ಉತ್ತಮ ಆಡಳಿತ ನಿರ್ವಹಣೆಗೆ ರಾಜ್ಯ ಸರಕಾರ ಪ್ರಥಮ ಸ್ಥಾನಗಳಿಸುವತ್ತ ಪ್ರಯತ್ನ : ಪ್ರಮೋದ್ ಮಧ್ವರಾಜ್

Spread the love

ಉಡುಪಿ: ರಾಜ್ಯ ಸರಕಾರ ಉತ್ತಮ ಆಡಳಿತ ನಿರ್ವಹಣೆಗೆ ಪಿಎಸಿ ಸೂಚ್ಯಂಕದಲ್ಲಿ 3ನೇ ಸ್ಥಾನಪಡೆದಿದೆ. ಇನ್ನುಳಿದ 2 ವರ್ಷಗಳ ಆಡಳಿತಾವಧಿಯಲ್ಲಿ ಆಡಳಿತ ಗುಣಮಟ್ಟಕ್ಕೆ ಇನ್ನೂ ಹೆಚ್ಚಿನ ಒತ್ತು ನೀಡಿ ಪ್ರಥಮ ಸ್ಥಾನಗಳಿಸುವತ್ತ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿಗಳಾದ, ಶಾಸಕ ಪ್ರಮೋದ್ ಮಧ್ವರಾಜ್‍ರವರು ಹೇಳಿದರು.

