ಉಳ್ಳಾಲ: ಹಲ್ಲೆ ಯತ್ನ ಆರೋಪಿಯ ಬಂಧನ

Spread the love

ಉಳ್ಳಾಲ: ಹಲ್ಲೆ ಯತ್ನ ಆರೋಪಿಯ ಬಂಧನ

ಮಂಗಳೂರು : ಉಳ್ಳಾಲ ಪೊಲೀಸ್ ಠಾಣೆ ಸರಹದ್ದಿನ ಕುತ್ತಾರ್ ರಿಕ್ಷಾ ಪಾರ್ಕ್ ನಲ್ಲಿ ಪಿರ್ಯಾದಿ ಅಜಿತ್ ಮತ್ತು ಮಹಮ್ಮದ್ ಆಲಿ ಎಂಬವರ ನಡುವೆ ನಡೆದ ವಾಗ್ವಾದ ನಡೆದಿದ್ದು, ಇದನ್ನು ನೆಪ ಮಾಡಿಕೊಂಡು ಅಟೋ ಚಾಲಕ ಅಜಿತ್ ಮೇಲೆ ಹಲ್ಲೆ ಮಾಡುವ ಉದ್ದೇಶದಿಂದ ಅಟೋ ಚಾಲಕ ಮಹಮ್ಮದ್ ಆಲಿ ಮತ್ತು ಸೋದರ ಸಂಬಂಧಿ ಮಹಮ್ಮದ್ ಕಬೀರ್ ತಸ್ಲೀಂ @ತಚ್ಚಿ ಸೇರಿಕೊಂಡು ಕೊಲೆ ಮಾಡಲು ಯತ್ನಿಸಿದ್ದು, ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪೈಕಿ ಮಹಮ್ಮದ್ ಕಬೀರ್ ತಸ್ಲೀಂ @ತಚ್ಚಿ (21) ಎಂಬಾತನನ್ನು ದಸ್ತಗಿರಿ ಮಾಡುವಲ್ಲಿ ಮಂಗಳೂರು ದಕ್ಷಿಣ ಎಸಿಪಿ ರವರ ನೇತೃತ್ವದ ರೌಡಿ ನಿಗ್ರಹ ದಳದ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಅಟೋ ರಿಕ್ಷಾ ಬಾಡಿಗೆ ವಿಚಾರದಲ್ಲಿ ಪಿರ್ಯಾದಿ ಅಜಿತ್ ಮತ್ತು ಮಹಮ್ಮದ್ ಆಲಿ ಎಂಬವರೊಳಗೆ ವಾದ-ವಿವಾದ ನಡೆದಿದ್ದು, ಇದನ್ನು ತಿಳಿದ ಮಹಮ್ಮದ್ ಆಲಿಯ ಸಂಬಂಧಿ, ಹಲವಾರು ಪ್ರಕರಣದಲ್ಲಿ ಭಾಗಿಯಾದ ಮಹಮ್ಮದ್ ಕಬೀರ್ ತಸ್ಲೀಂ @ತಚ್ಚಿ (21) , ತಂದೆ: ದಿ;ಯಾಸಿರ್, ವಾಸ:ಮರಿಯಮ್ಮ ಹೌಸ್ ಮದನಿ ನಗರ ಕುತ್ತಾರ್,ಮಂಗಳೂರು ಈತನು ಪಿರ್ಯಾದಿಯವರನ್ನು ತಡೆದು ಅವಾಚ್ಯ ಶಬ್ದಗಳಿಂದ ಬೈದು, ಮಹಮ್ಮದ್ ಆಲಿಯವರಲ್ಲಿ ‘ಮಾತನಾಡುವಷ್ಟು ದೊಡ್ಡ ಜನವಾ’ ಎಂದು ಚೂರಿ ತೆಗೆದು ತಿವಿದು ಹಲ್ಲೆ ಮಾಡಲು ಪ್ರಯತ್ನಿಸಿದ್ದು, ಪಿರ್ಯಾದಿಯವರು ಓಡಿ ತಪ್ಪಿಸಿಕೊಂಡಾಗ ಆರೋಪಿಯು ಪಿರ್ಯಾದಿಯವರನ್ನು ಬೆನ್ನಟ್ಟಿದ್ದು, ‘ಇನ್ನೊಮ್ಮೆ ಸಿಕ್ಕಿದಲ್ಲಿ ಕೊಲೆ ಮಾಡುವುದಾಗಿ’ ಜೀವ ಬೆದರಿಕೆ ಹಾಕಿರುತ್ತಾರೆ ಮತ್ತು ಪಿರ್ಯಾದಿಯವರು ದೂರು ನೀಡಲು ಠಾಣೆಗೆ ಬರುವಾಗ ಇನ್ನೊಬ್ಬ ಆರೋಪಿ ಮಹಮ್ಮದ್ ಆಲಿ ತಡೆದು ನಿಲ್ಲಿಸಿ ಪಿರ್ಯಾದಿಯವರಲ್ಲಿ ‘ನೀನು ತಸ್ಲೀಂ @ತಚ್ಚಿ ವಿರುದ್ದ ದೂರು ನೀಡಿದಲ್ಲಿ ನಿನ್ನ ತಲೆ ಹೋಗಬಹುದು’ ಎಂದು ಬೆದರಿಕೆ ಹಾಕಿರುತ್ತಾರೆ ಎಂಬಿತ್ಯಾದಿಯಾಗಿದೆ.

ಆರೋಪಿಗಳಿಬ್ಬರು ಸೋದರ ಸಂಬಂಧಿಯಾಗಿದ್ದು, ಮಹಮ್ಮದ್ ಕಬೀರ್ ತಸ್ಲೀಂ @ತಚ್ಚಿ (21) ಈತನ ಮೇಲೆ ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 4 ಪ್ರಕರಣ ದಾಖಲಾಗಿದ್ದು, ಇದರಲ್ಲಿ ದರೋಡೆ ಯತ್ನ, ಕಳವು, ಕೊಲೆಗೆ ಪ್ರಯತ್ನ ಪ್ರಕರಣಗಳು ದಾಖಲಾಗಿರುತ್ತದೆ.

ಪೊಲೀಸ್ ಆಯುಕ್ತರಾದ ಟಿ.ಆರ್.ಸುರೇಶ್, ಐಪಿಎಸ್, ಪೊಲೀಸ್ ಉಪ ಆಯುಕ್ತರಾದ (ಕಾನೂನು ಮತ್ತು ಸುವ್ಯವಸ್ಥೆ) ಹನುಮಂತರಾಯ, ಪೊಲೀಸ್ ಉಪ ಆಯುಕ್ತರಾದ (ಅಪರಾಧ ಮತ್ತು ಸಂಚಾರ) ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತರಾದ ರಾಮರಾವ್ ಮತ್ತು ಉಳ್ಳಾಲ ಪೊಲೀಸ್ ಇನ್ಸ್ ಪೆಕ್ಟರ್ ಗೋಪಿಕೃಷ್ಣ ಹಾಗೂ ರೌಡಿ ನಿಗ್ರಹ ದಳದ ಸಿಬ್ಬಂದಿಯವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದಾರೆ


Spread the love