ಕಲ್ಲಡ್ಕ ಪ್ರಭಾಕರ ಭಟ್ ಕೇವಲ ಆರ್ ಎಸ್ ಎಸ್, ಹಿಂದೂ ನಾಯಕನಲ್ಲ : ಮಿಥುನ್ ರೈ

Spread the love

ಕಲ್ಲಡ್ಕ ಪ್ರಭಾಕರ ಭಟ್ ಕೇವಲ ಆರ್ ಎಸ್ ಎಸ್ ನಾಯಕನ, ಹಿಂದೂ ನಾಯಕನಲ್ಲ : ಮಿಥುನ್ ರೈ

ಮಂಗಳೂರು: ಕಲ್ಲಡ್ಕ ಪ್ರಭಾಕರ ಭಟ್ ಅವರು ಕೇವಲ ಆರ್ ಎಸ್ ಎಸ್ ನಾಯಕರೇ ಹೊರತು ಹಿಂದೂ ನಾಯಕರಲ್ಲ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಹೇಳಿದ್ದಾರೆ.

ಅವರು ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಬಿಜೆಪಿ ಪಕ್ಷದವರು ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಧಾರ್ಮಿಕ ನಾಯಕರು ಎಂದ ಕರೆಯುತ್ತಾರೆ. ಒಬ್ಬ ಧಾರ್ಮಿಕ ನಾಯಕನಾದವರು ಎಲ್ಲಾ ಧರ್ಮದವರನ್ನು ಪ್ರೀತಿಸುತ್ತಾರೆ ಅಲ್ಲದೆ ಬೇರೆ ಧರ್ಮವನ್ನು ಟೀಕಿಸುವುದಿಲ್ಲ. ಯೂ ಟ್ಯೂಬ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದರೆ ಕಲ್ಲಡ್ಕ ಪ್ರಭಾಕರ ಭಟ್ಟರು ಇತರ ಧರ್ಮಗಳ ಬಗ್ಗೆ ಕೀಳಾಗಿ ಪ್ರಚೋದನಕಾರಿಯಾಗಿ ಮಾತನಾಡಿರುವುದೇ ಕಾಣಸಿಗುತ್ತದೆ. ಸ್ಥಳೀಯ ಚಾನೆಲ್ ಒಂದರಲ್ಲಿ ಭಟ್ ಅವರು ತನ್ನನ್ನೇ ಸ್ವಾಮಿ ವಿವೇಕಾನಂದ ಎಂದು ಹೇಳಿಕೊಂಡಿದ್ದಾರೆ ಆದರೆ ವಿವೇಕನಾಂದ ಅವರು ಸೌಹಾರ್ದತೆ ಮತ್ತು ಒಗ್ಗಟ್ಟಿಗಾಗಿ ಶ್ರಮಿಸಿದವರು. ತಾನು ವಿವೇಕಾನಂದನಿಗೆ ಸಮಾನ ಎನ್ನುವ ಕಲ್ಲಡ್ಕರ ಮಾತುಗಳನ್ನು ನಾವು ಖಂಡಿಸುತ್ತೇವೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಜತೆಗೆ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ರಮಾನಾಥ ರೈ ನೀಡಿರುವ ಸೂಚನೆಯನ್ನೇ ಅಪರಾಧ ಎಂಬಂತೆ ಬಿಂಬಿಸಿ ಬಿಜೆಪಿ ಮತ್ತು ಸಂಘ ಪರಿವಾರ ಶಾಂತಿ ಕದಡುವ ಪ್ರಯತ್ನ ಮಾಡುತ್ತಿವೆ. ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಸಚಿವರು ಹೇಳಿದ ಮಾತುಗಳ ವೀಡಿಯೋ ವೈರಲ್ ಆಗಿದ್ದು, ಸಚಿವರು ಹೇಳಿದ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಒಬ್ಬ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪ್ರಚೋದನಾಕಾರಿ ಭಾಷಣ ಮಾಡುವವರನ್ನು ಬಂಧಿಸುಲು ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದರು.

