ಉಡುಪಿ: ಪಡುತೋನ್ಸೆ ಗ್ರಾಪಂಗೆ ಮೊದಲ ಬಾರಿ  ಅಲ್ಪಸಂಖ್ಯಾತ ಮುಸ್ಲಿಮ್‌ ಮಹಿಳೆ ಅಧ್ಯಕ್ಷರಾಗಿ ಆಯ್ಕೆ

Spread the love

ಉಡುಪಿ: ಪಡುತೋನ್ಸೆ ಗ್ರಾಪಂ ನ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ ಬೆಂಬಲಿತ ಸದಸ್ಯೆ ಫೌಝಿಯಾ ಸಾದಿಕ್‌ ಹಾಗೂ ಉಪಾಧ್ಯಕ್ಷರಾಗಿ ಲತಾ ಅವಿರೋಧವಾಗಿ ಆಯ್ಕೆಯಾ ಗಿದ್ದಾರೆ.

12

ಗ್ರಾಪಂನಲ್ಲಿ 11 ಕಾಂಗ್ರೆಸ್‌, 6 ಬಿಜೆಪಿ, 3 ವೆಲ್‌ಫೇರ್‌ ಪಾರ್ಟಿ ಬೆಂಬಲಿತ ಹಾಗೂ ಒಬ್ಬ ಪಕ್ಷೇತರ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾ ಗಿತ್ತು. ಇವರ ವಿರುದ್ದ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಇವರು ಮುಂದಿನ ಐದು ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾದರು. ಫೌಝಿಯಾ ಸಾದಿಕ್‌ ಪಡುತೋನ್ಸೆ ಗ್ರಾಮದ ಆರನೆ ವಾರ್ಡಿನಿಂದ ಎರಡನೆ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಲತಾ ಕೂಡ ಎರಡನೆ ಬಾರಿಗೆ ಸದಸ್ಯರಾಗಿದ್ದಾರೆ. ಫೌಝಿಯಾ ಅವರ ಪತಿ ಸಾದಿಕ್‌ ಉಸ್ತಾದ್‌ ಈ ಗ್ರಾಪಂನಲ್ಲಿ ನಾಲ್ಕು ಬಾರಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಕಳೆದ ಬಾರಿ ದಂಪತಿ ಜೋಡಿ ಜಯಗಳಿಸಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಪಡುತೋನ್ಸೆ ಗ್ರಾಪಂ ರಚನೆಯಾದ ಬಳಿಕ ಅಲ್ಪಸಂಖ್ಯಾತ ಮುಸ್ಲಿಮ್‌ ಮಹಿಳೆಯೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗುವುದು ಇದೇ ಮೊದಲು. ಅದೇ ರೀತಿ ಈ ಗ್ರಾಪಂನಲ್ಲಿ ಅವಿರೋಧ ಆಯ್ಕೆ ನಡೆದಿರುವುದು ಇದೇ ಮೊದಲು. ಅಧ್ಯಕ್ಷರು, ಪಿಡಿಒ ಹಾಗೂ ಆಯಾ ವಾರ್ಡ್‌ನ ಸದಸ್ಯರುಗಳು ಪ್ರತೀ ಮನೆ ಮನೆಗಳಿಗೆ ಭೇಟಿ ನೀಡಿ ಜನರ ಸಮಸ್ಯೆಯನ್ನು ಕ್ರೋಡೀಕರಿಸಲಿದ್ದು,ಜನಪರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕಸ ವಿಲೇವಾರಿ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಸಂಪೂರ್ಣ ಪರಿಹರಿಸಲಾಗುವುದು. ಹೂಡೆಯಲ್ಲಿ ಆಟದ ಕ್ರಿಡಾಂಗಣ ನಿರ್ಮಿಸಲು ಕ್ರಮ ತೆಗೆದು ಕೊಳ್ಳಲಾಗುವುದು ಎಂದು ನೂತನ ಅಧ್ಯಕ್ಷೆ ಫೌಝಿಯಾ ಸಾದಿಕ್‌ ತಿಳಿಸಿದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕರ್ನಾಟಕ ಸಾಬೂನು ಮತ್ತು ಮಾರ್ಜಕ ಮಂಡಳಿ ಅಧ್ಯಕ್ಷೆ ವರೋನಿಕಾ ಕರ್ನೆಲಿಯೋ, ಉಡುಪಿ ನಗರಾಭಿವೃದಿಟಛಿ ಪ್ರಾಧಿಕಾರದ ಅಧ್ಯಕ್ಷ ಜನಾರ್ದನ ತೋನ್ಸೆ, ತಾಪಂ ಸದಸ್ಯ ರಹ್ಮತುಲ್ಲಾ, ಮಾಜಿ ಅಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು, ಮಾಜಿ ಉಪಾಧ್ಯಕ್ಷ ಸುಲೋಚನಾ, ರಘುರಾಮ ಶೆಟ್ಟಿ, ಬೈಕಾಡಿ ಅಹ್ಮದ್‌ ಸಾಹೇಬ್‌, ಗೋಪಾಲಕೃಷ್ಣ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.


Spread the love