ಕಲಾಯಿ ಅಶ್ರಫ್ ಹತ್ಯೆ- ಎಸ್.ಡಿ.ಪಿ.ಐ ಆಕ್ರೋಶ; ಪರಿಹಾರಕ್ಕೆ ಒತ್ತಾಯ

Spread the love

ಕಲಾಯಿ ಅಶ್ರಫ್ ಹತ್ಯೆ- ಎಸ್.ಡಿ.ಪಿ.ಐ ಆಕ್ರೋಶ; ಪರಿಹಾರಕ್ಕೆ ಒತ್ತಾಯ

ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಳಿಯ ಕಲಾಯಿ ಅಶ್ರಫ್ ಎಂಬ ಸಾಮಾಜಿಕ ಕಾರ್ಯಕರ್ತನನ್ನು ದುಷ್ಕರ್ಮಿಗಳು ಇಂದು ಕೊಲೆ ಮಾಡಿದ್ದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್‍ರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಸ್.ಡಿ.ಪಿ.ಐ ಪಕ್ಷದ ಅಮ್ಮುಂಜೆ ವಲಯದ ಅಧ್ಯಕ್ಷರಾದ ಕಲಾಯಿ ಅಶ್ರಫ್‍ರವರು ಸಾಮಾಜಿಕ ಕಾರ್ಯಕರ್ತರಾಗಿದ್ದು, ಆ ಭಾಗದ ಎಲ್ಲಾ ಧರ್ಮ ಬಾಂಧವರೊಂದಿಗೆ ಉತ್ತಮ ಸೌಹಾರ್ದ ಸಂಬಂಧ ಹೊಂದಿದ್ದರು. ಇಂದು ಪಕ್ಷದ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಿದ್ದರು. ಸ್ಥಳೀಯ ರಸ್ತೆಯಲ್ಲಿ ಮಳೆ ನೀರು ನಿಂತು ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ಕಂಡು ಪಕ್ಷದ ಇತರ ಕಾರ್ಯಕರ್ತರೊಂದಿಗೆ ಸೇರಿ ಶ್ರಮದಾನದ ಮೂಲಕ ರಸ್ತೆಗಳಿಗೆ ಕಲ್ಲು-ಮಣ್ಣು ತುಂಬಿ ರಿಪೇರಿ ಮಾಡಿದ್ದರು. ನಂತರ ತನ್ನ ರಿಕ್ಷಾದಲ್ಲಿ ದುಡಿಯಲು ಹೊರಟಿದ್ದರು. ಕೊಲೆಗಾರರು ರಿಕ್ಷಾವನ್ನು ಬಾಡಿಗೆಗೆ ಗೊತ್ತು ಪಡಿಸಿ ಅಶ್ರಫ್‍ರನ್ನು ಕರೆದೊಯ್ದು ಬರ್ಬರವಾಗಿ ಕೊಚ್ಚಿ ಕೊಂದಿದ್ದಾರೆ.

ಸಂಘಪರಿವಾರ ಚುನಾವಣೆ ಮತ್ತು ಅಲ್ಪಸಂಖ್ಯಾತರ ಹಬ್ಬಗಳ ಸಂದರ್ಭದಲ್ಲಿ ಕೋಮುಗಲಭೆ ಸೃಷ್ಟಿಸಲು ಹಿಂದಿನಿಂದಲೂ ಸಂಚು ರೂಪಿಸುತ್ತಾ ಬಂದಿತ್ತು ಹಲವು ಗಲಭೆಗಳು ಕೊಲೆಪಾತವು ನಡೆದಿದೆ. ಇತ್ತೀಚಿಗೆ ಕರಾವಳಿ ಕರ್ನಾಟಕದಲ್ಲಿಯೂ ಅಶಾಂತಿ-ಗಲಭೆ ಸೃಷ್ಟಿಯಾಗಿದೆ. ಸರಕಾರದ ಮಂತ್ರಿಗಳೇ ಕರಾವಳಿಯ ಗಲಭೆಗಳಿಗೆ ಆರ್.ಎಸ್.ಎಸ್ ನಾಯಕ ಕಲ್ಲಡ್ಕ ಪ್ರಭಾಕರ ಭಟ್ ನೇರ ಕಾರಣವೆಂದು ಬಹಿರಂಗವಾಗಿ ಹೇಳಿದ್ದಾರೆ. ಹಲವಾರು ಆರೋಪಗಳನ್ನು ಹೊಂದಿರುವ ಕಲ್ಲಡ್ಕ ಪ್ರಭಾಕರ ಭಟ್‍ನನ್ನು ಬಂಧಿಸಿ ಕೇಸು ಜಡಿದು ಶಿಕ್ಷೆ ನೀಡದಿರುವುದೇ ಕರಾವಳಿಯಲ್ಲಿ ಆಗಾಗ ಗಲಭೆಗಳು ಮರುಕಳಿಸಲು ಮುಖ್ಯ ಕಾರಣ. ಶಿಕ್ಷಣ, ಆರೋಗ್ಯ ಮತ್ತು ವಾಣಿಜ್ಯ ರಂಗದಲ್ಲಿ ದೇಶ-ವಿದೇಶದಲ್ಲಿ ಹೆಸರಾದ ಕರಾವಳಿ ಕರ್ನಾಟಕದಲ್ಲಿ ಶಾಂತಿ-ಸೌಹಾರ್ದ ಶಾಶ್ವತವಾಗಿ ಸ್ಥಾಪಿಸಲು ಎಲ್ಲಾ ಹಿಂದೂ-ಮುಸ್ಲಿಂ-ಕ್ರೈಸ್ತ ಬಾಂಧವರು ಜೊತೆಗೂಡಿ ಪ್ರಯತ್ನಿಸಬೇಕು. ಎಸ್.ಡಿ.ಪಿ.ಐ ಸರಕಾರ, ಪೊಲೀಸ್ ಮತ್ತು ಎಲ್ಲಾ ಶಾಂತಿ ಪ್ರಿಯರೊಂದಿಗೆ ಸೇರಿ ಸೌಹಾರ್ದ ವಾತಾವರಣವನ್ನು ಸ್ಥಾಪಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ.

ಬಡ ರಿಕ್ಷಾಚಾಲಕ ಅಶ್ರಫ್ ಕೊಲೆ ಗಡುಕರನ್ನು ಕೂಡಲೇ ಯು.ಎ.ಪಿ.ಎ ಅಡಿಯಲ್ಲಿ ಬಂಧಿಸಿ, ಜಾಮೀನು ಸಿಗದಂತೆ ನೊಡಬೇಕು. ಸಂಘಪರಿವಾರದ ಹಿನ್ನಲೆಯ ಕೊಲೆಗಡುಕರಿಗೆ ಸೂಕ್ತ ಶಿಕ್ಷೆಯಾಗದಿರುವುದೇ ಆಗಾಗ ಕೊಲೆ ನಡೆಯುತ್ತಿರಲಿ ಮುಖ್ಯ ಕಾರಣ. ಬಡ ರಿಕ್ಷಾ ಚಾಲಕ ಕುಟುಂಬಕ್ಕೆ ಸರಕಾರ ಮೂವತ್ತು ಲಕ್ಷ ಪರಿಹಾರ ಕೂಡಲೇ ಪ್ರಕಟಿಸಬೇಕೆಂದು ಎಸ್.ಡಿ.ಪಿ.ಐ ಈ ಮೂಲಕ ಮುಖ್ಯಮಂತ್ರಿಯೊಂದಿಗೆ ಮನವಿ ಮಾಡಿದೆ.

 


Spread the love