ಅಂತರಾಜ್ಯ ಕಳ್ಳನ ಬಂಧನ

Spread the love

ಅಂತರಾಜ್ಯ ಕಳ್ಳನ ಬಂಧನ

ಮಂಗಳೂರು: ಡಿಸೆಂಬರ್ 16 ರಂದು ಬೆಳಿಗ್ಗೆ ಕೋಣಾಜೆ ಪೋಲಿಸ್ ಠಾಣಾ ವ್ಯಾಪ್ತಿಯ ಮುಡಿಪು ಸಮೀಪ ವಾಹನ ತಪಾಸಣೆ ಮಾಡುತ್ತಿದ್ದಾಗ ಅನುಮಾಸ್ಪದವಾಗಿ ಕಂಡು ಬಂದ ಮೋಟಾರ್ ಸೈಕಲನ್ನು ನಿಲ್ಲಿಸಿ ಅದರ ಸವಾರನ್ನು ತಪಾಸಣೆ ಮಾಡಿದಾಗ ಪುತ್ತೂರಿನಲ್ಲಿ ಕಳವು ಮಾಡಿದ್ದು, ಬೈಕಿನ ನಂಬರ್ ಬದಲಾಯಿಸಿ ಅಡ್ಡಾಡುತ್ತಿದ್ದು, ಈತನನ್ನು ವಿಚಾರಿಸಿದಾಗ ಈತನು ಈ ಹಿಂದೆ ಕೇರಳ ಕಾಸರಗೋಟು, ಮಂಜೇಶ್ವರ, ಬೇಕಲ, ಬದಿಯಡ್ಕ ಮುಂತಾದ ಕಡೆಗಳಲ್ಲಿ ಸುಲಿಗೆ, ಕಳ್ಳತನಕ್ಕೆ ಸಂಬಂಧಿಸಿದ ಪ್ರಕರಣಗಳ ಆರೋಪಿಯಾಗಿ ಒಂದು ಪ್ರಕರಣದಲ್ಲಿ ಸಜೆಯಾಗಿದ್ದು, ಪ್ರಕರಣವೊಂದರಲ್ಲಿ ವಾರಂಟ್ ಆಗಿ ತಲೆ ಮರೆಸಿಕೊಂಡಿರುತ್ತಾನೆ. ಈತನನ್ನು ವಿಚಾರಣೆ ನಡೆಸಿದಾಗ ಈತನು ತನ್ನ ಸಹಚರರೊಂದಿಗೆ ಸೇರಿಕೊಂಡು ಕೋಣಾಜೆ ಪುತ್ತೂರು, ಬಂಟ್ವಾಳ ಗ್ರಾಮಾಂತ ಪೋಲಿಸ್ ಠಾಣಾ ವ್ಯಾಪ್ತಿಗಳಿಲ್ಲಿ ನಡೆಸಿದ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ.

ಬಂಧಿತನನ್ನು ವರ್ಕಾಡಿ ಪಾವೂರಿನ ಗೇರುಕಟ್ಟೆಯ ಅಬ್ದುಲ್ ಸಲೀಮ್ (40) ಎಂದು ಗುರುತಿಸಲಾಗಿದೆ.

ಕಿನ್ಯಾ ಉಕ್ಕುಡ ಎಂಬಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಓಮ್ನಿ ಕಾರು ಕಳ್ಳತನ, ಮಂಜನಾಡಿ ಗ್ರಾಮದ ಕಲ್ಕಟ್ಟ ಎಂಬಲ್ಲಿ ಮಹಮ್ಮದ್ ನಾಸಿರ್ ಎಂಬವರ ಅಡಿಕೆ ಖರೀದಿ ಅಂಗಡಿಯಿಂದ 8 ಗೋಣಿ ಚೀಲ ಅಡಿಕೆ ಕಳವು, ಬಂಟ್ವಾಳ ತಾಲೂಕಿನ ಮಂಚಿ ಎಂಬಲ್ಲಿ ಅಡಿಕೆ ಕಳ್ಳತನ, ಪುತ್ತೂರು ಪೇಟೆಯಲ್ಲಿ ಬೈಕ್ ಹಾಗೂ ಬುಲೆಟ್ ಕಳ್ಳತನ, ಮಂಜೇಶ್ವರ ಪಾತೂರಿನಲ್ಲಿ ಮಗುವಿನ ಕಾಲು ಚೈನ್ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ.

ಆರೋಪಿಯ ವಶದಿಂದ ಸುಲಿಗೆ ಮಾಡಿದ ಚಿನ್ನದ ಸರ, ಕಳವು ಮಾಡಿದ ಬೈಕ್, ಓಮ್ನಿ ಕಾರು, ಕಳವು ಮಾಡಿದ ಅಡಿಕೆಯನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ. ಇದರ ಒಟ್ಟು ಮೌಲ್ಯ ರೂ 3 ಲಕ್ಷ ಆಗಬಹುದು.

ಆರೋಪಿಯು ಮಂಜೇಶ್ವರದ ಒಂದು ಪ್ರಕರಣದಲ್ಲಿ 6 ತಿಂಗಳು ಶಿಕ್ಷೆಗೆ ಒಳಪಟ್ಟು ನಂತರ ತಲೆ ಮರೆಸಿಕೊಂಡಿರುತ್ತಾನೆ. ಈತನಿಗೆ ಸಹಕರಿಸಿದ ಆರೋಪಿತನ ದಸ್ತಗಿರಿಗೆ ಬಾಕಿ ಇದ್ದು, ತನಿಖೆ ಮುಂದುವರೆದಿದೆ.

 


Spread the love

1 Comment

Comments are closed.