ಹೆಬ್ಬಾವಿನೊಂದಿಗೆ ಹೋರಾಡಿ. ಸೋದರಿ ಜೀವ ಉಳಿಸಿದ ವೈಶಾಖ್‍ಗೆ ಪ್ರಶಸ್ತಿಗೆ ಅಗ್ರಹ

ಹೆಬ್ಬಾವಿನೊಂದಿಗೆ ಹೋರಾಡಿ. ತನ್ನ ಮತ್ತು ಸೋದರಿ ಜೀವ ಉಳಿಸಿದ ವೈಶಾಖ್ಗೆ ಪ್ರಶಸ್ತಿಗೆ ಅಗ್ರಹ

ಮಂಗಳೂರು: ಬಂಟ್ವಾಳ ತಾಲೂಕು ಸಜೀಪದ ಕೊಳಕೆಯ 11 ವರ್ಷದ 5ನೇ ತರಗತಿಯಲ್ಲ ಓದುತ್ತಿರುವ ವೈಶಾಖ್ ಎಂಬ ಬಾಲಕನ ಮೇಲೆ ಹೆಬ್ಬಾವು ಮೇಲೆರಗಿದಾಗ ಹಾವಿನೊಂದಿಗೆ ಹೋರಾಡಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದಲ್ಲದೆ ಅದೇ ದಾರಿಯಲ್ಲಿ ಬರುತ್ತಿದ್ದ ಸೋದರಿ ಹರ್ಷಿತಾ ಅವರಿಗೆ ಹತ್ತಿರ ಬಾರದಂತೆ ಸೂಚಿಸಿ ಆಕೆಯ ಜೀವವನ್ನು ಉಳಿಸಿದ ಈ ಹುಡುಗನ ಧೈರ್ಯ ಮತ್ತು ಸಾಹಸ ಅಸಾಧಾರಣ, ಈತನ ಧೈರ್ಯ ಮತ್ತು ಸಾಹಸ ಇತರ ಹುಡುಗರಿಗೆ ಮಾದರಿ.

 tulu-nada-vdike

ವೈಶಾಖ್ ಗಾಯಾಳುವಾಗಿ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿದ್ದ ವಿಷಯ ತುಳುನಾಡ ರಕ್ಷಣೆಯ ವೇದಿಕೆಯ ಗಮನಕ್ಕೆ ಬಂದಾಗ, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ದಿವಾಕರ್ ರೊಂದಿಗೆ ತುಳುನಾಡ ರಕ್ಷಣಾ ವೇದಿಕೆಯ ಸ್ಫಾಪಕಾದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ಅವರ ನೇತೃತ್ವದ ನಿಯೋಗ ಭೇಟಿ ನೀಡಿ ಶಾಲು ಹೊದಿಸಿ, ಹಾರ ಹಾಕಿ ಗೌರವಿಸಿತು.

ನಂತರ ಮಾತನಾಡಿದ ಯೋಗಿಶ್ ಶೆಟ್ಟಿ  ಜಪ್ಪುರವರು ಈ ಹುಡುಗನ ಸಾಹಸಕ್ಕೆ ಮೆಚ್ಚಿ ರಾಜ್ಯ ಸರಕಾರ ಶೌರ್ಯ ಪ್ರಶಸ್ತಿ ನೀಡಬೇಕೆಂದು ಆಗ್ರಹಿಸಿದರು. ನಿಯೋಗzಲ್ಲಿ ತುಳುನಾಡ ರಕ್ಷಣೆಯ ವೇದಿಕೆಯ ಕೇಂದ್ರಿಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಕೇಂದ್ರಿಯ ಸಂಫುಟನಾ ಕಾರ್ಯದರ್ಶಿ ಆನಂದ್ ಅಮೀನ್ ಅಡ್ಯಾರ್, ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಸಿರಾಜ್ ಅಡ್ಕರೆ, ರಿಕ್ಷಾ ಘಟಕದ ಅಧ್ಯಕ್ಷರಾದ ರಾಜೇಶ್ ಕುತ್ತಾರ್,ದ.ಕ ಜಿಲ್ಲಾ ಸಹ ಕಾರ್ಯದರ್ಶಿ ಹರೀಶ್ ಶೆಟ್ಟಿ ಶಕ್ತಿನಗರ, ನವಾಜ್ ಬಜಾಲ್ ಮತ್ತಿತರರು ಉಪಸ್ಫಿತರಿದ್ದರು.

 

Leave a Reply