ಅಕ್ರಮ ಮರಳು ಸಾಗಾಟ, ಮೂರು ಲಾರಿಗಳ ವಶ

Spread the love

ಅಕ್ರಮ ಮರಳು ಸಾಗಾಟ, ಮೂರು ಲಾರಿಗಳ ವಶ

ಮಂಗಳೂರು: ಲಾರಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಸಾಮಾನ್ಯ ಮರಳನ್ನು ಅಕ್ರಮ ಸಾಗಾಟ ಮಾಡುತ್ತಿದ್ದ ಲಾರಿಯನ್ನು ವಶಪಡಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಲಾರಿ ಚಾಲಕರಾದ ಅಬ್ದುಲ್‌ ರಜಾಕ್‌, ಅಬ್ಬುಬಕ್ಕರ್‌ ಸಿದ್ದಿಕ್‌, ಮೊಹಮ್ಮದ್‌ ಇರ್ಷಾದ್‌ ಮತ್ತು ನೌಷದ್‌ ಎಂದು ಗುರುತಿಸಲಾಗಿದೆ,

ಸೋಮವಾರ ಉಳ್ಳಾಲ ಪೊಲೀಲ್ ಠಾಣಾ ಪೊಲೀಸ್ ಉಪ ನಿರೀಕ್ಷಕರು ತಲಪಾಡಿ ಗ್ರಾಮದ ತಲಪಾಡಿ ಟೋಲ್‌ಗೇಟ್‌ ಬಳಿ ವಾಹನ ತಪಾಸಣೆ ಮಾಡುತ್ತಿರುವ ಸಮಯ ತೊಕ್ಕೊಟ್ಟು ಕಡೆಯಿಂದ ತಲಪಾಡಿ ಕಡೆಗೆ ಬರುತ್ತಿದ್ದ ಕೆಎ 19 ಎಎ 1764, ಕೆಎ 19 ಬಿ 5610, ಮತ್ತು ಕೆಎ 12 ಇ 3241 ನಂಬ್ರೆದ ಲಾರಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಸಾಮಾನ್ಯ ಮರಳನ್ನು ಅಕ್ರಮ ಸಾಗಾಟ ಮಾಡುತ್ತಿದ್ದಾಗ ಪತ್ತೆ ಹಚ್ಚಿದ್ದು, ಲಾರಿ ಚಾಲಕರಾದ ಅಬ್ದುಲ್‌ ರಜಾಕ್‌, ಅಬ್ಬುಬಕ್ಕರ್‌ ಸಿದ್ದಿಕ್‌, ಮೊಹಮ್ಮದ್‌ ಇರ್ಷಾದ್‌ ಮತ್ತು ನೌಷದ್‌ ಇವರುಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಲಾರಿ ಚಾಲಕ, ಮಾಲಕ, ಕ್ಲೀನರ್‌ ರವ ರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದು, ಸ್ವಾಧೀನಪಡಿಸಿಕೊಂಡಿರುವ 3 ಲಾರಿಗಳ ಅಂದಾಜು ಮೌಲ್ಯ ರೂ 9 ಲಕ್ಷ ಹಾಗೂ 3 ಲಾರಿಗಳಲ್ಲಿ ತುಂಬಿಸಿದ್ದ ಸಾಮಾನ್ಯ ಮರಳಿನ ಅಂದಾಜು ಮೌಲ್ಯ ರೂ 7,500/- ಆಗಿರುತ್ತದೆ. ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


Spread the love