ಕುಂದಾಪುರ: ಮೋದಿ ಜೊತೆ ಚೀನಾ ಪ್ರವಾಸಕ್ಕೆ ಹೋಗುವುದಿಲ್ಲ, ಇದರಲ್ಲಿ ರಾಜಕೀಯ ಇಲ್ಲ – ಸಿದ್ಧರಾಮಯ್ಯ

Spread the love

ಕುಂದಾಪುರ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಚೀನಾ ಪ್ರವಾಸಕ್ಕೆ ತಾನು ಹೋಗುತ್ತಿಲ್ಲ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಅವರೊಂದಿಗೆ ಆಸಕ್ತಿ ಇರೋ ಮುಖ್ಯಮಂತ್ರಿಗಳು ಚೀನಾ ಪ್ರವಾಸಕ್ಕೆ ಬರಬಹುದು ಅಂತ ಒಂದು ಸಲಹೆ ಇದೆ ಅಷ್ಟೇ, ಹೊರತು ಅದೇನೂ ಅಧಿಕೖತ ಅಹ್ವಾನ ಅಲ್ಲ, ಆದ್ದರಿಂದ ತಾನು ಹೋಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

3

 

ವಾರಾಹಿ ನದಿ ನೀರಾವರಿ ಯೋಜನೆಯ ಉದ್ಘಾಟನೆಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮೋದಿ ಅವರು ಚೀನಾದಲ್ಲಿ ರೋಡ್ ಶೋ ಮಾಡುತ್ತಾರೋ ಇಲ್ಲ ಇನ್ನೇನೋ ಮಾಡುತ್ತಾರೋ ಗೊತ್ತಿಲ್ಲ. ಪ್ರವಾಸದ ವಿವರಗಳೂ ತಮಗೆ ಗೊತ್ತಿಲ್ಲ. ಇಲ್ಲಿ ಗ್ರಾ.ಪಂ. ಚುನಾವಣೆಗಳು ನಡೆಯಬೇಕಾಗಿವೆ. ಅದರಲ್ಲಿ ನಾನು ವ್ಯಸ್ತನಾಗಿದ್ದೇನೆ ಎಂದರು.

ಬೇರೆ ರಾಜ್ಯಗಳಿಗೆ ಹೋಗಿ ರೈತರ ಸಮಸ್ಯೆ ಕೇಳುತ್ತಿರುವ ರಾಹುಲ್ ಗಾಂಧಿ ಕರ್ನಾಟಕಕ್ಕೆ ಬಂದು ರೈತರ ಸಮಸ್ಯೆ ಕೇಳುತ್ತಿಲ್ಲ ಎಂದು ಎಚ್. ಡಿ. ಕುಮಾರಸ್ವಾಮಿ ಹೇಳುವುದಕ್ಕೆ, ರಾಹುಲ್ ಗಾಂಧಿ ಏನು ಮಾಡಬೇಕು ಏನು ಮಾಡಬಾರದು ಎಂದು ಕುಮಾರಸ್ವಾಮಿ ಹೇಳಬೇಕೆನ್ರಿ ಎಂದು ರೇಗಿದ ಸಿದ್ಧರಾಮಯ್ಯ, ರಾಹುಲ್ ಗಾಂಧಿ ಎಲ್ಲಾ ರಾಜ್ಯಗಳಿಗೂ ಹೋಗ್ತಾರೆ, ಕರ್ನಾಟಕಕ್ಕೂ ಬರ್ತಾರೆ, ಅದನ್ನು ಯಾರೂ ಹೇಳಬೇಕಾಗಿಲ್ಲ. ಕುಮಾರಸ್ವಾಮಿ
ತನ್ನ ಸರ್ಕಾರ ಇದ್ದಾಗ ರೈತರಿಗೆ ಏನೂ ಮಾಡಿಲ್ಲ, ಈಗ ರೈತರ ಬಗ್ಗೆ ಏನಂತ ಮಾತಾಡ್ತಿದ್ದಾರೆ ಎಂದು ಪ್ರಶ್ನಿಸಿದರು.

ರಾಜ್ಯದ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಪೂರ್ಣ ಆಗಿದೆ. ಆಗಿಲ್ಲ ಅಂತ ರಾಜ್ಯದ ಕೆಲವು ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರ ವಿರುದ್ಧ ರಾಹುಲ್ ಗಾಂಧಿಗೆ ದೂರು ನೀಡಿದ್ದಾರೆ ಎನ್ನುವುದು ಸುಳ್ಳು. ನಿಗಮ ಮಂಡಳಿಗಳ ನಿರ್ದೇಶಕ ನೇಮಕ ಆಗಿಲ್ಲ. ಆದರೇ ಪಟ್ಟಿ ಸಿದ್ಧವಾಗಿದೆ ಎಂದವರು ಹೇಳಿದರು.
ಮಚ್ಚಿರುವ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಪುನಃ ಆರಂಭಿಸುವುದು ಎಷ್ಟು ಲಾಭದಾಯಕ, ಸಾಧಕ ಬಾಧಕಗಳೆನೂ ಎಂಬ ಬಗ್ಗೆ ಚರ್ಚೆ ಆಗಬೇಕು, ಇಲ್ಲಿನ ರಾಜ್ಯ ಸಭಾ ಸದಸ್ಯ ಆಸ್ಕರ್ ಅವರೊಂದಿಗೆ ಈ ಬಗ್ಗೆ ಮಾತುಕತೆ ಮಾಡುತ್ತೇನೆ ಮತ್ತು ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.


Spread the love