ಉಪ್ಪಿನಂಗಡಿ ಗೃಹ ರಕ್ಷಕದಳದಿಂದ ವನಮಹೋತ್ಸವ

Spread the love

ಉಪ್ಪಿನಂಗಡಿ ಗೃಹ ರಕ್ಷಕದಳದಿಂದ ವನಮಹೋತ್ಸವ

ಮ0ಗಳೂರು : ಉಪ್ಪಿನಂಗಡಿ ಗೃಹ ರಕ್ಷಕದಳದಿಂದ ವನಮಹೋತ್ಸವ ಕಾರ್ಯಕ್ರಮವು ಉಪ್ಪಿನಂಗಡಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ. ಮುರಳಿ ಮೋಹನ ಚೂಂತಾರು ವನಮಹೋತ್ಸವಕ್ಕೆ ಚಾಲನೆ ನೀಡಿ ಭೂಮಿಯಲ್ಲಿ ಮರಗಿಡಗಳ ಅಸ್ತಿತ್ವ ಸಕಲ ಜೀವ ಸಂಕುಲಗಳ ಅಸ್ತಿತ್ವಕ್ಕೆ ಕಾರಣವಾಗಿರುವುದರಿಂದ ಮರ ಗಿಡಗಳ ರಕ್ಷಣೆ ಮತ್ತು ಪೋಷಣೆ ಎಲ್ಲರ ಕರ್ತವ್ಯವಾಗಿದೆ ಪ್ರತಿಯೊಬ್ಬರು ಗಿಡಗಳನ್ನು ಬೆಳೆಸುವ ಹವ್ಯಾಸವಾಗಿ ಮಾಡಿಕೊಂಡರೆ ಶುದ್ಧ ಗಾಳಿಯೊಂದಿಗೆ ನಮ್ಮೆಲ್ಲರೂ ಆರೋಗ್ಯವು ಚೆನ್ನಾಗಿರುತ್ತದೆ ವ್ಯಕ್ತಿಯ ದೀರ್ಘಾಯುಷ್ಯದಲ್ಲಿ ಶುದ್ದ ಗಾಳಿಯ ಪಾತ್ರ ಮಹತ್ತರವಾಗಿದೆ. ಒಂದು ಮರ ಬೆಲೆಕಟ್ಟಲಾರದಷ್ಟು ಶುದ್ದ ಆಮ್ಲಜನಕವನ್ನು ನೀಡುತ್ತಿರುವಾಗ ಅದರ ಅಸ್ತಿತ್ವವೇ ನಮಗೆಲ್ಲಾ ವರದಾನವಾಗಿದೆ. ಅಂತಹ ಗಿಡ ಮರಗಳನ್ನು ನಾಶ ಮಾಡಲು ಮುಂದಾಗಬಾರದೆಂದು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಂ.ಸಿ ಸದಸ್ಯ ಪುರಂದರ, ಉಪ್ಪಿನಂಗಡಿ ಪೇಟೆ ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ, ಗೃಹರಕ್ಷಕ ದಳದ ಘಟಕಾಧಿಕಾರಿ ರಾಮಣ್ಣ ಆಚಾರ್, ಹಿರಿಯ ಗೃಹ ರಕ್ಷಕ ದಿನೇಶ್ ಸೇರಿದಂತೆ ಘಟಕದ ಬಹುತೇಕ ಸಿಬ್ಬಂದಿಗಳು ಉಪಸ್ಥಿತರಿದ್ದರು.


Spread the love