ಎ.ಜೆ. ಆಸ್ಪತ್ರೆಯಲ್ಲಿ ಹೈ-ಎಂಡ್ ಪಿಇಟಿ, ಸಿಟಿ ಸ್ಕ್ಯಾನ್‍ ಆರಂಭ

Spread the love

ಎ.ಜೆ. ಆಸ್ಪತ್ರೆಯಲ್ಲಿ ಹೈ-ಎಂಡ್ ಪಿಇಟಿ (ಪೆಟ್) ಸಿಟಿ ಸ್ಕ್ಯಾನ್‍ ಆರಂಭ

ಮಂಗಳೂರು: ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾಕೇಂದ್ರವು ಹೋಟೆಲ್ ಮೋತಿ ಮಹಲ್ ನಲ್ಲಿ ಪತ್ರಿಕಾ ಗೋಷ್ಢಿ ನಡೆಸಿದರು.

ಡಾ ಪ್ರಶಾಂತ್  ಮಾರ್ಲ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಂಗಳೂರಿನಲ್ಲಿ ವಿಶ್ವದರ್ಜೆಯ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸುವ ದ್ಯೇಯದೊಂದಿಗೆ 2001ರಲ್ಲಿ ಆರಂಭಗೊಂಡ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ತನ್ನಲ್ಲಿದ್ದ ಸೌಲಭ್ಯಗಳ ಜೊತೆಗೆ ನೂತನ ತಂತ್ರ ಜ್ಞಾನಗಳನ್ನು ಅಳವಡಿಸುವುದರಲ್ಲಿ ಮುಂಚೂಣಿಯಲ್ಲಿದೆ. ಕರಾವಳಿ ಕರ್ನಾಟಕದ ಜನತೆಗೆ ಅತ್ಯುತ್ತಮ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕೆಂಬುದು ಡಾ. ಎ.ಜೆ. ಶೆಟ್ಟಿಯವರಕನಸ್ಸಾಗಿತ್ತು.

image007aj-hospital-20160525-007 image002aj-hospital-20160525-002

ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾಕೇಂದ್ರವುದೇಶದಲ್ಲಿರುವಅತ್ಯುತ್ತಮಆರೋಗ್ಯ ಸೇವೆಗಳಿಗೆ ಹೊಂದುವಂತಹಆರೋಗ್ಯ ಸೌಲಭ್ಯಗಳನ್ನು ಒದಗಿಸುವುದರಲ್ಲಿ ಮುಂಚೋಣಿಯಲ್ಲಿದೆ. ಆಸ್ಪತ್ರೆಯುರೋಗಿಯಆರೈಕೆ ಹಾಗೂ ನೂತನ ಉಪಕರಣಗಳನ್ನು ಪ್ರಪ್ರಥಮಭಾರಿಗೆಆಳವಡಿಸಿ, ಜನರಿಗೆಅತ್ಯುತ್ತಮಆರೋಗ್ಯಸೌಲಭ್ಯವನ್ನುಕಲ್ಪಿಸುವಕೀರ್ತಿಯನ್ನು ಪಡೆದಿದೆ. 2013ರಲ್ಲಿ ಸಮಗ್ರಕ್ಯಾನ್ಸರ್‍ಚಿಕಿತ್ಸೆಯನ್ನು ನೀಡುವಎ.ಜೆ. ಕ್ಯಾನ್ಸರ್‍ಇನ್ಸ್ಟಿಟ್ಯೂಟನ್ನು ಪ್ರಾರಂಬಿಸಿ ಕ್ಯಾನ್ಸರ್‍ರೋಗದಚಿಕಿತ್ಸೆಯನ್ನು ನೀಡಲು ಬೇಕಾದಂತಹರೇಡಿಯೇಶನ್ (ವಿಕಿರಣ) ಅಂಕೋಲಜಿ, ಮೆಡಿಕಲ್‍ಅಂಕೋಲಜಿ, ಶಸ್ತ್ರಚಿಕಿತ್ಸಾಅಂಕೋಲಜಿ ಮತ್ತು ನ್ಯೂಕ್ಲಿಯರ್ ಮೆಡಿಸಿನಂತಹ ವಿವಿಧವಿಭಾಗಗಳನ್ನು ಒಂದೇ ಸೂರಿನಡಿ ಸ್ಥಾಪಿಸಿರುವ ದಕ್ಷಿಣಕನ್ನಡಜಿಲ್ಲೆಯಮೊತ್ತಮೊದಲ ಕೇಂದ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಗ ಪಿ.ಇ.ಟಿ.(ಪೆಟ್)/ಸಿಟಿ ಸ್ಕ್ಯಾನ್‍ಸೇರ್ಪಡೆಗೊಂಡಿದೆ.

image005aj-hospital-20160525-005

ಪಿಇಟಿ/ಸಿಟಿ ಸ್ಕ್ಯಾನ್‍ಅಂದರೇನು?

