ಅಕ್ಟೋಬರ್ 29ರಂದು ‘ನಂದಗೋಕುಲ’ತಂಡದಿಂದ ‘ಗೋಕುಲ ನಿರ್ಗಮನ’

Spread the love

ಅಕ್ಟೋಬರ್ 29ರಂದು ‘ನಂದಗೋಕುಲ’ತಂಡದಿಂದ ‘ಗೋಕುಲ ನಿರ್ಗಮನ’

ಅರೆಹೊಳೆ ಪ್ರತಿಷ್ಠಾನದ ‘ನಂದಗೋಕುಲ’ ತಂಡದಿಂದ ಪುತಿನರಸಿಂಹಾಚಾರ್ ಅವರ ಮೇರು ಕೃತಿ ‘ಗೋಕುಲ ನಿರ್ಗಮನ’ ನೃತ್ಯ ನಾಟಕ ಲೋಕಾರ್ಪಣೆ ಹಾಗೂ ಪ್ರಥಮ ಪ್ರದರ್ಶನ ಇದೇ ಅಕ್ಟೋಬರ್ 29ರಂದು ಸಂಜೆ 6.30ಕ್ಕೆ ನಗರದ ಬಾವುಟಗುಡ್ಡೆಯ ಸಂತ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ, ಸಂತ ಅಲೋಶಿಯಸ್ ಕಾಲೇಜು ನಾಟಕ ಸಂಘದ ಜಂಟಿ ಆಶ್ರಯದಲ್ಲಿ ನಡೆಯಲಿದೆ.

ನಾಟಕದ ಹಿನ್ನೆಲೆ:- ಗೋಕುಲದಲ್ಲಿ ಗೋಪಾಲಕರೊಡನೆ ಮುರಳೀನಾದ ತಲ್ಲೀನವಾಗಿರುವಶ್ರೀ ಕೃಷ್ಣ, ಕಂಸದೂತ ಅಕ್ರೂರನ ಕರೆಗೆ ಓಗೊಟ್ಟು, ಅಣ್ಣ ಬಲರಾಮನ ಆಗ್ರಹದ ಮೇರೆಗೆ ಗೋಕುಲವನ್ನು ಬಿಟ್ಟು ತೆರಳುವ ಸನ್ನಿವೇಶ. ರಾಧೆಯ ಒಲವನ್ನು ಅನುಭವಿಸುತ್ತಾ, ಗೋಪ ಬಾಲ ಬಾಲೆಯರೊಡನೆ ಮುರಳೀನಾದ ಗೈಯುತ್ತಾ, ತನ್ನ ಕೊಳಲನ್ನು ಪ್ರಾಣದಂತೆ ಪ್ರೀತಿಸುವ ಕೃಷ್ಣ,ರಾಧೆ ಮತ್ತು ಕೊಳಲನ್ನು ತೊರೆದು ಹೊರಡುವ ಕೊನೆಯರಾತ್ರಿಯ ಹೃದಯಸ್ಪರ್ಷಿಸನ್ನಿವೇಶವನ್ನು ಈ ನೃತ್ಯ ನಾಟಕಒಳಗೊಂಡಿದೆ. ಕೃಷ್ಣ ತನಗೆದಕ್ಕಿಯಾನೇ ಎಂಬ ರಾಧೆಯ ತಳಮಳ, ತನ್ನಜೀವದಂತಿರುವ ಕೊಳಲನ್ನುಕೃಷ್ಣ ತೊರೆಯುವ ಮೂಲಕ ಒಂದುಯುಗವೇ ಬದಲಾದಂತೆಘಟಿಸುವ ಘಟನಾವಳಿಗಳು, ಈ ನಾಟಕದಲ್ಲಿ ವ್ಯಕ್ತವಾಗುತ್ತದೆ. ಹೀಗೆ ಕೊಳಲು ಎಸೆದು, ರಾಧೆಯನ್ನುತೊರೆದು, ಗೋಕುಲವನ್ನೂ ಬಿಟ್ಟುಮಧುರೆಗೆಹೊರಡುವ ಕೃಷ್ಣ ಮುಂದೆಂದೂ ಮುರಳೀಧರನಾಗುವುದಿಲ್ಲ. ಅವನ ಪಾಂಚಜನ್ಯವೇ ನಾಡತುಂಬಾ ಮೊಳಗುತ್ತದೆ. ಹೀಗೆ ನಂದಕುಮಾರ ಶ್ರೀ ಕೃಷ್ಣ ವಾಸುದೇವನಾಗುವಒಂದುರಾತ್ರಿಯ ಘಟನಾವಳಿಗಳೇ ‘ಗೋಕುಲ ನಿರ್ಗಮನ’.

ನಂದಗೋಕುಲ ತಂಡ:-30ಕ್ಕೂ ಮಿಕ್ಕಿ ವಿವಿಧ ವಯೋಮಾನದ ವಿದ್ಯಾರ್ಥಿನಿಯರು/ಮಹಿಳೆಯರು ಇರುವ ನಂದಗೋಕುಲ ತಂಡದಕಲಾವಿದೆಯರುಈ ನೃತ್ಯ ನಾಟಕ ಪ್ರಸ್ತುತಪಡಿಸುತ್ತಿದ್ದು, ನಾಟಕಕ್ಕೆ ವಿದ್ದುಉಚಿಲ್ ನಿರ್ದೇಶನವಿದೆ. ಯುವ ಸಂಗೀತಕಲಾವಿದ ಶೋಧನ್ ಎರ್ಮಾಳ್ ಸಂಗೀತ ನೀಡಿದ್ದು ದಿವಾಕರ್‍ಕಟೀಲ್ ಸಾಂಗತ್ಯವಿದೆ. ಪ್ರವೀಣ್ ಜಿ ಕೊಡವೂರು ಬೆಳಕು ಹಾಗೂ ಶಿವರಾಮ ಕಲ್ಮಡ್ಕ ಪ್ರಸಾಧನ ಮತ್ತುಗೀತಾ ಅರೆಹೊಳೆ ವಸ್ತ್ರ ವಿನ್ಯಾಸ ಮಾಡಿದ್ದಾರೆ.ಅರೆಹೊಳೆ ಪ್ರತಿಷ್ಠಾನ ಈ ನಾಟಕದ ನಿರ್ಮಾಣ-ನಿರ್ವಹಣೆ ಮಾಡುತ್ತಿದೆ.

ಲೋಕಾರ್ಪಣೆ:-ನಾಟಕದ ಲೋಕಾರ್ಪಣೆಕಾರ್ಯಕ್ರಮದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು, ಖ್ಯಾತ ನೃತ್ಯ ನಿರ್ದೇಶಕಿ ವಿದ್ಯಾಶ್ರೀ ರಾಧಾಕೃಷ್ಣ, ಸಂತ ಅಲೋಶೀಯಸ್ ಕಾಲೇಜು ಪ್ರಿನ್ಸಿಪಾಲ್‍ರೆ.ಫಾ.ಪ್ರವೀನ್ ಮಾರ್ಟಿಸ್‍ಎಸ್‍ಜೆ ಹಾಗೂ ಹವ್ಯಾಸಿ ಯಕ್ಷಗಾನಕಲಾವಿದರಘುರಾಮ ಮುಳಿಯ ಉಪಸ್ಥಿತರಿರಲಿದ್ದಾರೆ. ಉಚಿತ ಪ್ರವೇಶವಿದೆಎಂದು ಅರೆಹೊಳೆ ಸದಾಶಿವ ರಾವ್ ತಿಳಿಸಿದ್ದಾರೆ.


Spread the love