ಉಮೇಶ್ ಶೆಟ್ಟಿ ಕೊಲೆ ಪ್ರಕರಣ – ನಾಲ್ವರು ಆರೋಪಿಗಳ ಬಂಧನ

Spread the love

ಉಮೇಶ್ ಶೆಟ್ಟಿ ಕೊಲೆ ಪ್ರಕರಣ – ನಾಲ್ವರು ಆರೋಪಿಗಳ ಬಂಧನ

ಮಂಗಳೂರು: ಟ್ರಾನ್ಸ್ ಪೋರ್ಟ್ ಮಾಲಿಕ ಉಮೇಶ್ ಶೆಟ್ಟಿ ಕೊಲೆಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಆರೋಪಿಗಳನ್ನುಪೋಲಿಸರು ಬಂಧಿಸಿದ್ದಾರೆ.

ಬಂಧಿತರನ್ನು ಸುರತ್ಕಲ್ ನಿವಾಸಿ ಪ್ರಸಾದ್ ಆಚಾ್ಯ (27), ರಾಜೇಶ್ ಶೆಟ್ಟಿ (32), ತಿಲಕ್ ಪೂಜಾರಿ (26), ಹಾಗೂ ಮೂಡಿಗೆರೆ ನಿವಾಸಿ ಪ್ರಕಾಶ್ (28) ಎಂದು ಗುರುತಿಸಲಾಗಿದೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಂಗಳೂರು ಕಮೀಷನರ್ ಚಂದ್ರಶೇಕರ್ ಅವರು ಡಿಸೆಂಬರ್ 28 ರಂದು ಮಂಗಳೂಉ ತಾಲೂಕು ಕುಳಾಯಿಯಲ್ಲಿರುವ ಪ್ರಭಾವತಿ ಟ್ರಾನ್ಸ್ ಪೋರ್ಟಿನಲ್ಲಿ ಕೆಲಸ ಮಾಡುತ್ತಿದ್ದ ಮುಲ್ಕಿ ಕೆಲೆಂಜೂರು ಗ್ರಾಮದ ಉಮೆಶ್ ಶೆಟ್ಟಿ ಮನೆಗೆ ಬಾರದೆ ನಾಪತ್ತೆಯಾಗದ್ದರು. ಈ ಕುರಿತು ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜನವರಿ 1 ರಂದು ಕಲ್ಲಮಂಡ್ಕೂರು ಗ್ರಾಮದ ನಿಡ್ಡೋಡಿ ಜಡ್ಡು ಎಂಬಲ್ಲಿ ಉಮೇಶ್ ಶೆಟ್ಟಿಯ ಮೃತದೇಹ ಪತ್ತೆಯಾಗಿತ್ತು.  ಈ ಕುರಿತು ಉತ್ತರ ಉಪವಿಭಾಗದ ಸಹಾಯಕ ಪೋಲಿಸ್ ಆಯುಕ್ತರಾದ ರಾಜೇಂದ್ರ ಡಿಎಸ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದ್ದು, ವಿಶೇಷ ತಂಡವು ಆರೋಪಿಗಳ ಮಾಹಿತ ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಿದೆ.

ಪ್ರಸಾದ್ ಆಚಾರ್ಯ ಉಮೇಶ್ ಶೆಟ್ಟಿಯಿಂದ ಪಡೆದ ಹಣವನ್ನು ಹಿಂದಿರುಗಿಸದೇ ಲಪಟಾಯಿಸುವ ಉದ್ದೇಶದಿಂದ ಕಲ್ಲುಕೋರೆಯನ್ನು ತೋರಿರುವ ನೆಪದಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಉಮೇಶ್ ಶೆಟ್ಟಿಯನ್ನು ಪಕ್ಷಿಕೆರೆ ಎಂಬಲ್ಲಿ ಡಿಸೆಂಬರ್ 28 ರಂದು ಸಂಜೆ ಬಸ್ಸಿನಿಂದ ಇಳಿಸಿ ರಿಡ್ಜ್ ಕಾರಿನಲ್ಲಿ ಕರೆದುಕೊಂಡು ಹೋಗಿ ಕುದ್ರಿಪದವು ಎಂಬಲ್ಲಿ ರಾಜೇಶ್ ಶೆಟ್ಟಿ, ತಿಲಕ್ ಪೂಜಾರಿ, ಪ್ರಕಾಶ್ ಆಚಾರಿ ಜೊತೆ ಸೇರಿ ಕೊಲೆ ಮಾಡಿ ಮೃತದೇಹವನ್ನು ನಿಡ್ಡೋಡಿಯ ಎತ್ತರ ಕಾಡು ಪ್ರದೇಶದಲ್ಲಿ ಬಿಸಾಡಿದ್ದಾರೆ.

ಈ ಪ್ರಕರಣದ ಮುಂದಿನ ತನಿಖೆಯನ್ನು ಪೋಲಿಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್ ಮೂಡಬಿದ್ರೆ ಪೋಲಿಸ್ ನಿರೀಕ್ಷಕರು ತನಿಖೆಯನ್ನು ಕೈಗೊಂಡಿದ್ದಾರೆ.

ಪ್ರಕರಣದ ಪತ್ತೆಗೆ ಮಂಗಳೂರು ನಗರದ ಸಹಾಯಕ ಪೋಲಿಸ್ ಆಯಕ್ತರರಾದ ರಾಜೇಂದ್ರ ಡಿ ಎಸ್ ರವರ ನೇತೃತ್ವದಲ್ಲಿ ಮುಲ್ಕಿ ಪೋಲಿಸ್ ಠಾಣಾ ಉಪನಿರಿಕ್ಷಕರಾದ ಅನಂತ ಪದ್ಮನಾಭ, ಮೂಡಬಿದ್ರೆ ಪೋಲಿಸ್ ನಿರೀಕ್ಷಕರಾದ ರಾಮಚಂದ್ರ ನಾಯಕ್, ಪೋಲಿಸ್ ಉಪನಿರೀಕ್ಷಕರಾದ ದೇಜಪ್ಪ, ಪ್ರೊಬೇಷನರಿ ಪಿಎಸ್ ಐ ಮಾರುತಿ, ಹೆಡ್ ಕಾನ್ಸ್ ಟೇಬಲ್ ಚಂದ್ರಶೇಖರ್, ಧರ್ಮೇಂದ್ರ ಸಿಬಂದಿಗಳಾದ ರಾಜೇಶ, ಅಣ್ಣಪ್ಪ, ಸುಧೀರ್, ಬಸವರಾಜ್, ಅಕಿಲ್, ಸುಜನ್, ಶಿವಕುಮಾರ್ ಭಾಗವಹಿಸಿದ್ದರು.


Spread the love