ಪಾಸಿಟ್ರಾನ್ ಎಮಿಷನ್‍ಟೊಮೊಗ್ರಫಿ (ಪಿಇಟಿ) ಮತ್ತುಕಂಪ್ಯೂಟರೀಕೃತಟೊಮೊಗ್ರಫಿ (ಸಿಟಿ)ಯು ವೈದರುಚಿಕಿತ್ಸೆಗೆ ಶಿಫಾರಸು ಮಾಡುವ ಮೊದಲೇದೇಹದಯಾವ ಭಾಗದಲ್ಲಿಕ್ಯಾನ್ಸರ್‍ರೋಗವಿದೆಯೆಂದು ಪತ್ತೆಹಚ್ಚಲು ಸಹಾಯ ಮಾಡುವಒಂದುಅತ್ಯಾಧುನಿಕಉಪಕರಣವಾಗಿದೆ. ಅತೀ ಸೂಕ್ಷ್ಮ ಪಿಇಟಿ ಸ್ಕ್ಯಾನ್‍ರೋಗದ (ಅಸ್ವಸ್ಥತೆಯ) ಜೀವಶಾಸ್ತ್ರದಚಿತ್ರವನ್ನು, ಸಿಟಿ ಸ್ಕ್ಯಾನ್‍ದೇಹದಅಂತರಿಕಅಂಗರಚನಾಶಾಸ್ತ್ರದ ವಿವರವಾದಚಿತ್ರವನ್ನು ನೀಡುತ್ತದೆ. ಪಿಇಟಿ/ಸಿಟಿ ಸ್ಕ್ಯಾನ್‍ಈ ಎರಡು ಸಾಮಥ್ರ್ಯಗಳನ್ನು ಸಂಯೋಜಿಸಿ ಒಂದುಸುಸ್ಥಾಪಿತಚಿತ್ರಣವನ್ನು ನೀಡುವ ಸ್ಕ್ಯಾನ್‍ಆಗಿದೆ.

ಪಿಇಟಿ/ಸಿಟಿ ಸ್ಕ್ಯಾನ್‍ಯಾಕೆ ಮಾಡಲಾಗುತ್ತದೆ?

ಬಹುತೇಕವಾಗಿ ಪಿಇಟಿ/ಸಿಟಿ ಸ್ಕ್ಯಾನ್‍ಗಳನ್ನು ಕ್ಯಾನ್ಸರ್ ವಿಶ್ಲೇಷಣೆಗಾಗಿ ಬಳಸಲಾಗುತ್ತದೆ. ವೈದ್ಯರುಗಳು ತಮ್ಮಕ್ಯಾನ್ಸರ್ ಪೀಡಿತ ರೋಗಿಗಳ ರೋಗದ ವಿಶ್ಲೇಷಣೆ, ರೋಗದ ಹಂತ ಮತ್ತುಚಿಕಿತ್ಸೆಯ ಮೌಲ್ಯಮಾಪನ ಮಾಡಲು ಬಳಸುತ್ತಾರೆ. ಪಿಇಟಿ ಸ್ಕ್ಯಾನ್ ವೈದ್ಯರುಗಳಿಗೆ ಜೀವಿತ ಮತ್ತು ಮೃತ ಅಂಗಾಂಶಗಳು ಅಥವಾ ಹಾನಿಕಾರವಲ್ಲದ ಮತ್ತು ಮಾರಕ ಕಾಯಿಲೆಗಳ ನಡುವಿನ ವ್ಯತ್ಯಾಸವನ್ನು ತಿಳಿಯಲು ಸಹಾಯ ಮಾಡುತ್ತದೆ. ಪಿಇಟಿ ಚಿತ್ರಣವು ಮಾರಕಅಥವಾ ಹಾನಿಕಾರಕವಲ್ಲದ ಪ್ರಶ್ನಾರ್ಹ ವಿಕೃತಿಯಕೋಶದಚಟುವಟಿಕೆಯಹೆಚ್ಚುವರಿ ಮಾಹಿತಿಯನ್ನು ವೈದ್ಯರುಗಳಿಗೆ ನೀಡುತ್ತದೆ. ಪಿಇಟಿ/ಸಿಟಿ ಸ್ಕ್ಯಾನ್‍ರೋಗದ ವ್ಯಾಪ್ತಿಯನ್ನುತೋರಿಸುತ್ತದೆ. ಪಿಇಟಿ/ಸಿಟಿ ಸ್ಕ್ಯಾನ್‍ಉತ್ತಮಚಿಕಿತ್ಸೆ ನೀಡುವಲ್ಲಿ ವೈದ್ಯರುಗಳಿಗೆ ಸಹಾಯ ಮಾಡುತ್ತದೆ.

