ಅಪೂರ್ವ ಜುವೆಲರಿ ಕಳ್ಳತನದ ಆರೋಪಿ ಬಂಧನ

ಅಪೂರ್ವ ಜುವೆಲರಿ ಕಳ್ಳತನದ ಆರೋಪಿ ಬಂಧನ

ಬಂಟ್ವಾಳ: ಅಪೂರ್ವ ಜುವೆಲರ್ಸ್ ಬಿಸಿ ರೋಡ್ ಇದರ ಕಳ್ಳತನಕ್ಕೆ ಸಂಬಂಧಿಸಿ ಬಂಟ್ವಾಳ ಪೋಲಿಸರು ಒರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು ಪಶ್ಚಿಮ ಬಂಗಾಳ ರಾಜ್ಯ ಹೂಗ್ಲಿ ಜಿಲ್ಲೆಯ ಪಿಂಟೊ ರಾವತ್ ಎಂದು ಗುರುತಿಸಲಾಗಿದೆ.

Pintu-Ravath-01

Pintu-Ravath

ಪಿಂಟೊ ರಾವತ್ ಅಪೂರ್ವ ಜುವೆಲರ್ಸ್ ಇದರಲ್ಲಿ ಅಕ್ಕಸಾಲಿಗನಾಗಿದ್ದು, ಜೂನ್ 6 ರಂದು ಸಂಜೆ ಕೆಲಸದ ಮಧ್ಯೆ ಚಹ ಕುಡಿದು ಬರುವುದಾಗಿ ತೆರಳಿದ್ದು ವಾಪಾಸಾಗಿರಲಿಲ್ಲ. ಬಳಿಕ ಅಂಗಡಿಯಲ್ಲಿ ಚಿನ್ನಾಭರಣಗಳ ಕುರಿತು ಪರಿಶೀಲಿಸಿದಾಗ ಸುಮಾರು 274 ಗ್ರಾಂ ತೂಕದ ಚಿನ್ನಾಭರಣಗಳು ಕಳವು ಮಾಡಿರುವುದು ಗಮನಕ್ಕೆ ಬಂದಿದ್ದು, ಈ ಕುರಿತು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪಿಂಟೊ ರಾವತ್ ಹುಡುಕಾಟ ನಡೆಸಿ ಪಶ್ಚಿಮ ಬಂಗಾಳದ ಪೋಲಿಸರ ಸಹಾಯ ಪಡೆದು  ಆತನ ಮನೆಯಿಂದ ಪೋಲಿಸರು ಬಂಧಿಸಿದ್ದಾರೆ. ಬಂಧಿತನಿಂದ ಕಳವುಗೈದ ಚಿನ್ನಾಭರಣಗಳ ಪೈಕಿ ಸುಮಾರು 5 ಲಕ್ಷ ರೂ ಮೌಲ್ಯದ 229 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದ ತನಿಖೆಯು ಬಂಟ್ವಾಳ ಉಪನಿರೀಕ್ಷಕರಾದ ಸಂಜೀವ ಕೇ ನೇತೃತ್ವದಲ್ಲಿ ಜರುಗಿದ್ದು ಪೋಲಿಸರ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

Leave a Reply