ಆರ್.ಎಸ್.ಎಸ್ ಸದಸ್ಯ ಶರತ್ ಮೇಲಿನ ಹಲ್ಲೆ ಖಂಡಸಿದ ಹಿಂದೂ ಜನಜಾಗೃತಿ ಸಮಿತಿ

Spread the love

ಆರ್.ಎಸ್.ಎಸ್ ಸದಸ್ಯ ಶರತ್ ಮೇಲಿನ ಹಲ್ಲೆ ಖಂಡಸಿದ ಹಿಂದೂ ಜನಜಾಗೃತಿ ಸಮಿತಿ

ಮಂಗಳೂರು: ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವಾಗಲೇ ಬಿ.ಸಿ. ರೋಡ್‌ನಲ್ಲಿ ದುಷ್ಕರ್ಮಿಗಳು ರಾ.ಸ್ವ.ಸಂಘದ ಶರತ್ ಇವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೂ ಯಾರನ್ನೂ ಬಂಧಿಸಿಲ್ಲ. ಅಲ್ಲದೇ ದೇಶಾದ್ಯಂತ ಯಾವ ತಥಾಕಥಿತ ‘ಅಸಹಿಷ್ಣುತೆ’ಯು ನಿರ್ಮಾಣವಾಗಿದೆಯೊ, ಈ ಘಟನೆಯ ನಿಮಿತ್ತ ‘ಆ’ ಅಸಹಿಷ್ಣುತೆ’ಯನ್ನು ಯಾರೂ ವಿರೋಧಿಸಲಿಲ್ಲ. ಇದರಿಂದ ಮುಸಲ್ಮಾನರು ಅಥವಾ ಕ್ರೈಸ್ತರ ಮೇಲೆ ದಾಳಿಯಾದರೆ ಮಾತ್ರ ದೇಶದಲ್ಲಿ ‘ಅಸಹಿಷ್ಣುತೆ’ ಇರುತ್ತದೆಯೇ?, ಎಂದು ಹಿಂದೂ ಜನಜಾಗೃತಿ ಸಮಿತಿಯು ಪ್ರಶ್ನಿಸುತ್ತಾ ಶರತ್ ಇವರ ಮೇಲಾದ ದಾಳಿಯನ್ನು ಖಂಡಿಸಿದೆ.

ರಾಜ್ಯದಲ್ಲಿ ಹಿಂದುತ್ವವಾದಿಗಳ ಮೇಲಿನ ದಾಳಿಗಳು ಹೆಚ್ಚಾಗುತ್ತಿದ್ದು ಇದರಿಂದ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂಬುದು ಸಿದ್ಧವಾಗುತ್ತದೆ. ಇದುವರೆಗೆ ಕೇರಳ, ತಮಿಳುನಾಡು, ಬಂಗಾಲ ಮುಂತಾದ ರಾಜ್ಯಗಳಲ್ಲಿ ಮತಾಂಧರು ಸಂಚು ರೂಪಿಸಿ ಹಿಂದುತ್ವವಾದಿಗಳ ಮೇಲೆ ಹಾಡುಹಗಲೇ ಮಾರಣಾಂತಿಕ ಹಾಗೂ ಅನೇಕ ಹಿಂದೂಗಳ ಹತ್ಯೆ ಮಾಡಿದ್ದಾರೆ. ಇಂತಹ ಕೃತ್ಯಗಳು ನಮ್ಮ ರಾಜ್ಯದಲ್ಲಿಯೂ ಆರಂಭವಾಗಿದೆಯೇ ಎಂಬ ಸಂದೇಹ ಮೂಡುತ್ತಿದೆ.

ದಾದ್ರಿ ಅಥವಾ ಜುನೈದ ಪ್ರಕರಣವಿರಲಿ, ಈ ಘಟನೆಗಳಿಂದಾಗಿ ದೇಶದಲ್ಲಿ ‘ಅಸಹಿಷ್ಣುತೆ’ ನಿರ್ಮಾಣವಾಗಿ ಪ್ರಶಸ್ತಿ ಹಿಂದಿರುಗಿಸುವುದು ನಡೆಯುತ್ತದೆ, ಹಿಂದುತ್ವವಾದಿಗಳನ್ನು ಗುರಿ ಮಾಡಲಾಗುತ್ತದೆ ಆದರೆ, ಶ್ರೀರಾಮ ಸೇನೆಯ ಲಕ್ಷ್ಮಣ ಇವರ ಹತ್ಯೆಯಾಗಿರಲಿ ಬೆಂಗಳೂರಿನ ಭಾಜಪ ನಾಯಕ ಹರಿಶ, ಮೈಸೂರಿನ ಭಾಜಪ ಕಾರ್ಯಕರ್ತ ಬಿ.ರಾಜೂ, ಮೂಡಬಿದ್ರೆಯ ಗೋರಕ್ಷಕ ಪ್ರಶಾಂತ ಪೂಜಾರಿಯವರನ್ನು ಮತಾಂಧ ಜಿಹಾದಿಗಳು ಹತ್ಯೆ ಮಾಡಿದಾಗ ಆ ಹತ್ಯೆಯ ಘಟನೆಗಳು ‘ಅಪಘಾತ’ವಾಗುತ್ತವೆ. ಯಾವುದೇ ‘ಸೆಕ್ಯುಲರ್‌ವಾದಿ’ಗಳಿಗೆ ಈ ಬಗ್ಗೆ ವಿಶ್ಲೇಷಿಸಬೇಕೆಂದು ಅನಿಸುವುದಿಲ್ಲ. ಆದರೆ ಹಿಂದೂಗಳು ಶಾಂತವಾಗಿ ಇರಲಾರರು. ಶರತ ಇವರ ಮೇಲೆ ಮಾಡಿದ ಹಲ್ಲೆಯ ಪ್ರಕರಣದಲ್ಲಿ ಸರಕಾರವು ಕ್ರಮಕೈಗೊಳ್ಳದಿದ್ದರೆ ಹಿಂದೂಗಳ ರಸ್ತೆಗಿಳಿಯುವರು, ಎಂದು ಹಿಂದೂ ಜನಜಾಗೃತಿ ಸಮಿತಿಯು ಎಚ್ಚರಿಕೆ ನೀಡಿದೆ.


Spread the love