ಕ್ಷಯ ರೋಗದ ಬಗ್ಗೆ ಅರಿವು ಕಾರ್ಯಕ್ರಮ

Spread the love

ಕ್ಷಯರೋಗದ ಬಗ್ಗೆ ಅರಿವು ಕಾರ್ಯಕ್ರಮ

ಕಾರ್ಕಳ : ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಳ್ಮಣ್ ಮತ್ತು ಕಾರ್ಕಳ ಕ್ಷಯ ಘಟಕ ಇದರ ಸಹಭಾಗಿತ್ವದಲ್ಲಿ ಆದಿಲಕ್ಷ್ಮೀ ಗಾರ್ಮೆಂಟ್ಸ್ ನಂದಳಿಕೆ ಇಲ್ಲಿ ಕ್ಷಯರೋಗದ ಬಗ್ಗೆ ಅರಿವು ಕಾರ್ಯಕ್ರಮ ನಡೆಸಲಾಯಿತು.

tb-awarness-udupi

ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಛೇರಿ ಉಡುಪಿ ಇಲ್ಲಿನ ಪಿ.ಪಿ.ಎಮ್. ಸಂಯೋಜಕರಾದ ಸುರೇಶ್ ಇವರು ಮಾತನಾಡಿ ಕ್ಷಯರೋಗದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಪ್ರಸ್ತುತ ಜಗತ್ತಿನಲ್ಲಿ ಕ್ಷಯರೋಗವು ಮಾರಕವಾಗಿ ಪರಿಣಮಿಸಿದ್ದು ಇದನ್ನು ನಿಯಂತ್ರಿಸುವ ಬಗ್ಗೆ ಜನರು ಜಾಗೃತರಾಗಬೇಕೆಂದು ತಿಳಿಸಿದರು. ಪ್ರಪಂಚದಲ್ಲಿ ಭಾರತವು ಕ್ಷಯರೋಗಲದಲ್ಲಿ ಮೊದಲ ಸ್ಥಾನದಲ್ಲಿರುವುದು ತುಂಬಾ ಆಘಾತಕಾರಿ ಬೆಳವಣಿಗೆ. ಈ ನಿಟ್ಟಿನಲ್ಲಿ ಇದನ್ನು ನಿಯಂತ್ರಿಸುವಲ್ಲಿ ಆರೋಗ್ಯ ಇಲಾಖೆಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕೆಂದು ತಿಳಿಸಿದರು. ಕ್ಷಯರೋಗದ ಲಕ್ಷಣ, ಹರಡುವ ವಿಧಾನ, ಚಿಕಿತ್ಸೆ ಹಾಗೂ ರೋಗ ನಿಯಂತ್ರಣದ ಕುರಿತು ಸಂಪೂರ್ಣ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಡಿ.ಪಿ.ಸಿ. ಸುಭಾಷ್ ಬಂಗೇರಾ ಉಪಸ್ಥಿತರಿದ್ದರು. ಕಾರ್ಕಳ ಕ್ಷಯ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕರಾದ ಶಿವಕುಮಾರ್ ಇವರು ಕಾರ್ಯಕ್ರಮ ನಿರ್ವಹಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಳ್ಮಣ್ ಇಲ್ಲಿನ ಕಿರಿಯ ಆರೋಗ್ಯ ಸಹಾಯಕರಾದ ಪ್ರಶಾಂತ್ ಹಾಗೂ ಕಾರ್ಕಳ ಕ್ಷಯ ಘಟಕದ ಹಿರಿಯ ಪ್ರಯೋಗಶಾಲಾ ಮೇಲ್ವಿಚಾರಕರಾದ ಹರಿಪ್ರಸಾದ್ ಇವರು ಕಾರ್ಯಕ್ರಮ ಆಯೋಜಿಸಿದರು.


Spread the love