ಗಣೇಶ ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸೋಣ

Spread the love

ಗಣೇಶ ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸೋಣ

ಮ0ಗಳೂರು :ಕಷ್ಟಗಳ ನಿವಾರಕ ಗಣೇಶ, ಗಣೇಶನ ಹಬ್ಬವನ್ನು ದೇವರೇ ಸೃಷ್ಟಿಸಿರುವ ಪ್ರಕೃತಿಯ ನಿಯಮಗಳನ್ನು ಉಲ್ಲಂಘಿಸದೇ ಆಚರಿಸಬೇಕಾಗಿದೆ.
ಗಣೇಶನ ಮೂರ್ತಿಯನ್ನು ತಯಾರಿಸಲು ಉಪಯೋಗಿಸುವಂತಹ ಲೋಹದ ಸಂಬಂಧ ಬಣ್ಣಗಳಲ್ಲಿ ಸೀಸ ಹಾಗೂ ಇನ್ನಿತರ ವಿಷಕಾರಿ ರಾಸಾಯನಿಕಗಳಿರುತ್ತದೆ. ಪ್ರತಿ 100 ಗ್ರಾಂ ಲೋಹದ ಬಣ್ಣದಲ್ಲಿ 12 ಗ್ರಾಂಗಳಷ್ಟು ಸೀಸದ ಅಂಶ ಇರುವುದು ವೈಜ್ಞಾನಿಕವಾಗಿ ತಿಳಿದು ಬಂದಿದ್ದು, ಈ ಸೀಸದ ಅಂಶ ಬಹುಪಾಲು, ಮಕ್ಕಳಿಗೆ ಹಾನಿಯನ್ನುಂಟು ಮಾಡುವುದು ಕಂಡು ಬಂದಿರುತ್ತದೆ. ಇದೇ ಅಲ್ಲದೇ ಈ ಲೋಹ ಸಂಬಂಧಿ ಬಣ್ಣಗಳಿಂದ ಎಲ್ಲಾ ತರಹದ ಜೀವಿಗಳಿಗೂ ಅಪಾಯ ಒದಗಿ ಬರುವುದು ಸಂಶೋಧನೆಗಳಿಂದ ತಿಳಿದು ಬಂದಿರುತ್ತದೆ.
ಆದ್ದರಿಂದ ಗಣೇಶನ ಮೂರ್ತಿಗಳ ವಿಸರ್ಜನೆಯಿಂದ ಕೆರೆ ಬಾವಿ ಕೊಳಗಳಲ್ಲಿ ನೀರು ಮಲೀನವಾಗದಂತೆ, ಮೇಲ್ವಿಚಾರಣೆ ವಹಿಸುವುದು ಅವಶ್ಯ ಹಾಗೂ ಇದಕ್ಕಾಗಿ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಗಣೇಶನ ಹಬ್ಬವನ್ನು ಭಕ್ತಿ ಸಂಬ್ರಮದಿಂದ ಆಚರಿಸುವುದರ ಜೊತೆಗೆ ಪ್ರಕೃತಿಯ ಹಾಗೂ ಪರಿಸರದ ನಿಯಮಗಳನ್ನು ಉಲ್ಲಂಘಿಸದಂತೆ ನೋಡಿ ಕೊಳ್ಳಲು ಜವಾಬ್ದಾರಿಯುತ ನಾಗರೀಕರಲ್ಲಿ ಈ ಕೆಳಕಂಡ ಅಂಶಗಳನ್ನು ಅನುಸರಿಸಬೇಕು.
ಲೋಹ ಸಂಬಂಧಿ ಬಣ್ಣಗಳಿಂದ ಮಾಡಿದ ಮೂರ್ತಿಗಳ ಬದಲಿಗೆ ಸಸ್ಯಾದಾರಿತ ನೈಸರ್ಗಿಕ ಬಣ್ಣಗಳಿಂದ ತಯಾರಿಸಿರುವ ಮೂರ್ತಿಗಳನ್ನು ಕೊಳ್ಳಿರಿ. ಗಣೇಶನ ವಿಗ್ರಹಗಳನ್ನು ಗೊತ್ತು ಪಡಿಸಿದ ಜಾಗದಲ್ಲಿ ಮಾತ್ರ ವಿಸರ್ಜಿಸಿ. ಹೂ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಕೆರೆ, ನದಿ ಆಥಾವ ಸಮುದ್ರದ ನೀರಿಗೆ ಹಾಕಬಾರದು. ಪ್ರತಿ ಮನೆಯವರು ವಿಗ್ರಹಗಳನ್ನು ಒಂದು ಬಕೆಟ್ ನೀರಿನಲ್ಲಿ ವಿಸರ್ಜಿಸುವ ಪದ್ಧತಿಯನ್ನು ರೂಢಿ ಮಾಡಿಕೊಳ್ಳಿ. ಶಬ್ಧ ಮಾಲಿನ್ಯವನ್ನು ಆದಷ್ಟು ಮಿತಗೊಳಿಸಿ.
ಲೋಹ ಸಂಬಂಧಿ ಬಣ್ಣಗಳನ್ನು ಉಪಯೋಗಿಸಿ ತಯಾರಿಸುವ ಮೂರ್ತಿಗಳನ್ನು ಕೊಂಡು ಕೊಳ್ಳ ಬೇಡಿ, ಹೂ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಕೆರೆ/ಕೊಳ/ನದಿ/ಸಮುದ್ರದಲ್ಲಿ ಹಾಕಬೇಡಿ. ಗೊತ್ತು ಪಡಿಸಿದ ಅಲ್ಲದೇ ಯಾವುದೇ ನೀರಿನ ಆಕರಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸ ಬೇಡಿ. ಧ್ವನಿ ವರ್ಧಕಗಳನ್ನು ಉಪಯೋಗಿಸಿ ಶಬ್ಧ ಮಾಲಿನ್ಯ ಮಾಡಬೇಡಿ. ಪ್ಲಾಸ್ಟಿಕ್ ಸಂಬಂಧಿಸಿದ ಸಾಮಾಗ್ರಿಗಳನ್ನು ಕಡ್ಡಾಯವಾಗಿ ಬಳಕೆ ಮಾಡಬಾರದು.
ಗಣೇಶ ಚತುರ್ಥಿ ಹಬ್ಬದ ಆಚರಣೆ ಸಂದರ್ಭದಲ್ಲಿ ಪ್ಲಾಸ್ಟಿಕ್‍ನಿಂದ ತಯಾರಿಸಿದ ಬಂಟಿಂಗ್ಸ್, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ತಟ್ಟೆ ಹಾಗೂ ಇತರೆ ಪ್ಲಾಸ್ಟಿಕ್‍ನಿಂದ ತಯಾರಿಸಿದ ಸಾಮಾಗ್ರಿಗಳನ್ನು ಬಳಸುವುದು ಕಡ್ಡಾಯವಾಗಿ ನಿಷೇಧಿಸಿದೆ. ಕಾನೂನು ಉಲ್ಲಂಘನೆಗೆ ದಂಡ ವಿಧಿಸಲಾಗುವುದು ಎಂದು ಮಂಗಳೂರು ಮಹಾನಗರಪಾಲಿಕೆ ಪ್ರಕಟಣೆ ತಿಳಿಸಿದೆ.

Spread the love