block-congress-meeting

ಅವರು , ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ತಾ.ಪಂ ಹಾಗೂ ಜಿ.ಪಂ. ಚುನಾವಣೆಗಳಲ್ಲಿ ಸ್ಫರ್ಧಿಸಿ ವಿಜೇತರಾದ ಅಭ್ಯರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ ಇತ್ತೀಚೆಗೆ ನಡೆದ ತಾ.ಪಂ. ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಪಕ್ಷ ರಾಜ್ಯ ಮಟ್ಟದಲ್ಲಿ ಕಳೆದ ಅವಧಿಗಿಂತ ಹೆಚ್ಚಿನ ಸ್ಥಾನ ಹಾಗೂ ಜಿಲ್ಲೆಗಳಲ್ಲಿ ಅಧಿಕಾರ ಹಿಡಿದರೂ ಕರಾವಳಿ ಪ್ರದೇಶವಾದ ಉಡುಪಿ ಜಿಲ್ಲೆಯಲ್ಲಿ ವಿಭಿನ್ನ ವಾತಾವರಣದಿಂದ ಪಕ್ಷ ಹೆಚ್ಚಿನ ಸ್ಥಾನಗಳಿಸಲು ವಿಫಲವಾಗಿರಬಹುದು ಆದರೆ ಮತಗಳಿಕೆಯಲ್ಲಿ ಬಿಜೆಪಿಕ್ಕಿಂತ ಮುಂದಿರುವುದು ಫಲಿತಾಂಶದ ಅಂಕಿ ಅಂಶಗಳಿಂದ ಕಂಡುಬರುತ್ತದೆ. ಈ ಹಿನ್ನಲೆಯಲ್ಲಿ ರಾಜ್ಯ ಸರಕಾರದ ಜನಪರ ಯೋಜನೆಗಳನ್ನು ಜನತೆಗೆ ತಲುಪಿಸುವಲ್ಲಿ ಇನ್ನೂ ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ.
ಈ ಸಂಧರ್ಭದಲ್ಲಿ ಕಲ್ಯಾಣಪುರ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ವಿಜೇತ ಅಭ್ಯರ್ಥಿಗಳಾದ ಶ್ರೀ ಜನಾರ್ಧನ ತೋನ್ಸೆ ಹಾಗೂ ಶ್ರೀ ಧನಂಜಯ ರವರನ್ನು ಅಭಿನಂದಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿದ ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕಲ್ಯಾಣಪುರ ಜಿಲ್ಲಾ ಪಂಚಾಯತ್ ವಿಜೇತ ಅಭ್ಯರ್ಥಿ ಶ್ರೀ ಜನಾರ್ಧನ ತೋನ್ಸೆಯವರು ಮಾತನಾಡುತ್ತಾ ಇಂದು ಬಿಜೆಪಿಯು ಸುಳ್ಳಿನ ಪ್ರಚಾರ ಹಾಗೂ ಕೋಮುವಾದದೊಂದಿಗೆ ಕರಾವಳಿ ಪ್ರದೇಶಗಳಲ್ಲಿ ಮತಗಳಿಸುವ ತಂತ್ರವನ್ನು ರೂಪಿಸುತ್ತಿದೆ. ಈ ತಂತ್ರವನ್ನು ಬೇಧಿಸುವಲ್ಲಿ ನಮ್ಮ ಹಿಂದಿನ ಮತ ಯಾಚಿಸುವ ವೈಖರಿಯನ್ನು ಬದಲಾಯಿಸಿಕೊಳ್ಳುವ ದೊಡ್ಡ ಸವಾಲ್ ನಮ್ಮ ಮುಂದಿದೆ, ಈ ಹಿನ್ನಲೆಯೊಂದಿಗೆ ಮುಂದಿನ ವಿಧಾನ ಸಭಾ ಚುನಾವಣೆಯ ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಅಮಿನ್ ಪಡುಕರೆಯವರು ಮಾತನಾಡುತ್ತಾ ಇನ್ನು ಕೇವಲ 2 ವರ್ಷಗಳ ಅವಧಿಯಲ್ಲಿ ಬರುವ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಈಗಿಂದೀಗಲೇ ಸಜ್ಜುಗೊಳಿಸಬೇಕಾಗಿದೆ, ಈ ನಿಟ್ಟಿನಲ್ಲಿ ಪ್ರಥಮ ಹಂತದಲ್ಲಿ ಪ್ರತೀ ಗ್ರಾಮಗಳಲ್ಲಿ ಸಮಿತಿಗಳನ್ನು ರಚಿಸಿ ಪಕ್ಷವನ್ನು ಬಲಪಡಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ ಎಂದರು,
ಈ ಸಂಧರ್ಭದಲ್ಲಿ ಯಾವುದೇ ಕಪ್ಪು ಚುಕ್ಕಿಹೊಂದದೆ, ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಮ್ಮ ಅವಧಿಯನ್ನು ಪೂರೈಸಿದ ನಗರಸಭಾ ಅಧ್ಯಕ್ಷರಾದ ಶ್ರೀ ಯುವರಾಜ ಪಿ. ಪುತ್ತೂರು ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ಅಮೃತಾಕೃಷ್ಣಮೂರ್ತಿಯವರನ್ನು ಶಾಸಕರು ಅಭಿನಂದಿಸಿದರು.
ಸಮಾರಂಭದಲ್ಲಿ ಪಕ್ಷದ ಮುಖಂಡರಾದ ಬಿ.ನರಸಿಂಹಮೂರ್ತಿ, ಮೀನಾಕ್ಷಿ ಮಾಧವ ಬನ್ನಂಜೆ, ಕೇಶವ ಕೋಟ್ಯಾನ್, ಮನೋಜ್ ಕರ್ಕೇರ, ಪ್ರಶಾಂತ ಪೂಜಾರಿ, ಸುಜಯ ಪೂಜಾರಿ, ಅಮೃತ್ ಶೆಣೈ, ಗೋಪಾಲ, ಕುಶಲ ಶೆಟ್ಟಿ, ಸುರೇಶ ಶೆಟ್ಟಿ ಬನ್ನಂಜೆ, ಪ್ರಖ್ಯಾತ ಶೆಟ್ಟಿ, ಗಣೇಶ್ ರಾಜ್ ಸರಳಬೆಟ್ಟು, ಅಣ್ಣಯ್ಯ ಸೇರಿಗಾರ್, ಯತೀಶ್ ಕರ್ಕೇರ, ಶಶಿರಾಜ್ ಕುಂದರ್, ರಮೇಶ್ ಕಾಂಚನ್, ಸುಕೇಶ್ ಕುಂದರ್, ಹಸನ್, ವಿಜಯ ಪೂಜಾರಿ, ಆರ್.ಕೆ ರಮೇಶ್, ಗೀತಾ ಶೆಟ್ ಹೇಮಲತಾ ಜತ್ತನ್ನ, ಜಾನಕಿ ಶೆಟ್ಟಿಗಾರ್, ಶೋಭಾ ಪೂಜಾರಿ, ಸೆಲಿನ್ ಕಾರ್ಕಡ, ಭಾಸ್ಕರ ರಾವ್ ಕಿದಿಯೂರು , ಉಪಸ್ಥಿತರಿದ್ದರು. ಜನಾರ್ಧನ ಭಂಡಾರಕಾರ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.


Spread the love