ಕಾಪು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸ್ಟೀವನ್ ಕುಲಾಸೊ ನೇಮಕ

Spread the love

ಕಾಪು ಯುವ ಕಾಂಗ್ರೆಸ್  ಪ್ರಧಾನ ಕಾರ್ಯದರ್ಶಿಯಾಗಿ ಸ್ಟೀವನ್ ಕುಲಾಸೊ ನೇಮಕ

ಉಡುಪಿ: ಕಾಪು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸ್ಟೀವನ್ ಕುಲಾಸೊ ಉದ್ಯಾವರ ಅವರನ್ನು ನೇಮಿಸಿಲಾಗಿದೆ.

ಕಾಪು ಕ್ಷೇತ್ರದ ಶಾಸಕ ವಿನಯ್ ಕುಮಾರ್ ಸೊರಕೆಯವರ ಶಿಫಾರಸ್ಸಿನ ಮೇರೆಗೆ ಕಾಪು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಮೆಲ್ವಿನ್ ಡಿ’ಸೋಜಾ ಅವರು ನೇಮಕದ ಆದೇಶವನ್ನು ಹೊರಡಿಸಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಪಕ್ಷ ಸಂಘಟನೆಗೊಳಿಸುವುದರೊಂದಿಗೆ ಪಕ್ಷದ ಹಾಗೂ ಸರಕಾರದ ಕಾರ್ಯಕ್ರಮಗಳ ಕುರಿತು ಪ್ರಚಾರ ಮಾಡುವಂತೆ ಸೂಚನೆ ನೀಡಿದ್ದಾರೆ.

ಗ್ರಾಮೀಣ ಕಾಂಗ್ರೆಸಿನಲ್ಲಿ ಸಕ್ರಿಯವಾಗಿರುವ ಸ್ಟೀವನ್ ಕುಲಾಸೊ ಉತ್ತಮ ವಾಗ್ಮಿಯಾಗಿದ್ದು, ಐಸಿವೈಎಮ್, ಜೇಸಿಸ್ ಹಾಗೂ ಇತರ ಹಲವಾರು ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಅತ್ಯುತ್ತಮ ಕಾರ್ಯನಿರ್ವಾಹಕರು ಕೂಡ ಅವರಾಗಿದ್ದಾರೆ.


Spread the love