ಉಡುಪಿ: ಸಾರ್ಥಕ 20 ಸಂವತ್ಸರಗಳನ್ನು ಪೂರೈಸಿದ ಗಾಂಧಿ ಆಸ್ಪತ್ರೆ

Spread the love

ಉಡುಪಿ ನಗರದ ಹೃದಯಭಾಗದಲ್ಲಿರುವ ಗಾಂಧಿಆಸ್ಪತ್ರೆ, ಮೇ 5ರಂದು ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಅರ್ಥಪೂರ್ಣ 20 ಸಂವತ್ಸರಗಳನ್ನು ಪೂರೈಸಲಿದೆ. ಎರಡು ದಶಕಗಳು ಪೂರ್ಣಗೊಂಡ ಸಂಭ್ರಮವನ್ನು ಆಸ್ಪತ್ರೆಯು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಲು ಸಿದ್ಧವಾಗುತ್ತಿದ್ದು, ದಿನಾಂಕ ಮೇ 5ರಂದು, ಪೂರ್ವಾಹ್ನ 8:55 ಗಂಟೆಗೆ ನವೀಕೃತ ಹೆರಿಗೆ ಕೊಠಡಿ ಉದ್ಘಾಟನೆ ಹಾಗೂ ಬೃಹತ್ ರಕ್ತದಾನ ಶಿಬಿರದ ಮೂಲಕ ಹಾಗೆಯೇ ಸಾಯಂಕಾಲ 5 ಗಂಟೆಗೆ ಶಾಮಿಲಿ ಸಭಾಭವನದಲ್ಲಿ ಸಮಾರಂಭ ನಡೆಸುವ ಮೂಲಕ ಆಚರಿಸುತ್ತಿದೆ.

ಪ್ರಸ್ತುತ 100 ಹಾಸಿಗೆಗಳುಳ್ಳ ಆಸ್ಪತ್ರೆಯು ಸಾಮಾನ್ಯ, ವೈದ್ಯಕೀಯ, ಶಸ್ತ್ರಚಿಕಿತ್ಸಾ ಹಾಗೂ ಹೆರಿಗೆಗೆ ಹೆಸರುವಾಸಿಯಾಗಿದ್ದು, ಜನರಲ್ ವಾರ್ಡ್, ಸೆಮಿ ಪ್ರೈವೇಟ್ ವಾರ್ಡ್, ಸೆಮಿ ಸ್ಪೆಷಲ್ ವಾರ್ಡ್, ಸ್ಪೆಷಲ್ ವಾರ್ಡ್, ಡಿಲಕ್ಸ್ ಮತ್ತು ಸೂಪರ್ಡಿಲಕ್ಸ್ ಸ್ತರದ ಕೊಠಡಿಗಳು ಲಭ್ಯವಿದೆ.

ಗಾಂಧಿ ಆಸ್ಪತ್ರೆಯು ಸ್ವಚ್ಛತೆ, ನಗುಮೊಗದ ಸೇವೆ ಹಾಗೂ ಶಿಸ್ತುಬದ್ಧ ಚಿಕಿತ್ಸೆಗೆ ಪ್ರಾಮುಖ್ಯತೆ ನೀಡಿರುವುದು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.
ಆಸ್ಪತ್ರೆಯ ಆರಂಭದ ದಿನಗಳಿಂದ ಇಂದಿನವರಗೆ ಹಳ್ಳಿಹಳ್ಳಿಗಳಲ್ಲಿ ಹಲವಾರು ಉಚಿತ ವೈದ್ಯಕೀಯ ತಪಾಸಣಾ ಹಾಗೂ ಜಾಗೃತಿ ಶಿಬಿರಗಳನ್ನು ನಡೆಸುತ್ತಿದೆ.

