ಕ್ಷಯರೋಗಕ್ಕೆ ಇನ್ನು ಪ್ರತಿನಿತ್ಯ ಡಾಟ್ಸ್

Spread the love

ಕ್ಷಯರೋಗಕ್ಕೆ ಇನ್ನು ಪ್ರತಿನಿತ್ಯ ಡಾಟ್ಸ್

ಮ0ಗಳೂರು: ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕ್ಷಯರೋಗ ವಿಭಾಗದ ವತಿಯಿಂದ ಪರಿಷ್ಕøತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಮತ್ತು ತಾಂತ್ರಿಕ ಕಾರ್ಯಕಾರಿ ಮಾರ್ಗಸೂಚಿ ತರಬೇತಿಯಲ್ಲಿ ಕ್ಷಯರೋಗಕ್ಕೆ ನೀಡುತ್ತಿದ್ದ ಡಾಟ್ಸ್ ಔಷಧಿಯನ್ನು ರೋಗಿಗಳು ಪ್ರತಿನಿತ್ಯ ಬಳಸುವಂತೆ ಮಾಡಲು ಮತ್ತು ಜಾಗೃತಿಯನ್ನು ಮೂಡಿಸುವ ಕಾರ್ಯಕ್ಕೆ ದ.ಕ.ಜಿಲ್ಲಾ ಪಂಚಾಯತ್‍ನ ಅಧ್ಯಕ್ಷರಾಧ ಮೀನಾಕ್ಷಿ ಶಾಂತಿಗೋಡುರವರು ಚಾಲನೆಯನ್ನು ನೀಡಿದರು.

ಇಂದು ಜಿಲ್ಲಾ ಕ್ಷಯರೋಗ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇದು ಉತ್ತಮವಾದ ಬೆಳವಣಿಗೆಯಾಗಿದ್ದು ,ರೋಗಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿದರು. ಅಲ್ಲದೇ ಈ ಔಷಧದ ಕುರಿತು ಸಾರ್ವಜನಿಕರಲ್ಲೂ ಅರಿವನ್ನು ಮೂಡಿಸಿ ಜಿಲ್ಲೆಯಲ್ಲಿರುವ ಕ್ಷಯರೋಗದ ನಿರ್ಮೂಲನೆಯನ್ನು ಮಾಡುವ ಅಗತ್ಯವಿದೆ ಎಂದು ಹೇಳಿದರು.

ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿಯಾದ ಡಾ.ಬದ್ರುದ್ದೀನ್‍ರವರು ಮಾತನಾಡಿ ರಾಜ್ಯದ 11 ಜಿಲ್ಲೆಗಳಲ್ಲಿ ಈಗಾಗಲೇ ಈ ಔಷಧವನ್ನು ಬಳಸುತ್ತಿದ್ದು. ದ.ಕ.ಜಿಲ್ಲೆಯಲ್ಲಿಯೂ ಕೂಡ ಇದರ ಬಳಕೆಯನ್ನು ಮಾಡಿಸುವುದಾಗಿ ತಿಳಿಸಿದರು. ಅಲ್ಲದೇ ಇದರ ಕುರಿತು ಅರಿವನ್ನು ಮೂಡಿಸಲು ಜಿಲ್ಲೆಯಲ್ಲಿ 7 ಕ್ಷಯರೋಗ ನಿಯಂತ್ರಣ ಘಟಕವನ್ನು ಸ್ಥಾಪಿಸಲಾಗಿದೆ. ಪ್ರತಿಯೊಂದು ಘಟಕದಲ್ಲಿ ಹಿರಿಯ ಕ್ಷಯ ಚಿಕಿತ್ಸಾ ಮೇಲ್ವಿಚಾರಕರು ಮತ್ತು ಪ್ರಯೋಗಶಾಲಾ ಮೇಲ್ವಿಚಾರಕರು ಕೆಲಸ ನಿರ್ವಹಿಸುತ್ತಿರುವರು. ಬೆಡಕ್ಯುಲಿನ್ ಡೆಲಾಮೈಡ್ ಎಂಬ ಔಷಧಿಯು ಅತೀ ವೇಗವಾಗಿ ರೋಗವನ್ನು ನಿಯಂತ್ರಿಸುವ ಸಾಮಥ್ರ್ಯವನ್ನು ಹೊಂದಿದ್ದು ಇದನ್ನು ಕೂಡ ಆದಷ್ಟು ಬೇಗ ಪೊರೈಸುವುದಾಗಿ ತಿಳಿಸಿದರು.

ಅಲ್ಲದೇ ಹಿಂದೆ ಈ ಔಷಧಿಯನ್ನು ವಾರಕ್ಕೆ 3 ದಿನ ಮಾತ್ರ ನೀಡಲಾಗುತ್ತಿದ್ದು ಆರೋಗ್ಯದ ಹಿತದೃಷ್ಠಿಯಿಂದ ಇನ್ನು ವಾರದ ಏಳು ದಿನವೂ ಇದರ ಬಳಕೆಯನ್ನು ಮಾಡಿಸಲಾಗುವುದು. ರೋಗಿಗಳ ಗೌಪ್ಯತೆಯನ್ನು ಕಾಪಾಡಲು ಅವರಿಗೆ ಹತ್ತಿರವಿರುವ ಆರೋಗ್ಯ ಕೇಂದ್ರ ಅಥವಾ ಅಂಗನವಾಡಿಗಳಲ್ಲಿ ಈ ಔóಷಧವನ್ನು ವಿತರಿಸಲಾಗುತ್ತದೆ. ಕ್ಷಯರೋಗದ ಪತ್ತೆಯನ್ನು ಶೀಘ್ರವಾಗಿ ಮಾಡಲು ಸಿ.ಬಿ ನಾಟ್ ಯಂತ್ರವನ್ನು ಮಂಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಬಳಸುತ್ತಿದ್ದು ಪುತ್ತೂರು ತಾಲೂಕಿನಲ್ಲಿಯೂ ಈ ಯಂತ್ರವನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ.


Spread the love