ಉಡುಪಿ: ಕೋಡಿಬೆಂಗ್ರೆಯಲ್ಲಿ ತೀವ್ರಗೊಂಡ ಕಡಲ್ಕೊರೆತ; ಅಪಾಯದಲ್ಲಿ ಮನೆಗಳು

Spread the love

ಉಡುಪಿ: ಕೆಲವು ದಿನಗಳಿಂದ ಬೀಸುತ್ತಿರುವ ಭಾರೀ ಗಾಳಿಗೆ ಭಾನುವಾರದಿಂದ ಪಡುತೋನ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿಬೆಂಗ್ರೆಯಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ.

IMG-20150607-WA0011 IMG-20150607-WA0012 IMG-20150607-WA0024 IMG-20150607-WA0025 IMG-20150607-WA0026

ಕೋಡಿಬೆಂಗ್ರೆ ಹಾಗೂ ಹೂಡೆಯಲ್ಲಿ ಕಡಲಿನ ಅಬ್ಬರ ತೀವ್ರಗೊಳ್ಳುತ್ತಿದ್ದು, ರಕ್ಕಸ ಗ್ರಾತದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಇದರ ಪರಿಣಾಮವಾಗಿ ಕೋಡಿ ಬೆಂಗ್ರೆಯಲ್ಲಿ ಮೋಹನ್ ಖಾರ್ವಿ, ಫಾತಿಮಾ, ರಮೇಶ್ ಎಂಬವರ ಮನೆಗಳು ಸೇರಿದಂತೆ ಏಳೆಂಟು ಮನೆಗಳು ಅಪಾಯದಲ್ಲಿವೆ. ಇದಲ್ಲದೆ ಐದಾರು ತೆಂಗಿನ ಮರಗಳು ಸಮುದ್ರಪಾಲಾಗುವ ಭೀತಿ ಎದುರಾಗಿದೆ. ಕಳೆದ ಬಾರಿ ಸಮುದ್ರ ತೀರಕ್ಕೆ ಹಾಕಿ ರುವ ಕಲ್ಲುಗಳು ಹಾಗೂ ಮರಳಚೀಲಗಳು ಈಗಾಗಲೇ ಕಡಲ ಒಡಲು ಸೇರಿವೆ.

ಕೆಲವು ದಿನಗಳಿಂದ ಬೀಸುತ್ತಿರುವ ಭಾರೀ ಗಾಳಿ ಯಿಂದಾಗಿ ಸಮುದ್ರದ ಅಲೆಗಳ ಅಬ್ಬರ ತೀವ್ರಗೊಂಡಿದೆ. ಮಳೆ ಗಾಲಕ್ಕೆ ಮೊದಲೇ ಈ ಸ್ಥಿತಿ ನಿರ್ಮಾ ಣವಾಗಿರುವುದರಿಂದ ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯು ಇಲ್ಲಿ ಕಡಲ್ಕೊರೆತ ಸಮಸ್ಯೆ ಕಾಣಿಸಿ ಕೊಂಡಿದ್ದು, ಜನಪ್ರತಿ ನಿಧಿಗಳು ಹಾಗೂ ಅಧಿಕಾರಿಗಳ ನಿರ್ಲ ಕ್ಷಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈವರೆಗೆ ಸ್ಥಳಕ್ಕೆ ಯಾವುದೇ ಅಧಿಕಾರಿಗಳು ಭೇಟಿ ನೀಡದ ಬಗ್ಗೆ ತೀರದ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಡಲ್ಕೊರೆತ ತಡೆಗೆ ಈ ಪ್ರದೇಶದಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.


Spread the love