ಕುವೈಟಿನಲ್ಲಿ ಡಾ. ಡಿ.ಕೆ. ಚೌಟ ಅವರ ಅನುವಾದಿತ ಇಂಗ್ಲಿಷ್ ಕಾದಂಬರಿ ಲೋಕಾರ್ಪಣೆ

Spread the love

ಕುವೈಟಿನಲ್ಲಿ ಡಾ. ಡಿ.ಕೆ. ಚೌಟ ಅವರ ಅನುವಾದಿತ ಇಂಗ್ಲಿಷ್ ಕಾದಂಬರಿ ಲೋಕಾರ್ಪಣೆ

ಕುವೈಟ್ : ಡಾ. ಡಿ. ಕೆ. ಚೌಟ ಅವರ ತುಳು ಕಾದಂಬರಿ, ಡಾ. ಬಿ. ಸುರೇಂದ್ರ ರಾವ್ ಮತ್ತು ಪ್ರೊ. ಕೆ. ಚಿನ್ನಪ್ಪ ಗೌಡ ಅವರು ಅನುವಾದಿಸಿರುವ ಮಿತ್ತಬೈಲು ಯಮುನಕ್ಕ ಇಂಗ್ಲಿಷ್ ಕಾದಂಬರಿಯು ಶುಕ್ರವಾರ ಸಂಜೆ ಕುವೈಟ್ ನ ಮಿಶ್ರೇಪ್ ಗಾರ್ಡನ್ ನಲ್ಲಿ ಲೋಕಾರ್ಪಣೆಗೊಂಡಿತು.

ತುಳು ಕೂಟ ಕುವೈಟ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಬಂಟರ ಸಂಘ ಕುವೈಟ್ , ಜಿ. ಎಸ್ .ಬಿ. ಸಭಾ, ಕುವೈಟ್ , ಕುವೈಟ್ ಸಾಹಿತ್ಯ ಸಂಪದ, ಭಾರತೀಯ ಪ್ರವಾಸಿ ಪರಿಷತ್ ಇವರು ಸಹಯೋಗ ನೀಡಿದ್ದರು.

ತುಳುಕೂಟದ ಅಧ್ಯಕ್ಷ ವಿಲ್ಸನ್ ಡಿಸೋಜ ಮತ್ತು ಕುವೈಟ್ ಜಿ.ಎಸ್.ಬಿ. ಸಭಾದ ಮಂಜೇಶ್ವರ ಮೋಹನದಾಸ್ ಕಾಮತ್ ಈ ಕಾರ್ಯಕ್ರಮ ಸಂಯೋಜಿಸುವಲ್ಲಿ ತುಂಬಾ ಶ್ರಮವಹಿಸಿದ್ದಾರೆ.

ಕುವೈಟ್ ತುಳು ಕೂಟದ ಪ್ರವಾಸಿ ದಿನಾಚರಣೆಯ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು ನಾಲ್ಕು ನೂರಕ್ಕೂ ಮಿಕ್ಕಿ ಕುವೈಟ್ ವಾಸಿ ಭಾರತೀಯರು ಭಾಗವಹಿಸಿದ್ದರು.


Spread the love