ಒಂದು ದಿನದ ರಾಜಕೀಯ ಚಿಂತನಾ ಶಿಬಿರ

Spread the love

ಪತ್ರಿಕಾ ಪ್ರಕಟಣೆಗಾಗಿ

ಮಂಗಳೂರು : ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಜಂಟಿ ಆಶ್ರಯದಲ್ಲಿ ರಾಜಕೀಯದಲ್ಲಿ ಕಾರ್ಯಕರ್ತರನ್ನು ಹಾಗೂ ನಾಯಕರುಗಳನ್ನು ಬಹಳ ಅರ್ಥಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು, ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಿಷ್ಠವಾಗಿ ಸಂಘಟಿಸಲು ಪರಿಣಾಮಕಾರಿ ನಾಯಕರುಗಳ ಚಿಂತನಾ ಸಭೆಯನ್ನು ತಾ 13.03.2016 ರಂದು ನಗರದ ಹೊರವಲಯದಲ್ಲಿ ನಡೆಯಿತು.

image001mla-lobo-camp-20160323-001

ಬ್ಲಾಕ್ ಅಧ್ಯಕ್ಷರುಗಳಾದ ಶ್ರೀ ಬಾಲಕೃಷ್ಣ ಶೆಟ್ಟಿ ಮತ್ತು ವಿಶ್ವಾಸ್ ಕುಮಾರ್ ದಾಸ್ ರವರು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಪರಿಣಾಮಕಾರಿ ನಾಯಕರುಗಳನ್ನಾಗಿ ಪರಿವರ್ತಿಸಿ, ವಿಪಕ್ಷಗಳ ವೈಫಲ್ಯಗಳನ್ನು ಯಾವ ರೀತಿಯಲ್ಲಿ ಜನರಿಗೆ ಮುಟ್ಟಿಸುವಂತಹ ಕಾರ್ಯವೈಖರಿಯನ್ನು ಸಭೆಯಲ್ಲಿ ಮನದಟ್ಟು ಮಾಡಲಾಯಿತು. ಇಂತಹ ಒಂದು ವಿಶಿಷ್ಟವಾದ ಸಭೆಯು ಬಹಳ ವರ್ಷಗಳ ಬಳಿಕ ಜಿಲ್ಲೆಯಲ್ಲಿ ನಡೆಯುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಕೇವಲ ರಾಜ್ಯದಲ್ಲಿ ಮಾತ್ರವಲ್ಲದೇ ರಾಷ್ಟ್ರದ ಪ್ರತೀ ರಾಜ್ಯಗಳಲ್ಲಿ ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗುವುದು.

ಕಾರ್ಯಕ್ರಮವನ್ನು  ಉದ್ಫಾಟಿಸಿ ಮಾತನಾಡಿದ ಮಾಜಿ ಕೇಂದ್ರ ಸಚಿವರು, ಎ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಆಸ್ಕರ್ ಫೆರ್ನಾಂಡಿಸ್ ರವರು, ಪಕ್ಷದ ಕಾರ್ಯಕರ್ತರಲ್ಲಿ ಒಗ್ಗಟ್ಟಾದರೆ ಮಾತ್ರವೇ ಪಕ್ಷವನ್ನು ಅಧಿಕಾರಕ್ಕೆ ತರಬಹುದು. ಬೂತ್ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿದರೆ ನಮಗೆ ಯಾವ ಸಮಯದಲ್ಲಿಯೂ ಕೂಡಾ ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಒಂದೆಡೆ ಕಲೆ ಹಾಕಿಸಲು ಸಾಧ್ಯವಾಗುತ್ತದೆ ಎಂದರು.

image002mla-lobo-camp-20160323-002

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್. ಲೋಬೊ ರವರು, ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎಲ್ಲಾ ಬೂತ್‍ಗಳಲ್ಲಿ ಕನಿಷ್ಟ 25 ಸದಸ್ಯರನ್ನು ಸೇರಿಸುವಂತಹ ಕಾರ್ಯದಲ್ಲಿ ನಾವೆಲ್ಲರೂ ಮುತುವರ್ಜಿ ವಹಿಸಬೇಕು ಹಾಗೂ ರಾಜ್ಯ ಸರಕಾರದ ಸಾಧನೆಗಳನ್ನು ಜನತೆಗೆ ಕೊಂಡೊಯ್ಯುವಲ್ಲಿ ಕಾರ್ಯಕರ್ತರು ಯಶಸ್ವಿಯಾಗಿ ಕಾರ್ಯನಿರ್ವಹಿಸಬೇಕು ಎಂದರು. ಕಾರ್ಯಾಗಾರದಲ್ಲಿ ಕೆಪಿಸಿಸಿ ವಕ್ತಾರರಾದ ಬಿ.ಎಸ್. ಹಸನಬ್ಬ, ಕೆಪಿಸಿಸಿ ಕಾರ್ಯದರ್ಶಿ ನಾರಾಯಣ ರಾವ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಭರತ್ ಮುಂಡೋಡಿ ಸಂದರ್ಭೋಚಿತವಾಗಿ ಮಾತನಾಡಿದರು. ಮಹಾಪೌರರಾದ ಹರಿನಾಥ್, ಸುರೇಶ್ ಬಲ್ಲಾಳ್, ಪ್ರಭಾಕರ ಶ್ರೀಯಾನ್ ಉಪಸ್ಥಿತರಿದದರು. ಚರ್ಚಾ ಕಾರ್ಯಕ್ರಮವನ್ನು ಎಐಸಿಸಿ ಸದಸ್ಯರಾದ ಪಿ.ವಿ. ಮೋಹನ್ ನೆರವೇರಿಸಿದರು. ಜೆ.ಎ. ಸಲೀಂ ಮತ್ತು ಶುಭೋದಯ ಆಳ್ವ ಕಾರ್ಯಕ್ರಮ ನಿರ್ವಹಿಸಿದರು.


Spread the love