ಉರ್ವಾ ಪೋಲಿಸರಿಂದ ಅಂತರಾಜ್ಯ ಕಳ್ಳನ ಬಂಧನ

Spread the love

ಉರ್ವಾ ಪೋಲಿಸರಿಂದ ಅಂತರಾಜ್ಯ ಕಳ್ಳನ ಬಂಧನ

ಮಂಗಳೂರು: ಕಳ್ಳತನಕ್ಕೆ ಸಂಬಂಧಿಸಿ ಅಂತರಾಜ್ಯ ಚೋರನೊಬ್ಬನನ್ನು ಉರ್ವಾ ಪೋಲಿಸರು ಶುಕ್ರವಾರ ಬಂಧಿಸಿದ್ದಾರೆ.

ಬಂಧಿತನನ್ನು ದಾವಣಗೆರೆಯ ಮಂಜುನಾಥ ಎಂದು ಗುರುತಿಸಲಾಗಿದೆ

theft-arrest-20161209

ಆರೋಪಿಯು ಮಂಗಳೂರು ಉರ್ವ ಮತ್ತು ತಮಿಳುನಾಡು ಚೆನ್ನೈ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದ್ದು, ನಾಲ್ಕು ಬಂಗಾರದ ಬಳೆ, ಎರಡು ಚಿನ್ನದ ನಾಣ್ಯ, ಎರಡು ಬೆಳ್ಳಿ ಉಂಗುರ,66 ಸಾವಿರ ರೂ ನಗದು ವಶಪಡಿಸಿಕೊಳ್ಳಲಾಗಿದೆ.


Spread the love