ಸುಮಾರು ಹತ್ತು ವರ್ಶಗಳ ಕೆಳಗೆ ಕಿಡ್ನಿ ಡಯಾಲಿಸಿಸ್ ಯುನಿಟನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ನ ಸಹಾಯದಿಂದ, ಬಡವರಿಗೆ ರಿಯಾಯಿತಿದರದಲ್ಲಿ ಡಯಾಲಿಸಿಸ್ ಮಾಡಿಕೊಟ್ಟ ಶ್ರೇಯಸ್ಸು ಗಾಂಧಿ ಆಸ್ಪತ್ರೆಗೆ ಸಲ್ಲುತ್ತದೆ.
ಮೂಳೆಮುರಿತದ ರೋಗಿಗಳಿಗೆ ಸಹಾಯವಾಗುವ ವಾಕರ್ ಮೊದಲಾದ ಸಹಾಯಕ ವಸ್ತುಗಳನ್ನು, ಕೇವಲ ಒಂದು ರುಪಾಯಿ ಬಾಡಿಗೆಗೆ ನೀಡುವಆರ್ಥೋಬ್ಯಾಂಕ್ ಹೊಂದಿರುವ ಎಕೈಕ ಆಸ್ಪತ್ರೆ ಎಂಬ ಹೆಗ್ಗಳಿಕೆ ಗಾಂಧಿಆಸ್ಪತ್ರೆಯದು.

gandhi hospital

ಉಡುಪಿ ನಗರದಲ್ಲಿ ಹೆರಿಗೆವಿಭಾಗದಲ್ಲಿ ಮುಂಚೂಣಿಯಲ್ಲಿರುವ ಆಸ್ಪತ್ರೆಗಳಲ್ಲಿ ಗಾಂಧಿಆಸ್ಪತ್ರೆ ಒಂದಾಗಿದ್ದು, ಅದಕ್ಕೆ ವಿಶೇಷ ಪ್ರಾಮುಖ್ಯತೆ ನೀಡಿ ಸಾರ್ವಜನಿಕರ ಉತ್ತಮ ಪ್ರತಿಕ್ರಿಯೆಗೆ ಪಾತ್ರವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಆಸ್ಪತ್ರೆಯಲ್ಲಿ ಹೆರಿಗೆ ಪ್ರಮಾಣ ಉತ್ತಮವಾಗಿದ್ದು, ಪ್ರತಿವರ್ಶಕ್ಕೆ ಸುಮಾರು 700 ಹೆರಿಗೆ ಗಳಾಗುತ್ತಿದ್ದು, ಆ ನಿಟ್ಟಿನಲ್ಲಿ ಹೆರಿಗೆಕೊಠಡಿಯನ್ನು ನವೀಕರಣಗೊಳಿಸಲಾಗಿದೆ.

ಪಂಚಮಿ ಟ್ರಸ್ಟ್ನ ವತಿಯಿಂದ ಸುಮಾರು 14 ವರ್ಶಗಳಿಂದ ಆಸ್ಪತ್ರೆಯ ಸ್ಥಾಪನಾದಿನದಂದು ರಕ್ತದಾನ ಶಿಬಿರ ನಡೆಸುತ್ತಿದ್ದು, ಈ ವರ್ಶವೂ ಜಿಲ್ಲಾಸ್ಪತ್ರೆಯ ರಕ್ತನಿಧಿಯ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದೆ.

1995ರಲ್ಲಿ ಆಸ್ಪತ್ರೆ ಸ್ಥಾಪಿಸಲು ತನುಮನಧನಗಳಿಂದ ಸಹಕಾರವಿತ್ತ ಎಲ್ಲ ಗಣ್ಯರನ್ನು ಸ್ಮರಿಸುತ್ತಾ, ಈ ವರ್ಶ ಸ್ಥಾಪನಾದಿನದಂದು ಅವರೆಲ್ಲರಿಗೂ ಆಹ್ವಾನವಿತ್ತು, ಸಾರ್ವಜನಿಕರೊಂದಿಗೆ ಸಂಭ್ರಮೋತ್ಸವ ನಡೆಸಲು ಆಸ್ಪತ್ರೆಯು ಸಜ್ಜುಗೊಂಡಿದೆ.

ಮೇ5 ರಂದು ಆಸ್ಪತ್ರೆಯಲ್ಲಿ ನಡೆಯುವ ಬೃಹತ್ರಕ್ತದಾನ ಶಿಬಿರ ಹಾಗೂ ಶಾಮಿಲಿ ಸಭಾಭವನದಲ್ಲಿ ನಡೆಯುವ ಸಂಭ್ರಮೋತ್ಸವಕ್ಕೆ ಸರ್ವರಿಗೂ ತುಂಬು ಹೃದಯದ ಸ್ವಾಗತವನ್ನು ಆಸ್ಪತ್ರೆಯ ನಿರ್ದೇಶಕರಾದ ಡಾ.ಎಂ ಹರಿಶ್ಚಂದ್ರರವರು ಕೋರುತ್ತಾರೆ.


Spread the love