ಸಚಿವ ರಮಾನಾಥ ರೈ ಅವರು ಒರ್ವ ಸೆಕ್ಯುಲರ್ ನಾಯಕರಾಗಿ ಜನರ ಹೃದಯಗಳನ್ನು ಗೆದ್ದಿದ್ದಾರೆ. 7 ಚುನಾವಣೆಗಳಲ್ಲಿ ಜನರ ಒಟಿನಿಂದ ಗೆದ್ದ ಅವರು ಎಂದಿಗೂ ಕೂಡ ಜಾತಿ ರಾಜಕೀಯ ಮಾಡಿಲ್ಲ. ವೋಟಿಗಾಗಿ ಜಾತಿಗಳನ್ನು ಎತ್ತಿಕಟ್ಟುವ ಸಣ್ಣ ಕೆಲಸ ರೈ ಇದುವರೆಗೆ ಮಾಡಿಲ್ಲ. ರೈ ಅವರ ಕೆಲಸಗಳನ್ನು ಸಹಿಸಲು ಸಾಧ್ಯವಾಗದ ವ್ಯಕ್ತಿಗಳು ಅವರಿಗೆ ವಿರೋಧ ಮಾಡುವ ಕೆಲಸ ಮಾಡುತ್ತಿದ್ದಾರೆ ಆದರೆ ಅದನ್ನು ಎದುರಿಸುವ ತಾಕತ್ತು ರೈಯವರಿಗೆ ಇದೆ ಎಂದರು.

ತಾನು ಹಿಂದು ಆಯಕ ಎನ್ನುವ ಇವರಿಗೆ ವಿನಾಯಕ ಬಾಳಿಗ, ಪ್ರಶಾಂತ್ ಪೂಜಾರಿ, ಹರೀಶ್ ಪೂಜಾರಿ ಮೊದಲಾದವರನ್ನು ಹಿಂದೂಗಳೇ ಹತ್ಯೆ ಮಾಡಿದಾಗ ಯಾಕೆ ಮಾತನಾಡಿಲ್ಲ. ಕಾರ್ತಿಕ್ ರಾಜ್ ಹತ್ಯೆ ವಿರೋಧೀಸಿ ಜಿಲ್ಲೆಗೆ ಬೆಂಕಿ ಕೊಡುತ್ತೇನೆ ಎಂದ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ವೇಳೆ ಯಾಕೆ ಇವರ ಶಾಸಕರು ಸಂಸತ್ತಿನಲ್ಲಿ ದನಿ ಎತ್ತಿಲ್ಲ. ಕೇವಲ ಚುನಾವಣೆ ಬಂದಾಗ ಮಾತ್ರ ಗಲಭೆ ಎಬ್ಬಿಸಿ ಜನರನ್ನು ಹೆದರಿಸುವ ಕೆಲಸ ಮಾಡುವುದು ಇರವ ಜಾಯಮಾನವಾಗಿದ್ದ ಇದಕ್ಕೆ ಅವಕಾಶ ನೀಡುವುದಿಲ್ಲ ೆಂದರು.

ಜಿಲ್ಲಾಯುವ ಕಾಂಗ್ರೆಸ್ ನಾಯಕರಾದ ಪ್ರವೀಣ್ ಚಂದ್ರ ಆಳ್ವ, ಪವೂಫ್ ಬಜಾಳ್, ಸಂತೋಷ್ ಶೆಟ್ಟಿ, ರಿಶೀಶ್ ಆಳ್ವ, ಪ್ರಸಾದ್ ಮಲ್ಲಿ, ಪ್ರಶಾಂತ್ ಕುಲಾಲ್, ಕಿರಣ್, ರೂಪೇಶ್ ಶೆಟ್ಟಿ ಉಪಸ್ಥಿತರಿದ್ದರು.


Spread the love