ಉಡುಪಿ: ಪೇಜಾವರ ಪರ್ಯಾಯ ಸ್ವಾಗತ ಸಮಿತಿ ಕಚೇರಿ ಉದ್ಘಾಟಿಸಿದ ಡಾ. ಡಾ. ಡಿ. ವೀರೇಂದ್ರ ಹೆಗ್ಗಡೆ

Spread the love

ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಪರ್ಯಾಯ ದರ್ಬಾರ್ ಕಾರ್ಯಕ್ರಮ ಈ ಬಾರಿ ರಾಜಾಂಗಣದ ಬದಲು ಶ್ರೀಕೃಷ್ಣ ಮಠ ಪಾರ್ಕಿಂಗ್ ಸ್ಥಳದಲ್ಲಿ ನಡೆಸಲು ಚಿಂತಿಸಲಾಗಿದೆ. ಆದರೆ ಅದಕ್ಕೆ ಅಷ್ಟ ಮಠಗಳ ಸ್ವಾಮೀಜಿಯವರ ಒಪ್ಪಿಗೆ ಸಿಗಬೇಕಾಗಿದೆ. ಪೇಜಾವರ ಶ್ರೀಗಳು ಚಾತುರ್ಮಾಸ್ಯ ಮುಗಿಸಿ ಉಡುಪಿ ಬಂದ ಬಳಿಕ ಈ ಬಗ್ಗೆ ಅಂತಿಮ ತೀರ್ಮಾನವಾಗಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಪೇಜಾವರ ಪರ್ಯಾಯ ಸಮಿತಿಯ ಮಹಾಧ್ಯಕ್ಷ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.

pejawar_paryaya_office 20-09-2015 10-10-33 pejawar_paryaya_office 20-09-2015 10-10-40 pejawar_paryaya_office 20-09-2015 10-10-53 pejawar_paryaya_office 20-09-2015 10-10-59 pejawar_paryaya_office 20-09-2015 10-11-12 pejawar_paryaya_office 20-09-2015 10-15-33 pejawar_paryaya_office 20-09-2015 10-15-46 pejawar_paryaya_office 20-09-2015 10-15-54 pejawar_paryaya_office 20-09-2015 10-25-07 pejawar_paryaya_office 20-09-2015 10-33-42 pejawar_paryaya_office 20-09-2015 10-41-38 pejawar_paryaya_office 20-09-2015 10-41-51 pejawar_paryaya_office 20-09-2015 10-42-04 pejawar_paryaya_office 20-09-2015 10-43-05 pejawar_paryaya_office 20-09-2015 10-48-52

