿಂದ ಹೋಗಲಿ ಎಂದು ಅವರ ವಿರುದ್ಧ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

Leave a Reply