ಅಪಾಯದಂಚಿನಲ್ಲಿ ಗಾಂಧಿ ಮಾದರಿ ಹಿ.ಪ್ರಾ,ಶಾಲೆ :ದುರಸ್ಥಿಗೆ ಎಸ್ ಐ ಒ ಉಡುಪಿ ಮನವಿ

Spread the love

ಅಪಾಯದಂಚಿನಲ್ಲಿ ಗಾಂಧಿ ಮಾದರಿ ಹಿ.ಪ್ರಾ,ಶಾಲೆ :ದುರಸ್ಥಿಗೆ ಎಸ್ ಐ ಒ ಉಡುಪಿ ಮನವಿ

ಉಡುಪಿ: ದಾನಿ ಹಾಜಿ ಅಬ್ದುಲ್ಲಾ ಸ್ಮಾರಕ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಖಾಸಗೀಕರಣಕ್ಕೆ ವ್ಯಕ್ತವಾದ ವಿರೋಧದ ನಡುವೆಯು ಕಾಮಗಾರಿ ಆರಂಭವಾಗಿದ್ದು,ಪಕ್ಕದಲ್ಲಿ ಕಾರ್ಯಚರಿಸುತ್ತಿರುವ ಸರಕಾರಿ ಮಹಾತ್ಮ ಗಾಂಧಿ ಮಾದರಿ ಹಿ.ಪ್ರಾ,ಶಾಲೆಯ ಕಟ್ಟಡ ಬಿರುಕು ಬಿಟ್ಟಿದೆ.

ಹೊಸ ಕಟ್ಟಡ ಕಾಮಗಾರಿ ಆರಂಭವಾದಗಿನಿಂದ ಶಾಲಾ ಕಟ್ಟಡದಲ್ಲಿ ಪದೇ ಪದೇ ಕಂಪನವಾಗುತ್ತಿರುವುದರಿಂದ ಶಾಲಾಗೋಡೆಯ ಹಲವು ಕಡೆಗಳಲ್ಲಿ ಬಿರುಕು ಬಿಟ್ಟಿರುತ್ತದೆ ಹಾಗು ಶಾಲೆಯ ಹಲವಾರು ಹೆಂಚುಗಳು ಕಾರ್ಯಾಚರಣೆಯ ರಭಸಕ್ಕೆ ಕೆಳಗೆ ಜಾರಿ ಬಿದ್ದಿರುತ್ತದೆ.

ಶಾಲೆಯು ಸರಿ ಸುಮಾರು 130 ವರುಷ ಹಳೆಯದಾಗಿದ್ದು, ಮಣ್ಣಿನ ಗೋಡೆಯಾಗಿರುವ ಕಾರಣ ಕುಸಿಯುವ ಭೀತಿಯುಂಟಾಗಿದೆ.ಈ ಶಾಲೆಯಲ್ಲಿ 70 ವಿಧ್ಯಾರ್ಥಿಗಳು ವಿಧ್ಯಾಭ್ಯಾಸಮಾಡುತಿದ್ದು ಆಸ್ಪತ್ರೆಯ ಕಾಮಗಾರಿಯಿಂದಾಗಿ ಮಕ್ಕಳ ಪ್ರಾಣ ಆಪಾಯದಲ್ಲಿದೆ. ಸುರಕ್ಷಿತ ಮುಂಜಾಗ್ರತ ಕ್ರಮ ತೆಗೆದು ಕೊಳ್ಳದೆ ಬ್ರಹತ್ ಕಂಪ್ರಸರ್ ಯಂತ್ರಗಳನ್ನು ಬಳಸಿಕೊಂಡು ಕಾಮಗಾರಿಯನ್ನು ನಡೆಸುತ್ತಿರುವುದೇ ಇದಕ್ಕೆ ಮುಖ್ಯ ಕಾರಣ.ಈ ಕೂಡಲೇ ಸಂಭದಪಟ್ಟ ಇಲಾಖೆಗಳು ಸೂಕ್ತಕ್ರಮ ಕೈ ಗೊಳ್ಳದಿದ್ದಲ್ಲಿ ಅವಗಢ ಸಂಭವಿಸುವ ಸಾಧ್ಯತೆ ಇದೆ.