ಭಾನುವಾರ ಉಡುಪಿಯ ಪೇಜಾವರ ಮಠದ ಆವರಣದಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಐದನೇ ಪರ್ಯಾಯದ ಸ್ವಾಗತ ಸಮಿತಿ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಹದಿನೈದು ದಿನಗಳಿಗೊಮ್ಮೆ ಸರ್ವ ಸಮಿತಿಯ ಸಭೆಯನ್ನು ಕರೆದು ಕಾಲಕ್ಕೆ ಸರಿಯಾಗಿ, ಜನರ ಅಪೇಕ್ಷೆಗಳಿಗೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸಬೇಕು. ಹಿಂದೆಯೆಲ್ಲ ಪರ್ಯಾಯಕ್ಕೆ ಒಂದು ವರ್ಷ ಪೂರ್ವದಲ್ಲಿ ತಯಾರಿ ಆರಂಭಿಸಬೇಕಿತ್ತು. ಇಂದು ಆಧುನಿಕ ತಂತ್ರಜ್ಞಾನಗಳ ಕಾಲದಲ್ಲಿ ಮೂರು ತಿಂಗಳ ಪೂರ್ವ ತಯಾರಿಯಲ್ಲಿ ಪರ್ಯಾಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುಗಿಸಬಹುದು. ಈ ಬಾರಿ ಪೇಜಾವರ ಸ್ವಚ್ಛತೆ, ಸೇವೆ, ಪಾರ್ಕಿಂಗ್ ಮೊದಲಾದವುಗಳಿಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಮೂರು ರೀತಿಯ ಹೊರೆ ಕಾಣಿಕೆ ವ್ಯವಸ್ಥೆಯ ಬಗ್ಗೆ ಚಿಂತಿಸಲಾಗಿದೆ. ಸಾರ್ವಜನಿಕರು ತಾವೇ ಸ್ವತಃ ಒಬ್ಬೊಬ್ಬರು ಕೈಯಲ್ಲಿ ಹಿಡಿದುಕೊಂಡು ತಂದೊಪ್ಪಿಸುವುದು. ಇದಕ್ಕೆ `ಸುಧಾಮ ಕಾಣಿಕೆ’ ಎಂದು ಹೆಸರಿಡಬಹುದು. ಎರಡನೆಯದು ಎರಡು ಮೂರು ಜನರು ಗುಂಪಾಗಿ ಬಂದು ಹಸಿರು ಹೊರೆ ಕಾಣಿಕೆ ಮಠಕ್ಕೆ ಒಪ್ಪಿಸವುದು. ಇದಕ್ಕೆ ಇನ್ನೂ ಹೆಸರಿಡಲಾಗಿಲ್ಲ. ಸಾರ್ವಜನಿಕರು ಹೆಸರನ್ನು ನೀಡಬಹುದು. ಮೂರನೆಯದು ಭೀಮ ಕಾಣಿಕೆ ಅಂದರೆ ದೊಡ್ಡ ದೊಡ್ಡ ಲಾರಿಗಳಲ್ಲಿ ಹೊರೆ ಕಾಣಿಕೆಗಳನ್ನು ತಂದು ಮಠಕ್ಕೆ ಒಪ್ಪಿಸುವುದು. ಮೂರು ರೀತಿಯ ಕಾಣಿಕೆಗಳಿಗೂ ಪ್ರತ್ಯೇಕ ಕೌಂಟರ್ ಮಾಡಿ ಸ್ವೀಕರಿಸುವ ವ್ಯವಸ್ಥೆ ಮಾಡಬೇಕಾಗಿದೆ ಎಂದರು.
ನಗರದ ಸುತ್ತಮುತ್ತಲಿನ ಹೊಟೇಲ್ ರೂಮ್‍ಗಳು ಪರ್ಯಾಯಕ್ಕೆ ಈಗಾಗಲೇ ಬುಕ್ಕಿಂಗ್ ಆಗಿದೆ ಎಂದು ತಿಳಿದು ಬಂದಿದೆ. ಆದ್ದರಿಂದ ಕುತ್ಪಾಡಿಯ ಎಸ್‍ಡಿಎಂ ಆಯುರ್ವೆದ ಕಾಲೇಜಿನ ಹಾಸ್ಟೆಲ್ ನೀಡಲಾಗುತ್ತದೆ. ಜೊತೆಗೆ ಉಪಯೋಗ ಯೋಗ್ಯವಾಗ ಸುತ್ತಲಿನ ಕಾಲೇಜುಗಳ ಹಾಸ್ಟೆಲ್‍ಗಳನ್ನು ಬಳಸಬಹುದು. ಹೊಸದಾಗಿ ನಿರ್ಮಾಣವಾದ ಫ್ಲಾೃಟ್‍ಗಳನ್ನು ಮಾಲೀಕರ ಅನುಮತಿ ಪಡೆದು ಉಪಯೋಗಿಸಬಹುದು. ಮೋಹನ್ ಆಳ್ವ ಅವರು ಹತ್ತು ಸಾವಿರ ಹಾಸಿಗೆ-ಬೆಡ್‍ಗಳನ್ನು ನೀಡುವುದಾಗಿ ತಿಳಿಸಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮಿತಿಯ ಕಾರ್ಯಾಧ್ಯಕ್ಷ ವಿನಯ್ ಕುಮಾರ್ ಸೊರಕೆ ಪೇಜಾವರ ಪರ್ಯಾಯ ವೆಬ್‍ಸೈಟ್ ಬಿಡುಗಡೆಗೊಳಿಸಿದರು.
ಶಾಸಕ ಪ್ರಮೋದ್ ಮಧ್ವರಾಜ್, ಪೇಜಾವರ ಪರ್ಯಾಯ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ, ಎಂ.ಬಿ. ಪುರಾಣಿಕ್, ಹರಿಕೃಷ್ಣ ಪುನರೂರು, ಭುವನೇಂದ್ರ ಕಿದಿಯೂರು, ಪ್ರಧಾನ ಕಾರ್ಯದರ್ಶಿ ಬಾಲಾಜಿ ರಾಘವೇಂದ್ರ ಆಚಾರ್ಯ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜನಾರ್ದನ ತೋನ್ಸೆ, ನಗರಸಭಾ ಅಧ್ಯಕ್ಷ ಯುವರಾಜ್ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಎಚ್. ಕೃಷ್ಣ ಭಟ್ ಸ್ವಾಗತಿಸಿ ಪ್ರಸ್ತಾವಿಸಿದರು. ಪ್ರದೀಪ್‍ಕುಮಾರ್ ಕಲ್ಕೂರ ವಂದಿಸಿದರು. ಸಂಘಟನಾ ಕಾರ್ಯದರ್ಶಿ ಮುರಲಿ ಕಡೆಕಾರು ಕಾರ್ಯಕ್ರಮ ನಿರೂಪಿಸಿದರು.


Spread the love