ಕೇಂದ್ರದ ಜನಪರ ಯೋಜನೆಗಳ ಲಾಭ ಪಡೆಯಲು ಆಧಾರ್ ಕಾರ್ಡ ಮಾಡಿಸಿ- ವೇದವ್ಯಾಸ ಕಾಮತ್

Spread the love

ಕೇಂದ್ರದ ಜನಪರ ಯೋಜನೆಗಳ ಲಾಭ ಪಡೆಯಲು ಆಧಾರ್ ಕಾರ್ಡ ಮಾಡಿಸಿ- ವೇದವ್ಯಾಸ ಕಾಮತ್

ಮಂಗಳೂರು: ಕೇಂದ್ರ ಸರಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ಕಾರ್ಡ ಅತ್ಯಗತ್ಯವಾಗಿದ್ದು, ಅದನ್ನು ಮಾಡಿಸಿಕೊಳ್ಳುವಲ್ಲಿ ನಾಗರಿಕರು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಹೇಳಿದರು. ಅವರು ಭಾರತೀಯ ಜನತಾ ಪಾರ್ಟಿಯ ವತಿಯಿಂದ ಮತ್ತು ಸ್ಥಳೀಯ ಸಂಘಸಂಸ್ಥೆಗಳ ಸಹಕಾರದೊಂದಿಗೆ ನಾಗರಿಕರ ಅನುಕೂಲತೆಗಾಗಿ ಕುಲಶೇಖರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಧಾರ್ ಕಾರ್ಡ ನೊಂದಾವಣಿ ಕೇಂದ್ರಕ್ಕೆ ಭೇಟಿ ಕೊಟ್ಟ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.
ಮಿಡ್ ಡೇ ಮಿಲ್, ದೀನದಯಾಳ್ ಅಂತ್ಯೋದಯ ಯೋಜನಾ, ರಾಷ್ಟ್ರೀಯ ಗ್ರಾಮೀಣ ಮಿಶನ್, ಬೀಡಿ, ಕಲ್ಲುಗಾರಿಕೆ, ಲೈಮ್ ಸ್ಟೋನ್ ಕಾರ್ಮಿಕರ ಭವಿಷ್ಯ ನಿಧಿ ಯೋಜನೆ, ಫಸಲು ವಿಮೆ ಯೋಜನೆ, ತೋಟಗಾರಿಕೆ ಇಲಾಖೆಯಿಂದ ಸೌಲಭ್ಯ, ಗೃಹ ಕಲ್ಯಾಣ ಸ್ಕೀಮ್, ಭೂಮಿ ಆರೋಗ್ಯ ಕಾರ್ಡ, ಗರ್ಭಿಣಿ ಆರೋಗ್ಯ ಕಾರ್ಡ, ಉದ್ಯೋಗಸ್ಥ ಮಹಿಳೆಯರಿಗೆ ಸಾಲ ಸೌಲಭ್ಯ, ಪೌಷ್ಟಿಕಾಂಶ ಆಹಾರ ಸ್ಕೀಮ್, ಕೃಷಿಕರಿಗೆ ಕ್ಯಾಶ್ ಸಬ್ಸಿಡಿ, ಮಹಿಳಾ ಸಬಲೀಕರಣ ಸ್ಕೀಮ್, ವಿದ್ಯಾರ್ಥಿಗಳಿಗೆ ಕೇಂದ್ರಿಯ ಸ್ಕಾಲರ್ ಶಿಪ್ ಸ್ಕೀಮ್, ಸರ್ವ ಶಿಕ್ಷಾ ಅಭಿಯಾನ, ರಾಷ್ಟ್ರೀಯ ಆರೋಗ್ಯ ಮಿಶನ್
ಎಲ್ ಪಿಜಿ ಸಬ್ಸಿಡಿ ಪಡೆದುಕೊಳ್ಳಲು, ಜನಧನ್ ಖಾತೆ ತೆರೆಯಲು ಆ ಮೂಲಕ ರೂಪೇ ಕಾರ್ಡ, ಝೀರೋ ಬ್ಯಾಲೆನ್ಸ್, ಲೈಫ್ ಅಪಘಾತ ವಿಮೆ ಪಡೆಯಲು, ಪಾಸ್ ಪೋರ್ಟ್ ಮಾಡಿಸಲು ಆಧಾರ್ ಕಾರ್ಡ ಕಡ್ಡಾಯವಾಗಿದೆ. ಡಿಜಿಟಲ್ ಲಾಕರ್ ತೆರೆಯಲು, ಪೆನ್‍ಶನ್ ಸ್ಕೀಮ್, ಪ್ರಾವಿಡೆಂಟ್ ಫಂಡ್ ಮತ್ತು ಬ್ಯಾಂಕಿನಲ್ಲಿ ಹೊಸ ಖಾತೆ ತೆರೆಯಲು ಆಧಾರ್ ಕಾರ್ಡ ಅಗತ್ಯ. ಹಾಗೇ ವೋಟರ್ ಕಾರ್ಡಿಗೆ ಲಿಂಕ್ ಮಾಡುವುದರಿಂದ ಸುಳ್ಳು ವೋಟಿಂಗ್ ಕಾರ್ಡ ನಿಲ್ಲಿಸಬಹುದು. ಆದ್ದರಿಂದ ಭಾರತದ ಜವಾಬ್ದಾರಿಯುತ ನಾಗರಿಕರಾಗಿ, ದೇಶದ ಅಭಿವೃದ್ಧಿಗೆ ಬಿಜೆಪಿಯೊಂದಿಗೆ ಕೈ ಜೋಡಿಸುವ ಮೂಲಕ ಪ್ರತಿಯೊಬ್ಬ ನಾಗರಿಕರು ಆಧಾರ್ ಕಾರ್ಡ ಮಾಡಿಸಿಕೊಳ್ಳಲು ಮುಂದಾಗಬೇಕು ಎಂದು ವೇದವ್ಯಾಸ ಕಾಮತ್ ತಿಳಿಸಿದರು.


Spread the love