ಅಕ್ರಮ ಸಂಬಂಧದ ಆರೋಪ ; ಪತಿಯಿಂದ ಪತ್ನಿಯ ಕೊಲೆ

Spread the love

ಅಕ್ರಮ ಸಂಬಂಧದ ಆರೋಪ ; ಪತಿಯಿಂದ ಪತ್ನಿಯ ಕೊಲೆ
ಮಂಗಳೂರು: ಮಹಿಳೆಯೋರ್ವರನ್ನು ಸ್ವತಃ ಪತಿಯೇ ಕೊಲೆ ಮಾಡಿದ ಘಟನೆ ನಗರದ ಕೊಟ್ಟಾರ ಚೌಕಿ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ಮೃತ ಮಹಿಳೆಯನ್ನು ಕೊಟ್ಟಾರಚೌಕಿ ಜೆ.ಬಿ.ಲೋಬೊ ರಸ್ತೆ ನಿವಾಸಿ ಬ್ಲಾಸಮ್ ಲೋಬೊ (31) ಎಂದು ಗುರುತಿಸಲಾಗಿದೆ.
ಪೋಲಿಸ್ ಮೂಲಗಳ ಪ್ರಕಾರ ಬ್ಲಾಸಮ್ ಅವರನ್ನು ಆಕೆಯ ಪತಿ ವಿಲ್ಯಮ್ ಲೋಬೊ ಶುಕ್ರವಾರ ರಾತ್ರಿ 9-10 ಗಂಟೆಯ ಮಧ್ಯದಲ್ಲಿ ಕೊಲೆಗೈದಿದ್ದು, ಮಹಿಳೆಯ ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎನ್ನಲಾಗಿದೆ.
ಆರೋಪಿ ವಿಲ್ಯಮ್ ಲೋಬೊನನ್ನು ಉರ್ವಾ ಪೋಲಿಸರು ಬಂಧಿಸಿದ್ದು, ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love