ಆರ್‍ಸೆಟಿಗಳ ರಾಷ್ಟ್ರೀಯ ನಿರ್ವಹಣಾ ಘಟಕದ ನೂತನ ಕಟ್ಟಡದ ಉದ್ಘಾಟನೆ

Spread the love

ಧರ್ಮಸ್ಥಳ: ಆರ್‍ಸೆಟಿಗಳ ರಾಷ್ಟ್ರೀಯ ನಿರ್ವಹಣಾ ಘಟಕದ ನೂತನ ಕಟ್ಟಡವನ್ನು ರಾಷ್ಟ್ರೀಯ ರುಡ್‍ಸೆಟ್ ಅಕಾಡೆಮಿಯ ಗೌರವಾಧ್ಯಕ್ಷರಾದ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ  ಡಾ: ಡಿ. ವೀರೇಂದ್ರ ಹೆಗ್ಗಡೆಯವರು  ಉದ್ಘಾಟಿಸಿ ಶುಭಕೋರಿದರು. ಈ ಸಂದರ್ಭ ಸಿಂಡಿಕೇಟ್ ಬ್ಯಾಂಕ್‍ನ ಅಧ್ಯಕ್ಷರು ಮತ್ತು ಮ್ಯಾನೇಜಿಂಗ್‍ ಡೈರೆಕ್ಟರ್‍ರವರಾದ ಶ್ರೀ ಅರುಣ್ ಶ್ರೀವಾಸ್ತವ್, ಸಿಂಡಿಕೇಟ್ ಬ್ಯಾಂಕ್‍ನಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಆರ್. ಎಸ್. ಪಾಂಡೆ,  ಕೆನರಾ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಪಿ. ಎಸ್.ರಾವತ್, ಕೆನರಾ ಬ್ಯಾಂಕಿನ ಮುಖ್ಯ ಮಹಾ ಪ್ರಬಂಧಕರಾದ ಶ್ರೀ ಎಸ್. ಎಸ್. ಭಟ್, ಸಿಂಡಿಕೇಟ್ ಬ್ಯಾಂಕ್‍ನ ಮಹಾ ಪ್ರಭಂಧಕರಾದ ಶ್ರೀ ಎಮ್.ಮೋಹನ ರೆಡ್ಡಿರಾಷ್ಟ್ರೀಯ ಆರ್ ಸೆಟಿ ಗಳ ನಿರ್ವಹಣಾ ಘಟಕದ ಮುಖ್ಯ ಸಂಯೋಜನಾಧಿಕಾರಿ ಶ್ರೀ ಕೆ.ಎನ್. ಜನಾರ್ದನ್,  ಸ್ಟೇಟ್ ಬ್ಯಾಂಕ್‍ಆಫ್ ಮೈಸೂರು, ವಿಜಯಾ ಬ್ಯಾಂಕ್ ಹಾಗೂ ಕಾಪೊರ್ರೇಶನ್ ಬ್ಯಾಂಕಿನ ಹಿರಿಯ ಅಧಿಕಾರಿಗಳು ಮತ್ತು ಇನ್ನಿತರೇ ಬ್ಯಾಂಕಿನ ಹಿರಿಯ ಅಧಿಕಾರಿಗಳು, ಆರ್‍ಸೆಟಿಗಳ ಶುಭ ಚಿಂತಕರು, ಯಶಸ್ವೀ ಉದ್ದಿಮೆದಾರರು, ರುಡ್‍ಸೆಟ್, ನೆಲಮಂಗಲ ಹಾಗೂ ಸುತ್ತ ಮುತ್ತಲಿನ ಆರ್ ಸೆಟಿಗಳ ಸಿಬ್ಭಂದಿ ವರ್ಗಸಾಕ್ಷಿಯಾಗಿ ಶ್ರೀ ಕೆ.ಎನ್. ಜನಾರ್ಧನ್‍ರವರಿಗೆ ಶುಭ ಹಾರೈಸಿದರು.

1

ನೂತನ ಕಟ್ಟಡ  ಉದ್ಘಾಟಿಸಿ ಆಶೀರ್ವಚನ ನೀಡಿದ ಪರಮ ಪೂಜ್ಯಪದ್ಮವಿಭೂಷಣ ಡಾ: ಡಿ. ವೀರೇಂದ್ರ ಹೆಗ್ಗಡೆಯವರು ಇಂದಿನ ಮೇಕ್‍ಇನ್‍ ಇಂಡಿಯಾ ಎಂಬುದು ಪ್ರಸ್ತುತ ಸನ್ನಿವೇಶವಾಗಿದ್ದು ದೇಶಾದ್ಯಂತ ಇರುವ ಆರ್‍ಸೆಟಿಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಅಂತೆಯೇ ಆರ್‍ಸೆಟಿಗಳು ಕೂಡ ಆ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಇಂದಿನ ಅವಶ್ಯಕತೆಗೆ ತಕ್ಕಂತೆ ತರಬೇತಿಗಳನ್ನು ನೀಡುತ್ತಿವೆ ಎನ್ನುತ್ತಾ ಕಟ್ಟಡ ನಿರ್ಮಾಣ ಕಾಮಗಾರಿಕೆ ಯಂತಹ ಕೆಲಸಗಾರರನ್ನು ಹುಟ್ಟು ಹಾಕುವ ಅವಶ್ಯಕತೆ ಎನ್ನುತ್ತಾ, ಆರ್‍ಸೆಟಿಗಳು ಅದನ್ನು ಸವಾಲಾಗಿ ಸ್ವೀಕರಿಸಿ ತರಬೇತಿಗಳನ್ನು ನೀಡುವುದರ ಮೂಲಕ ಮೇಕ್‍ಇನ್‍ ಇಂಡಿಯಾದ ಕಲ್ಪನೆಗೆ ಸ್ಪಂದಿಸಬೇಕಾಗಿದೆ ಎಂದರು. ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಶುಭಕೋರಿದರು.

ಸಿಂಡಿಕೇಟ್ ಬ್ಯಾಂಕ್‍ನ ಅಧ್ಯಕ್ಷರು ಮತ್ತು ಮ್ಯಾನೇಜಿಂಗ್‍ ಡೈರೆಕ್ಟರ್‍ ರವರಾದ ಶ್ರೀ ಅರುಣ್ ಶ್ರೀವಾಸ್ತವ್‍ ಅವರು ಮಾತನಾಡಿ ಪದ್ಮ ವಿಭೂಷuಡಾ: ಡಿ. ವೀರೆಂದ್ರ ಹೆಗ್ಗಡೆಯವರು ಆರ್‍ಸೆಟಿಗಳ ಮೂಲಕ ಲಕ್ಷಾಂತರ ನಿರುದ್ಯೋಗಿಗಳ ಬಾಳಲ್ಲಿ  ಸ್ವಾವಲಂಬಿ ಬದುಕಿನ ಬೀಜ ಬಿತ್ತುವ ಹರಿಕಾರರಾಗಿ ಮಹಾ ಭಾರತದ ಭೀಷ್ಮ ಪಿತಾಮಹಾನ ಪಾತ್ರ ವಹಿಸಿದ್ದಾರೆ. ಅವರ ಕಾರ್ಯಕ್ಕೆತಾವು ಎಂದೆಂದಿಗೂ ಜೊತೆಯಾಗಿರುತ್ತೇವೆ ಎನ್ನುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕೆನರಾ ಬ್ಯಾಂಕಿನ ಕಾರ್ಯ ನಿರ್ವಾಹಕ ನಿರ್ದೇಶಕರಾದ ಶ್ರೀ ಪಿ.ಎಸ್. ರಾವತ್‍ ರವರು ಮಾತನಾಡಿ, ಪರಮಪೂಜ್ಯಡಾ: ಡಿ. ವೀರೇಂದ್ರ ಹೆಗ್ಗಡೆಯವರಂತ ಮೇರು ವ್ಯಕ್ತಿತ್ವವುಳ್ಳವರ ಮಾರ್ಗದರ್ಶನದಲ್ಲಿ ಮುನ್ನಡೆತ್ತಿರುವ ಆರ್‍ಸೆಟಿಗಳ ಮಹತ್ತರಕಾರ್ಯಕ್ರಮದಲ್ಲಿ ಕಳೆದ 33 ವರುಷಗಳಿಂದ ಅವರೊಟ್ಟಿಗೆಒಟ್ಟಾಗಿಪಾಲ್ಗೊಳ್ಳುವ ಮುಖಾಂತರತಾವು ಭಾಗ್ಯಶಾಲಿಗಳಾಗಿದ್ದೇವೆ ಎಂದರು.

ಪ್ರಾರಂಭದಲ್ಲಿ ರಾಷ್ಟ್ರೀಯ ಆರ್‍ಸೆಟಿಗಳ ನಿರ್ವಹಣಾ ಘಟಕದ ಮುಖ್ಯ ಸಂಯೋಜನಾ ಧಿಕಾರಿ ಶ್ರೀ ಕೆ.ಎನ್. ಜನಾರ್ದನ್ ಆರ್‍ಸೆಟಿಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು..ಶ್ರೀ ಕಲ್ಕುಂದ್ರಿ, ನಿರ್ದೇಶಕರು, ಆರ್‍ಸೆಟಿಗಳ ನಿರ್ವಹಣಾಘಟಕಇವರು ವಂದನಾರ್ಪಣೆ ಮಾಡಿದರು. ಶ್ರೀಮತಿ ಉಷಾ ಜನಾರ್ಧನ್‍ ರವರು ಪ್ರಾರ್ಥನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನೂತನ ಕಟ್ಟಡದ ಉಧ್ಘಾಟನಾ ಸಂದರ್ಭದಲ್ಲಿ ನ್ಯಾಶನಲ್‍ ಅಕಾಡೆಮಿ ಆಪ್‍ರುಡ್‍ಸೆಟ್‍ನ  ಹಿರಿಯ ಅಧಿಕಾರಿಗಳು, ರುಡ್‍ಸೆಟ್‍ನ ಹಿಂದಿನ ನಿರ್ದೇಶಕರುಗಳು, ರುಡ್ ಸೆಟ್ ಸಂಸ್ಥೆಯಲ್ಲಿ ತರಬೇತಿ  ಹೊಂದಿದ ಆಸರೆಯ ವಿಧ್ಯಾರ್ಥಿಗಳು, ನೆಲಮಂಗಲದ ರುಡ್‍ಸೆಟ್‍ನ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗ ಹಾಗೂ ಇನ್ನಿತರೇಅಧಿಕಾರಿ ವರ್ಗ ಪಾಲ್ಗೊಳ್ಳುವುದರ ಮೂಲಕ ಕಾರ್ಯಕ್ರಮಕ್ಕೆ ಮೆರಗು ತಂದು ಕೊಟ್ಟರು.


Spread the love