ಉದ್ದಿಮೆ ಪರವಾನಗಿ ನವೀಕರಣಕ್ಕೆ ಸೂಚನೆ

Spread the love

ಉದ್ದಿಮೆ ಪರವಾನಗಿ ನವೀಕರಣಕ್ಕೆ ಸೂಚನೆ

ಮ0ಗಳೂರು : ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಒಟ್ಟು 29,100 ಉದ್ದಿಮೆದಾರರು ಪರವಾನಿಗೆಯನ್ನು ಪಡೆದುಕೊಂಡಿದ್ದಾರೆ. ಅದರಲ್ಲಿ 21157 ಉದ್ದಿಮೆದಾರರು ಪರವಾನಗಿಯನ್ನು ನವೀಕರಿಸಿದ್ದು, 740 ಉದ್ದಿಮೆಗಳು ರದ್ದುಪಡಿಸಲಾಗಿರುತ್ತದೆ, ಉಳಿದಂತೆ 7943 ಉದ್ದಿಮೆಗಳು ನವೀಕರಿಸಲು ಬಾಕಿ ಇರುತ್ತದೆ.

ಮಂಗಳೂರು ಮಹಾನಗರಪಾಲಿಕೆಯು, ಈಗಾಗಲೇ ಎಲ್ಲಾ ಉದ್ದಿಮೆದಾರರಿಗೆ ಪರವಾನಗಿಯನ್ನು ನವೀಕರಿಸುವಂತೆ ತಿಳಿಸಿದ್ದರೂ, ಉದ್ದಿಮೆದಾರರು ಪರವಾನಗಿಯನ್ನು ನವೀಕರಿಸದಿರುವುದು ಸ್ಥಳ ಪರಿಶೀಲನೆಗಳಲ್ಲಿ ಕಂಡು ಬಂದಿರುತ್ತದೆ. ಎಲ್ಲಾ ಉದ್ದಿಮೆದಾರರು ಜುಲೈ 17ರೊಳಗೆ ಪರವಾನಿಗೆ ನವೀಕರಿಸುವಂತೆ ಹಾಗೂ ಪರವಾನಗಿಯನ್ನು ಮಾಡಿಸದಿರುವವರು ಸದರಿ ದಿನದೊಳಗೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಪರವಾನಗಿಯನ್ನು ಮಾಡಿಸಿಕೊಳ್ಳದಿದ್ದಲ್ಲಿ ಆಥವಾ ನವೀಕರಿಸದಿದ್ದಲ್ಲಿ ಕಾನುನೂ ಪ್ರಕಾರವಾಗಿ ಕ್ರಮವಹಿಸಲಾಗುವುದು. ಇದು ಎರಡನೇಯ ಬಾರಿ ಕಾಲಾವಕಾಶವನ್ನು ನೀಡಲಾಗುತ್ತಿದೆ. ಇಲ್ಲದಿದ್ದಲ್ಲಿ ಜುಲೈ 18 ರಿಂದ ಕಾರ್ಯಚರಣೆಯನ್ನು ನಡೆಸಲಾಗುವುದೆಂದು ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾರ್ವಜನಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್ ಅವರು ಪ್ರಕಟಣೆಯ್ಲಲಿ ತಿಳಿಸಿದ್ದಾರೆ.


Spread the love