ಕೇಂದ್ರ ಗೃಹ ಇಲಾಖೆಗೆ ಸುಳ್ಳು ಮಾಹಿತಿ ನೀಡಿದ ಸಂಸದೆ ಶೋಭಾ ರಾಜೀನಾಮೆಗೆ ಎಸ್ ಡಿಪಿಐ ಆಗ್ರಹ

Spread the love

ಕೇಂದ್ರ ಗೃಹ ಇಲಾಖೆಗೆ ಸುಳ್ಳು ಮಾಹಿತಿ ನೀಡಿದ ಸಂಸದೆ ಶೋಭಾ ರಾಜೀನಾಮೆಗೆ ಎಸ್ ಡಿಪಿಐ ಆಗ್ರಹ

ಮಂಗಳೂರು: ವಿವಿಧ ಘಟನೆಗಳಲ್ಲಿ ಮೃತರಾದ 23 ಮಂದಿ ಹಿಂದೂಗಳ ಪಟ್ಟಿಯನ್ನು ಕೇಂದ್ರ ಗೃಹಖಾತೆಗೆ ಸಲ್ಲಿಸಿ ಇವರನ್ನೆಲ್ಲಾ ಮುಸ್ಲಿಮರು ಕೊಂದಿದ್ದಾರೆ ಮತ್ತು ಇವರಿಗೆ ಪಿಎಫ್ಐ ಹಾಗೂ ಎಸ್ ಡಿಪಿಐ ಬೆನ್ನೆಲುಬಾಗಿ ನಿಂತಿದೆ ಎಂದು ಆರೋಪ ಮಾಡಿ ಕೇಂದ್ರ ಗೃಹ ಇಲಾಖೆಗೆ ಸುಳ್ಳು ಮಾಹಿತಿ ನೀಡಿರುವ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ವಿರುದ್ದ ರಾಜ್ಯ ಸರಕಾರ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು ಅಲ್ಲದೆ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಇಲ್ಲವೆ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂದು ಎಸ್.ಡಿ.ಪಿ.ಐ ದ.ಕ. ಜಿಲ್ಲಾ ಸಮಿತಿ ಆಗ್ರಹಿಸಿದ್ದಾರೆ.

ಈ ಕುರಿತು ಜಿಲ್ಲಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿದ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮಾತನಾಡಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದೆ ಶೋಭಾ ಕರಂದ್ಲಾಜೆ ರಾಜ್ಯದ ಅಭಿವೃದ್ಧಿಯ ಬದಲು ಕೀಳುಮಟ್ಟದ ರಾಜಕೀಯದಲ್ಲಿ ತೊಡಗಿದ್ದಾರೆ. ಕೊಲೆಯತ್ನಕ್ಕೀಡಾಗಿ ಇದೀಗ ಬದುಕುಳಿದಿರುವ ಮೂಡಬಿದರೆಯ ಅಶೋಕ್ ಪೂಜಾರಿಯನ್ನು ಕೊಲೆಯಾದವರ ಪಟ್ಟಿಯಲ್ಲಿ ಸೇರಿಸಿ ತಪ್ಪಿಸಗಿದ್ದಾರೆ. ಕಳೆದ ಎರಡು ತಿಂಗಳಿನಿಂದ ಜಿಲ್ಲೆಯ ಶಾಂತಿಗೆ ಧಕ್ಕೆ ಬಂದಿದ್ದು, ಕಳೆದ ಎರಡು ವಾರಗಳಿಂದ ಜಿಲ್ಲೆ ಸಹಜ ಸ್ಥಿತಿಗೆ ಮರಳುತ್ತಿದ್ದು ಸಂಸದರ ಇಂತಹ ಬೇಜವ್ಬಾರಿ ವರ್ತನೆಯಿಂದ ಜಿಲ್ಲೆಯಲ್ಲಿ ಮತ್ತೆ ಅಶಾಂತಿಯ ವಾತಾವರಣ ಸೃಷ್ಟಿಯಾಗುವ ಅಪಾಯವಿದೆ ಎಂದರು.

ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿಗೆ ಯಾವುದೇ ವಿಷಯವಿಲ್ಲದಾಗಿದ್ದು, ಸಂಸದೆ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್, ಬಿ.ಎಸ್.ಯಡ್ಯೂರಪ್ಪ, ಶಾಸಕ ಸುನೀಲ್ ಕುಮಾರ್ ಸೇರಿಕೊಂಡು ಜಿಲ್ಲೆಯಲ್ಲಿ ಕೋಮು ಸಂಘರ್ಷವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಶೋಭಾ ಕರಂದ್ಲಾಜೆ ಸೂಚಿಸಿದ 23 ಹಿಂದೂ ನಾಯಕರ/ಕಾರ್ಯಕರ್ತರ ಕೊಲೆಗಳಲ್ಲಿ ಅಶೋಕ್ ಪೂಜಾರಿ ಜೀವಂತವಿದ್ದು, ಉಳಿದ 19 ಘಟನೆಗಳಲ್ಲಿ ಮೃತರಾಗಿರುವವರು ಆತ್ಮಹತ್ಯೆ, ಗ್ಯಾಂಗ್ ಪರಿಣಾಮದಿಂದ ಆಗಿದ್ದಾರೂ ಕೂಡ ಶೋಭಾ ಅವರು ಅದನ್ನು ಮುಸ್ಲಿಂ ಸಂಘಟನೆ ಹಾಗೂ ಕಾಂಗ್ರೆಸ್ ಸರಕಾರವನ್ನು ಜವಾಬ್ದಾರಿ ಮಾಡುತ್ತಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬರುವ ಸಲುವಾಗಿ ಉತ್ತರಪ್ರದೇಶದಲ್ಲಿ ಕೋಮುಗಲಭೆ ಸೃಷ್ಟಿಸಿಕೊಂಡು ಅಧಿಕಾರವನ್ನು ಪಡೆಯಿತು ಅದನ್ನೇ ಕರ್ನಾಟಕದಲ್ಲಿ ಕೂಡ ಮುಂದುವರೆಸುವ ಯೋಜನೆಯನ್ನು ಬಿಜೆಪಿ ಹಾಕಿಕೊಂಡಿದೆ. ಶೋಭಾ ಕರಂದ್ಲಾಜೆ ಕಾಂಗ್ರೆಸ್ ಸರಕಾರದ ಮೇಲೆ ಸುಳ್ಳು ಆರೋಪವನ್ನು ಹೊರಿಸಿದ್ದು ಆದ್ದರಿಂದ ಸರಕಾರ ಕೂಡಲೇ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.


Spread the love