ಸದ್ರಿ ಸರ್ವೆ ನಂ.129 1ಬಿ /5 15 ಸೆಂಟ್ಸ್ ಜಾಗದಲ್ಲಿ ಈ ಪ್ರಾಥಮಿಕ ಶಾಲೆಯು ಆವರಿಸಿಕೊಂಡಿದೆ,ಉಳಿದಂತೆ ಶಿಕ್ಷಣ ಹಕ್ಕು ಕಾಯ್ದೆ ಆಡಿಯಲ್ಲಿ ಪ್ರತೀ ಶಾಲೆಯು ಆಟದ ಮೈದಾನವನ್ನು ಹೊಂದಿರುವುದು ಕಡ್ದಾಯವಾಗಿದೆ.ಆದರೆ ಸದ್ರಿ ಸಂಸ್ಠೆಯು ಸರಕಾರಿ ಶಾಲೆಯಾಗಿದ್ದರು ಕೂಡ ಆಟದ ಮೈದಾನ ಇಲ್ಲದೇ ಶಿಕ್ಷಣ ಹಕ್ಕು ಕಾಯ್ದೆಯ ನಿಯಮವನ್ನು ಸಂಪೂರ್ಣವಾಗಿ ಉಲ್ಲಂಘಿಸಿರುತ್ತದೆ. ಆದ್ದರಿಂದ ಈ ಕೂಡಲೇ ಹಳೆಯ ಕಟ್ಟಡವನ್ನು ನವೀಕರಿಸುವುದರೊಂದಿಗೆ, ಶಿಕ್ಷಣ ಹಕ್ಕು ಕಾಯ್ದೆಯ ನಿಯಮದಂತೆ ಸದ್ರಿ ಶಾಲೆಗೆ ಆಟದ ಮೈದಾನ ವನ್ನು ಕಲ್ಪಿಸಿ ಕೊಡಬೇಕಾಗಿದೆ.

ಶಾಲೆಯ ಮುಖ್ಯ ಶಿಕ್ಷಕರೊಬ್ಬರ ಮಾಹಿತಿಯ ಪ್ರಕಾರ ಬಿ ಆರ್ ವೆಂಚರ್ಸ್  ಆಸ್ಪತ್ರೆ ನಿರ್ಮಿಸುತ್ತಿರುವ ಸರಕಾರಿ ಜಾಗದಲ್ಲಿ ಈ ಹಿಂದೆ ಆಟದ ಮೈದಾನವಿದ್ದು ವಿಧ್ಯಾರ್ಥಿಗಳು ಆಟವಾಡುತ್ತಿದ್ದರು. ಆದ್ದರಿಂದ ಸರಕಾರ ಕೂಡಲೇ ಖಾಸಗಿ ಕಂಪನಿಯ ಕಾಮಗಾರಿಯನ್ನು ನಿಲ್ಲಿಸಿ ಆ ಜಾಗದಲ್ಲಿ ಸದ್ರಿ ಶಾಲೆಯ ಮಕ್ಕಳಿಗೆ ಆಟದ ಮೈದಾನ ಕಲ್ಪಿಸಬೇಕೆಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆ¥sóï ಇಂಡಿಯಾ ಉಡಪಿ ಜಿಲ್ಲಾ ಘಟಕ ವತಿಯಿಂದ ಜಿಲ್ಲಾ ಶಿಕ್ಷಣ ಉಪ ನಿರ್ದೇಷಕರಿಗೆ ಹಾಗು ಕ್ಷೇತ್ರ ಶಿಕ್ಷಣ ಅಧಿಕಾರಿ ಉಡುಪಿ ಇವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಎಸ್ ಐ ಒ ಉಡುಪಿ ಜಿಲ್ಲಾಧ್ಯಕ್ಷರಾದ ಜಿ ಶುಐಬ್ ಮಲ್ಪೆ,ಶಾರುಕ್ ತೀರ್ಥಹಳ್ಳಿ,ಬಿಲಾಲ್ ಮಲ್ಪೆ, ಯಾಸೀನ್ ಕೋಡಿಬೇಂಗ್ರೆ ಉಪಸ್ಥಿತರಿದ್ದರು.


Spread the love