ಆ.19 ರಂದು ಎಸ್ಪಿ ಸಂಜೀವ್ ಪಾಟೀಲರಿಂದ ಪೊಲೀಸ್ ನೇರ ಫೋನ್-ಇನ್ ಕಾರ್ಯಕ್ರಮ

Spread the love

ಆ.19 ರಂದು ಎಸ್ಪಿ ಸಂಜೀವ್ ಪಾಟೀಲರಿಂದ ಪೊಲೀಸ್ ನೇರ ಫೋನ್-ಇನ್ ಕಾರ್ಯಕ್ರಮ

ಉಡುಪಿ: ಉಡುಪಿ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯವರು ಜಿಲ್ಲೆಯ ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಸಾಧಿಸಿ ವಿಚಾರ ವಿನಿಮಯ ಮಾಡಿಕೊಳ್ಳಲು ನಿರ್ಧರಿಸಿರುತ್ತಾರೆ. ಈ ನಿಟ್ಟಿನಲ್ಲಿ ನೇರ ಫೋನ್-ಇನ್ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಅಗೋಸ್ತ್ 19 ರಂದು ಬೆಳಗ್ಗೆ 10:00 ಗಂಟೆಯಿಂದ 11:00 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.

ಉಡುಪಿ ಜಿಲ್ಲಾ ಸಾರ್ವಜನಿಕರು, ಉಡುಪಿ ಜಿಲ್ಲಾ ಪೊಲೀಸರು ಜನಸ್ನೇಹಿ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಏನಾದರೂ ಸಲಹೆ/ಸೂಚನೆಗಳು ಅಥವಾ ಮಾಹಿತಿಯನ್ನು, ಈ ಹಿಂದೆ ನಿಮಗೆ ಸಂಬಂಧಪಟ್ಟ ಅರ್ಜಿ/ಪ್ರಕರಣಗಳ ಕುರಿತಾಗಿ ಮಾಹಿತಿ ಮತ್ತು ತಮ್ಮ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರ ಬಗ್ಗೆ ಮೆಚ್ಚುಗೆ ವಿಷಯ ಮಾತನಾಡಬೇಕೆಂದಿದ್ದಲ್ಲಿ ಅಥವಾ ಅವರಿಂದ ಏನಾದರೂ ತಪ್ಪಾಗುತ್ತಿದ್ದಲ್ಲಿ ಈ ಬಗ್ಗೆಯೂ ಮಾಹಿತಿಯನ್ನು ನೀಡಬಹುದು. ಅಲ್ಲದೆ ಸಾರ್ವಜನಿಕರು ವಾಸಿಸುವ ಪ್ರದೇಶ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳೇನಾದರೂ ನಡೆಯುತ್ತಿದ್ದಲ್ಲಿ, ಅದನ್ನು ತಡೆಗಟ್ಟಲು ಮಾಹಿತಿಯನ್ನು ನೀಡಬಹುದು.  ನೇರ ಫೋನ್-ಇನ್ ಕಾರ್ಯಕ್ರಮಕ್ಕೆ ಕರೆ ಮಾಡಿದವರ ವಿವರವನ್ನು ಗುಪ್ತವಾಗಿ ಇಡಲಾಗುವುದು.

ಸಂಪರ್ಕಿಸುವ ಸ್ಥಿರ ದೂರವಾಣಿ ಸಂಖ್ಯೆ: 0820 – 2534777.


Spread the love