ಕ್ಯಾನ್ಸರ್‍ಚಿಕಿತ್ಸೆಪೂರ್ಣಗೊಂಡ ನಂತರವು ಪಿಇಟಿ/ಸಿಟಿ ಸ್ಕ್ಯಾನ್ ವೈದ್ಯರುಗಳಿಗೆ ಕ್ಯಾನ್ಸರ್‍ಮರುಕಳಿಸಿದೆಯೇ ಎಂಬ ಸಂಶಯದ ಮೇಲೆ ತನಿಖೆ, ಶಸ್ತ್ರಚಿಕಿತ್ಸೆಅಥವಾ ವಿಕಿರಣಚಿಕಿತ್ಸೆಯಿಂದಾಗಿ ಹೋಗಲಾಡಿಸಲಾಗದ ಗಡ್ಡೆಗಳು ಅಥವಾ ಅಂಗಾಂಶಗಳ ಇರುವಿಕೆಯನ್ನು ಬಹಿರಂಗ ಪಡಿಸಲು ಸಹಾಯ ಮಾಡುತ್ತದೆ. ಹಿಂದಿನ ರೋಗದ ವಿವರ, ಹಾಗೂ ಹೆಚ್ಚು ನಿಖರವಾಗಿರೋಗದ ವ್ಯಾಪ್ತಿಯನ್ನು, ಹಂತವನ್ನು ಪತ್ತೆಹಚ್ಚಿ ಸರಿಯಾದಚಿಕಿತ್ಸೆಯನ್ನುನೀಡುವುದÀಕ್ಕೆ ಪಿಇಟಿ/ಸಿಟಿ ಸ್ಕ್ಯಾನ್ ಸಾಹಯ ಮಾಡುವುದರೊಂದಿಗೆರೋಗವನ್ನುಗುಣಪಡಿಸಲುಅವಕಾಶವನ್ನುಒದಗಿಸುತ್ತದೆ.

ಎ.ಜೆ. ಕ್ಯಾನ್ಸರ್‍ಇನ್ಸ್ಟಿಟ್ಯೂಟಿನಲ್ಲಿ ಅಳವಡಿಸಿರುವ ಪಿಇಟಿ/ಸಿಟಿ (ಪೆಟ್)ಯ ಪ್ರಮುಖ ಅಂಶಗಳು.

ಸೀಮೆನ್ಸ್ ಬಯೋಗ್ರಪ್ ಎಂಸಿಟಿ 20 ಎಕ್ಸೆಲ್‍ಒಂದು ಪ್ರಬಲ ಅಣ್ವಿಕ ಸಿಟಿಯಾಗಿದ್ದು, ಇದುದೇಹದಯಾವಭಾಗಕ್ಕೂತಲುಪಿ ರೋಗವನ್ನು ಪತ್ತೆಹಚ್ಚಬಲ್ಲದಾಗಿದೆ. ಈ ಉಪಕರಣವು ಮುಂಚಿತವಾಗಿರೋಗವನ್ನುಪತ್ತೆಹಚ್ಚಿ, ರೋಗವನ್ನು ನಿಖರವಾಗಿ ನಿರೂಪಿಸಿ ಅದಕ್ಕೆ ನೀಡಲಾಗುವಚಿಕಿತ್ಸೆಯ ವಿಧಾನದಲ್ಲಿ ಬೇಕಾಗುವ ಸುಧಾರಣೆಯನ್ನು ಮೇಲ್ವಿಚಾರಣೆ ಮಾಡಿಅದನ್ನುದಾಖಲೆಮಾಡುತ್ತದೆ. ಅದಷ್ಟು ವೇಗವಾಗಿ ರೋಗವನ್ನು ಪತ್ತೆಹಚ್ಚುವುದು ಮತ್ತುರೋಗದ ಪ್ರಗತಿಯನ್ನುದಾಖಲೆಮಾಡಿ ಸರಿಯಾದಚಿತ್ರಣವನ್ನು ನೀಡುವುದು ಪಿಇಟಿ/ಸಿಟಿ ಸ್ಕ್ಯಾನ್‍ನಒಂದು ಪ್ರಮುಖ ಸಾಮಥ್ರ್ಯವಾಗಿದೆ. ಯಾವುದೇಅಂಗದಲ್ಲಿನ ಸಣ್ಣ ಪ್ರಮಾಣದರೋಗದ ವಿವರವನ್ನುನೋಡಲುಪರಿಮಾಣಾತ್ಮಕ ನಿಖರತೆಯುಳ್ಳ ಅತೀ ಹೆಚ್ಚಿನಗುಣಮಟ್ಟದಚಿತ್ರಣದಅವಶ್ಯಕತೆಯಿರುತ್ತದೆ. ಪಿಇಟಿ/ಸಿಟಿ ಸ್ಕ್ಯಾನ್‍ತನ್ನಅಸಾಧಾರಣಗುಣಮಟ್ಟದರೋಗಚಿತ್ರಣದಿಂದಾಗಿ ವೈದ್ಯರಿಗೆರೋಗದಚಿಕಿತ್ಸೆಗೆದೃಡವಾದ ನಿರ್ಣಯತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

