ಮಂಗಳೂರು : ಅ.ಭಾ. ವಿ.ಪ ಮಹಾನಗರದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಘೋಷಣೆ

ಮಂಗಳೂರು: ಅ.ಭಾ.ವಿ.ಪ ಮಂಗಳೂರು ಘಟಕ ವತಿಯಿಂದ ಶುಕ್ರವಾರ ಸಂಘನಿಕೇತನದಲ್ಲಿ “ಯುವ ಧ್ವನಿ” ಕಾರ್ಯಕ್ರಮ ಆಯೋಜಿಸಲಾಯಿತು.

ABVP_Mangalore 08-08-2015 20-33-52

ಕಾರ್ಯಕ್ರಮವನ್ನು ಅ.ಭಾ.ವಿ.ಪ.ದ ರಾಜ್ಯ ಉಪಾಧ್ಯಕ್ಷರು ಡಾ|| ರೋಹಿಣಾಕ್ಷ ಶಿರ್ಲಾಲು ಉದ್ಘಾಟಿಸಿದರು. ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯೆ ಕು|| ಚೈತ್ರಾ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿ, “ಅನೇಕ ಕಾರ್ಯಕರ್ತರ ಬಲಿದಾನ ಹಾಗೂ ಸ್ವಾರ್ಥರಹಿತ ಸೇವೆಯಿಂದಾಗಿ ಅ.ಭಾ.ವಿ.ಪ. ಇಂದು ಅತಿದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿ ಬೆಳೆದಿದೆ” ಎಂದರು.

“ವಿದ್ಯಾರ್ಥಿನಿಯರೆಲ್ಲರೂ ಒಂದಾಗಿ ನಿಂತರೆ ಯಾವ ದುಷ್ಟ ಶಕ್ತಿಗೂ ಒಂದು ಜೀವಭಯ ಕಾಡುತ್ತದೆ’. ಎಂದು ಹುರಿದುಂಬಿಸಿದರು. ಪ್ರಧಾನ ಭಾಷಣ ಮಾಡಿದ ಅ.ಭಾ.ವಿ.ಪ. ರಾಜ್ಯ ಉಪಾಧ್ಯಕ್ಷ ಶ್ರೀ ರೋಹಿಣಾಕ್ಷ ಶಿರ್ಲಾಲುರವರು “ದೇಶದ ಯುವ ಜನತೆಯ ಮೇಲೆ ದೇಶ ಭರವಸೆಯಿಟ್ಟಿದೆ ಆದ್ದರಿಂದ ಯುವ ಜನತೆ ರಾಷ್ಟ್ರ ಚಿಂತನೆಯನ್ನು ಬೆಳೆಸಿಕೊಂಡು, ರಚನಾತ್ಮಕ ಕಾರ್ಯಗಳಲ್ಲಿ ತೊಡಗಿ ದೇಶದ ಅಭಿವೃದ್ಧಿಯಲ್ಲಿ ತಮ್ಮದೇ ಕೊಡುಗೆ ನೀಡಬೇಕು” ಎಂದರು.

ಇದೇ ಸಂದರ್ಭದಲ್ಲಿ ಮಂಗಳೂರು ಮಹಾನಗರದ ನೂತನ  ಅ.ಭಾ.ವಿ.ಪ ಕಾರ್ಯಾಕಾರಿಣಿ ಹಾಗೂ ಮಂಗಳೂರು ನಗರ ದಕ್ಷಿಣ ಹಾಗೂ ಮಂಗಳೂರು ಉತ್ತರದ ನೂತನ ಕಾರ್ಯಕಾರಿಣಿ ಘೋಷಿಸಲಾಯಿತು. ಮಂಗಳೂರು ಮಹಾನಗರದ ಅಧ್ಯಕ್ಷರಾಗಿ ಶ್ರೀಮತಿ ಆಶಾಲತ ಇವರು ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ಉಪನ್ಯಾಸಕರು, ಮಂಗಳೂರು ಮಹಾನಗರದ ಕಾರ್ಯದರ್ಶಿಯಾಗಿ ಎಸ್.ಡಿ.ಎಮ್. ಕಾಲೇಜಿನ ಹಿತೇಶ್ ಬೇಕಲ್, ಮಂಗಳೂರು ನಗರ ದಕ್ಷಿಣ ವಲಯದ ಕಾರ್ಯದರ್ಶಿಯಾಗಿ ಕೆ.ಪಿ.ಟಿ. ಕಾಲೇಜಿನ ಅಲೋಕಿತ್ ಶೆಟ್ಟಿ ಹಾಗೂ ಮಂಗಳೂರು ನಗರ ಉತ್ತರ ವಲಯದ ಕಾರ್ಯದರ್ಶಿಯಾಗಿ ವಿ.ವಿ. ಕಾಲೇಜಿನ ಚೈತನ್ಯ ಇವರನ್ನು ಘೋಷಿಸಲಾಯಿತು.

Leave a Reply

Please enter your comment!
Please enter your name here