ಕೊಣಾಜೆ: ಗಾಂಜಾ ಮಾರಾಟಗಾರನ ಬಂಧನ

Spread the love

ಕೊಣಾಜೆ: ಗಾಂಜಾ ಮಾರಾಟಗಾರನ ಬಂಧನ

ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ಸರಹದ್ದಿನ ತೌಡುಗೋಳಿ ಕ್ರಾಸ್ ಬಳಿ ಯುವಕನೋರ್ವ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಎಸಿಪಿ ರಾಮರಾವ್ ನೇತೃತ್ವದ ರೌಡಿ ನಿಗ್ರಹ ದಳ ಸಿಬ್ಬಂದಿಯವರು ಮತ್ತು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಬಂಟ್ವಾಳ ನರಿಂಗಾನ ತೌಡುಗೋಳಿ ನಿವಾಸಿ ಹಫೀಜ್ @ ಅಭಿ @ ಮೊಯ್ದಿನಬ್ಬ (32) ಎಂದು ಗುರುತಿಸಲಾಗಿದೆ.

ಬಂಧಿತನಿಂದ ಸುಮಾರು 1.350 ಕೆ.ಜಿ ಗಾಂಜಾ ಮತ್ತು ನಗದು ರೂ.2500/ ಸ್ವಾಧೀನಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈತನ ಮೇಲೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ,ಕರಾವಳಿ ಕಾವಲು ಪಡೆ ಠಾಣೆ, ಕೊಣಾಜೆ, ಮತ್ತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಗಾಂಜಾ ಮಾರಾಟದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.ಸುಮಾರು ಒಂದೂವರೆ ತಿಂಗಳ ಜಾಮೀನಿನ ಮೇಲೆ ಹೊರಬಂದಿರುವುದಾಗಿದೆ.ಪ್ರಸಕ್ತ ಈತನ ಮೇಲೆ ಉಳ್ಳಾಲ ಪೊಲೀಸ್ ಠಾಣೆಯ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ನ್ಯಾಯಾಲಯ ವಾರಂಟು ಹೊರಡಿಸಿರುತ್ತದೆ.

ಈ ಕಾರ್ಯಾಚರಣೆಯಲ್ಲಿ ಮಂಗಳೂರು ದಕ್ಷಿಣ ಉಪ ವಿಭಾಗ ಎ.ಸಿ.ಪಿ ಯವರ ಆದೇಶದಂತೆ ರೌಡಿ ನಿಗ್ರಹ ದಳದ ಸಿಬ್ಬಂದಿವರು ಮತ್ತು ಕೊಣಾಜೆ ಪಿಎಸ್ಐ ವೆಂಕಟೇಶ್.ಐ ಮತ್ತು ಸಿಬ್ಬಂದಿಯವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿದರು


Spread the love