ಬಯೋಗ್ರಪ್ ಎಂಸಿಟಿ 20 ಎಕ್ಸೆಲ್‍ವನ್ನುಇಡೀದೇಹದಪಿಇಟಿ/ಸಿಟಿ ಟೊಮೋಗ್ರಾಪ್‍ಚಿತ್ರಣವನ್ನು, ಪ್ರತ್ಯೇಕವಾಗಿಕ್ಯಾನ್ಸರಿನ, ನರವೈಜ್ಞಾನಿಕ ಮತ್ತು ಹೃದ್ರೋಗಕ್ಕೆ ಸಂಬಂಧಪಟ್ಟರೋಗ ನಿರ್ಣಯ ತೆಗೆದುಕೊಳ್ಳುವ ಉದ್ದೇಶಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಬಯೋಗ್ರಪ್‍ಒಂದು ಅಕ್ರಮಣಶೀಲವಲ್ಲದ ವಿಧಾನವಾಗಿದ್ದು, ಇದುಗಮನಾರ್ಹ ಸಿಟಿ ಮತ್ತುಅಣುವಿನ ಮಟ್ಟದಲ್ಲಿರುವಅಂಗರಚನಾಶಾಸ್ತ್ರ ಹಾಗೂ ಜೈವಿಕ ಪ್ರಕ್ರಿಯೆಗಳ ವಿವರವನ್ನು ಹೊಂದಿರುವ ಪಿಇಟಿ/ಸಿಟಿ ಚಿತ್ರಣಗಳನ್ನು ಉತ್ಪಾದಿಸುತ್ತದೆ.

ಟೈಮ್‍ಆಫ್ ಪ್ಲೈಟ್ (ಸಮಯದ ಮಾಹಿತಿ)

ಟೈಮ್‍ಆಫ್ ಪ್ಲೈಟ್‍ಪ್ರತಿಯೊಂದು ಕಾಕತಾಳಿಯ ಫೋಟಾನಿನ ಪತ್ತೆಹಚ್ಚುವಿಕೆಯ ನಡುವಿನ ನಿಜವಾದ ಸಮಯದ ವ್ಯತ್ಯಾಸವನ್ನು ಅಳೆಯುತ್ತದೆ. ಇದರಿಂದ ವೈದ್ಯರುಗಳಿಗೆ ರೋಗದ ವಿವರವಾದಚಿತ್ರಣವನ್ನು ನೀಡುತ್ತದೆ.

ಕರ್ನಾಟಕದ ಮೊತ್ತಮೊದಲ ಅತ್ಯಾಧುನಿಕ ಪಿಇಟಿ/ಸಿಟಿಯನ್ನು ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾಕೇಂದ್ರದಲ್ಲಿ ಅಳವಡಿಸಲಾಗಿದೆ. ಈ ಹೈ-ಎಂಡ್ ಪಿಇಟಿ/ಸಿಟಿಯನ್ನು ಎಡನೀರು ಮಠದ ಶ್ರೀ ಶ್ರೀಕೇಶವಾನಂದ ಭಾರತಿ ಸ್ವಾಮೀಜಿಯವರು ಶುಕ್ರವಾರ ಮೇ 27ರಂದು ಬೆಳಿಗ್ಗೆ 11.30ಕ್ಕೆ ಉದ್ಘಾಟಿಸಲಿದ್ದಾರೆ.

ಜನಸಾಮಾನ್ಯರ ಮಾಹಿತಿ ಹಾಗೂ ಪ್ರಯೋಜನಕ್ಕಾಗಿ ಈ ಪ್ರಕಟಣೆಯನ್ನುತಮ್ಮ ಪ್ರತಿಷ್ಟಿತ ಮಾಧ್ಯಮಗಳಲ್ಲಿ ಪ್ರಕಟಿಸಬೇಕಾಗಿ ವಿನಂತಿ.


Spread the love