ಉಡುಪಿ ಹೈಟೆಕ್ ಮೀನು ಮಾರುಕಟ್ಟೆ ಶೀಘ್ರ ಉದ್ಘಾಟನೆ- ಸಚಿವ ಪ್ರಮೋದ್

Spread the love

ಉಡುಪಿ ಹೈಟೆಕ್ ಮೀನು ಮಾರುಕಟ್ಟೆ ಶೀಘ್ರ ಉದ್ಘಾಟನೆ- ಸಚಿವ ಪ್ರಮೋದ್

ಉಡುಪಿ: ಉಡುಪಿ ನಗರ ಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೈಟೆಕ್ ಮೀನು ಮಾರುಕಟ್ಟೆ ಶೀಘ್ರದಲ್ಲಿ ಉದ್ಘಾಟನೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಅವರು ಗುರುವಾರ ಪಿಪಿಸಿ ರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಹೈಟೆಕ್ ಮೀನು ಮಾರುಕಟ್ಟೆಯ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.

fish-m fish-m2 fish-m3

ಮೀನು ಮಾರುಕಟ್ಟೆ ನಿರ್ಮಾಣ ಕಾರ್ಯ ಬಹುತೇಕ ಮುಕ್ತಾಯವಾಗಿದ್ದು, ಇನ್ನು 15 ರಿಂದ 20 ದಿನಗಳ ಕೆಲಸ ಮಾತ್ರ ಬಾಕಿಯಿದ್ದು, ಶೀಘ್ರದಲ್ಲಿ ಮಾರುಕಟ್ಟೆಯ ಪ್ರಯೋಜನ ಸಾರ್ವಜನಿಕರಿಗೆ ದೊರೆಯಲಿದೆ, ಪ್ರಾರಂಭದಲ್ಲಿ 2 ಕೋಟಿ ರೂ ವೆಚ್ಚದಲ್ಲಿ 76 ಮಹಿಳಾ ಮೀನುಗಾರರಿಗೆ ಮಾತ್ರ ಇಲ್ಲಿ ಮೀನು ಮಾರಾಟಕ್ಕೆ ಅವಕಾಶ ನೀಡುವಂತೆ ಯೋಜನೆ ಸಿದ್ದವಾಗಿತ್ತು, ಆದರೆ ತಾವು ಇಲ್ಲಿ 186 ಮಹಿಳಾ ಮೀನುಗಾರರಿಗೆ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದು, ಇದರಿಂದ ಹೆಚ್ಚುವರಿ ಅನುದಾನ ವೆಚ್ಚವಾಗಿದ್ದು, ತಮ್ಮ ಶಾಸಕರ ನಿಧಿಯಿಂದ 30 ಲಕ್ಷ ಹಾಗೂ ನಗರಸಭೆಯಿಂದ 8 ಲಕ್ಷ ರೂ ಅನುದಾನ ನೀಡಿದ್ದು, ಒಟ್ಟು 2.38 ಕೋಟಿ ವೆಚ್ಚದಲ್ಲಿ ಈ ಸುಸಜ್ಜಿತ ಹೈಟೆಕ್ ಮೀನು ಮಾರುಕಟ್ಟೆ ನಿರ್ಮಾಣಗೊಳ್ಳಲಿದೆ ಎಂದು ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ, ನಗರಸಭಾ ಸದಸ್ಯರಾದ ಗೀತಾ ಶೇಟ್, ರಮೇಶ್ ಕಾಂಚನ್ , ಬಂದರು ಮತ್ತು ಮೀನುಗಾರಿಕೆ ಇಲಾಖೆ ಅಧಿಕಾರಿ ನಾಗರಾಜ್, ಮತ್ತಿತರರು ಉಪಸ್ಥಿತರಿದ್ದರು.


Spread the love