ಕೆಲಸಕ್ಕಿದ್ದ ಬಾಗಲಕೋಟೆ ಮೂಲದ ಯುವತಿ ನಾಪತ್ತೆ

Spread the love

ಕೆಲಸಕ್ಕಿದ್ದ ಬಾಗಲಕೋಟೆ ಮೂಲದ ಯುವತಿ ನಾಪತ್ತೆ

ಮ0ಗಳೂರು : ರಾತ್ರಿ ಮನೆಯಲ್ಲಿ ಮಲಗಿದ್ದ ಯುವತಿ ಬೆಳಗಿನ ಜಾವ ನೋಡುವಾಗ ಮನೆಯಿಂದ ನಾಪತ್ತೆಯಾಗಿರುವ ಬಗ್ಗೆ ಮೂಡಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತ: ಬಾಗಲಕೋಟೆ ಜಿಲೆಯ ಭಾಗ್ಯಶ್ರೀ(19) ಎಂಬಾಕೆ ಕುಟುಂಬದೊಂದಿಗೆ ತೆಂಕಮಿಜಾರು ಗ್ರಾಮದ ಪೂಮಾರಪದವು ಎಂಬಲ್ಲಿ ವಾಸವಾಗಿದ್ದು, ಫೆಬ್ರವರಿ 12ರಂದು ಮನೆಯಿಂದ ನಾಪತ್ತೆಯಾಗಿರುತ್ತಾಳೆ. ಈಕೆ ಎಣ್ಣೆ ಕಪ್ಪು ಮೈಬಣ್ಣ ಎತ್ತರ 5 ಅಡಿ ಇರುತ್ತಾಳೆ.

ಸಾರ್ವಜನಿಕರ ಇವರನ್ನು ಎಲ್ಲಾದರೂ ಕಂಡಲ್ಲಿ ಮೂಡಬಿದ್ರೆ ಪೊಲೀಸ್ ಠಾಣೆ, ದೂರವಾಣಿ 08258-236333 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.


Spread the love