ಅಂಗನವಾಡಿಗಳ ಸದ್ಬಳಕೆಯಾಗಲಿ- ಪ್ರಮೋದ್ ಮಧ್ವರಾಜ್

Spread the love

ಅಂಗನವಾಡಿಗಳ ಸದ್ಬಳಕೆಯಾಗಲಿ- ಪ್ರಮೋದ್ ಮಧ್ವರಾಜ್

ಉಡುಪಿ: ದೇಶದ ಉತ್ತಮ ಭವಿಷ್ಯದ ದೃಷ್ಟಿಯಲ್ಲಿ ಮಕ್ಕಳಿಗಾಗಿ ಸರ್ಕಾರ ಉಚಿತವಾಗಿ ಎಲ್ಲ ಸೌಲಭ್ಯಗಳನ್ನು ನೀಡುತ್ತಿದ್ದು, ಇದರ ಸದ್ಬಳಕೆಯಾಗಬೇಕೆಂದು ರಾಜ್ಯ ಮೀನುಗಾರಿಕೆ, ಯುವಜನಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಡುಪಿ ಶಿಶು ಅಭಿವೃದ್ಧಿ ಯೋಜನೆಯ ವತಿಯಿಂದ ಆರಂಭಿಸಲಾದ ಪಡುನಿಟ್ಟೂರು ಅಂಗನವಾಡಿ ಕೇಂದ್ರವನ್ನು ಮಂಗಳವಾರ ನಿಟ್ಟೂರು ಯುವಕ ಮಂಡಲದ ರಂಗಮಂದಿರದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.

minister-prog

ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳು ಹಾಗೂ ಗರ್ಭಿಣಿಯರಿಗೆ ಉಚಿತ ಆಹಾರಗಳನ್ನು ಒದಗಿಸಲಾಗುತ್ತಿದೆ. ಮಹಿಳೆ ಮತ್ತು ಮಕ್ಕಳ ಹಿತವನ್ನು ಗಮನದಲ್ಲಿರಿಸಿ ರೂಪಿಸಲಾಗಿರುವ ಈ ಯೋಜನೆಯ ಸದ್ಬಳಕೆ ಪ್ರತಿಯೊಬ್ಬರ ಕರ್ತವ್ಯ.

ತಕ್ಷಣದ ಅವಶ್ಯಕತೆಗೆ ಪೂರಕವಾಗಿ ತಾತ್ಕಾಲಿಕವಾಗಿ ಯುವಕ ಮಂಡಲದ ಕಟ್ಟಡದಲ್ಲಿ ಆರಂಭಗೊಂಡಿರುವ ಈ ಅಂಗನವಾಡಿ ಕೇಂದ್ರಕ್ಕೆ ಹೊಸ ಕಟ್ಟಡ ನಿರ್ಮಿಸಿ ಕೊಡಲಾಗುವುದು. ಸದ್ಯಕ್ಕೆ ಈ ಕೇಂದ್ರದಲ್ಲಿ 25 ಮಕ್ಕಳು ಸೇರ್ಪಡೆಗೊಂಡಿದ್ದಾg ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯೆ ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಯುವಕ ಮಂಡಲದ ಅಧ್ಯಕ್ಷಆನಂದಜತ್ತನ್ನ, ಸ್ಥಾಪಕಾಧ್ಯಕ್ಷ ಸಂಜೀವಜತ್ತನ್ನ, ಮಾಜಿಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕಾಂಗ್ರೆಸ್ ಹಿಂದುಳಿದವರ್ಗದ ಘಟಕದಅಧ್ಯಕ್ಷ ಸುಜಯ್ ಪೂಜಾರಿ ಉಪಸ್ಥಿತರಿದ್ದರು. ಶಿಶು ಅಭಿವೃದ್ಧಿಅಧಿಕಾರಿ ವೀಣಾ ವಿವೇಕಾನಂದ ಸ್ವಾಗತಿಸಿದರು. ಮೇಲ್ವಿಚಾರಕಿ ಸಂಗೀತಕಾರ್ಯಕ್ರಮ ನಿರೂಪಿಸಿದರು.


Spread the love