ಕಡಬದ ಹಳೆ ಪೋಲೀಸ್ ಠಾಣೆಯ ಕಟ್ಟಡದಲ್ಲಿ  ಭಾರೀ ಸ್ಪೋಟ 

Spread the love

ಕಡಬದ ಹಳೆ ಪೋಲೀಸ್ ಠಾಣೆಯ ಕಟ್ಟಡದಲ್ಲಿ  ಭಾರೀ ಸ್ಪೋಟ 

ಮಂಗಳೂರು : ಕಡಬದ ಹಳೆ ಪೋಲೀಸ್ ಠಾಣೆಯ ಕಟ್ಟಡದಲ್ಲಿ ಬುಧವಾರಭಾರೀ ಸ್ಪೋಟ ಸಂಭವಿಸಿದ್ದು, ಸ್ಪೋಟದ ರಭಸಕ್ಕೆ ಪೋಲೀಸ್ ಠಾಣೆಯ ಕಟ್ಟಡ ಭಾಗಶ ಸ್ಪೋಟಗೊಂಡಿದೆ.

ಸ್ಪೋಟದ ರಭಸಕ್ಕೆ ಕಟ್ಟಡದ ಹೆಂಚುಗಳು ಆಕಾಶದೆತ್ತರಕ್ಕೆ ಹಾರಿದ್ದು, ಗೋಡೆಗಳಲ್ಲಿ ಭಾರೀ ಬಿರುಕು ಕಂಡು ಬಂದಿದ್ದು, ಸ್ಟೋಟದ ಶಬ್ದ ಕಡಬ ಪೇಟೆಯಲ್ಲಿರುವ ಸಾರ್ವಜನಿಕರನ್ನು ಬೆಜ್ಜಿ ಬೀಳಿಸಿತ್ತು. ಸ್ಪೋಟಕ್ಕೆ ಸ್ಪಷ್ಟ ಕಾರಣ ಏನು ಎನ್ನುವುದು ತಿಳಿದುಬಂದಿಲ್ಲ.

ಈ ಕಟ್ಟಡದಲ್ಲಿ ಕಡಬ ಪೋಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುವ ಹೋಂಗಾರ್ಡ್ ಗಳು ತಂಗುತ್ತಿದ್ದು, ಸ್ಪೋಟ ಸಂಭವಿಸುವ ವೇಳೆ ಇಲ್ಲಿ ಯಾರೂ ಇರಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಕಡಬ ಪೋಲೀಸ್ ಠಾಣೆಯ ಪಕ್ಕದಲ್ಲೇ ಈ ಘಟನೆ ನಡೆದಿದ್ದು, ಪೋಲೀಸರು ಸ್ಪೋಟಕ್ಕೆ ಕಾರಣ ಏನು ಎನ್ನುವ ಕುರಿತು ತನಿಖೆ ನಡೆಸುತ್ತಿದ್ದಾರೆ.


Spread the love