ಗಾಂಜಾ ಮಾರಾಟಗಾರನ ಬಂಧನ, ಅಟೋರಿಕ್ಷಾ ವಶ

Spread the love

ಗಾಂಜಾ ಮಾರಾಟಗಾರನ ಬಂಧನ, ಅಟೋರಿಕ್ಷಾ, ಗಾಂಜಾ ವಶ

ಮಂಗಳೂರು: ಗಾಂಜಾ ಹಾಗೂ ಇನ್ನಿತರ ಮಾದಕ ವಸ್ತುಗಳ ಪತ್ತೆಯ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದಿಂದ ಹೆಚ್ಚಿನ ಗಮಹರಿಸುತ್ತಿದ್ದು ವಿಟ್ಲ ಠಾಣಾ ಪಿಎಸ್‌ಐ ಪ್ರಕಾಶ್ ದೇವಾಡಿಗ ಮತ್ತು ಸಿಬಂದಿಗಳು ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.

ಬಂಧಿತನನ್ನು ಬಂಟ್ವಾಳದ ಸಾಲೆತ್ತೂರು ನಿವಾಸಿ ಜಲಾಲುದ್ದಿನ್ (30) ಎಂದು ಗುರುತಿಸಲಾಗಿದೆ.

ganja-arrest

ಜೂನ್ 25 ರಂದು ಬೆಳಿಗ್ಗೆ ಬಂದ ಖಚಿತ ಮಾಹಿತಿಯಂತೆ ಕೇರಳ ರಾಜ್ಯದ ಉಪ್ಪಳ ದಿಂದ ಸಾಲೆತ್ತೂರು ಕಡೆಗೆ ಒಂದು ಅಟೋರಿಕ್ಷಾದಲ್ಲಿ ಸಾಗಿಸುತ್ತಿದ್ದ 850 ಗ್ರಾಂ ಗಾಂಜಾ ಹಾಗೂ ಅಟೋರಿಕ್ಷಾ ಸಮೇತ ಆರೋಪಿ ಜಲಾಲುದ್ದಿನ್ (30) ಎಂಬವನ್ನು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೇರಳ ಗಡಿ ಭಾಗವಾದ ಸಾಲೆತ್ತೂರು ಗ್ರಾಮದ ಕಟ್ಟತ್ತಿಲ ಎಂಬಲ್ಲಿ ವಿಟ್ಲ ಪೊಲೀಸರು ಬಂಧಿಸಿರುತ್ತಾರೆ.

ಆರೋಪಿಯಿಂದ ಸುಮಾರು 7,000 ಬೆಲೆ ಬಾಳುವ 850 ಗ್ರಾಂ ಗಾಂಜಾ ಹಾಗೂ ಸುಮಾರು 1,50,000/- ಮೌಲ್ಯದ ಅಟೋರಿಕ್ಷಾವನ್ನು ವಶಪಡಿಸಿದ್ದು ವಶಪಡಿಸಿಕೊಂಡ ಸೊತ್ತ್ತುಗಳ ಒಟ್ಟು ಮೌಲ್ಯ ಅಂದಾಜು 1,57,000/- ಆಗಿರುತ್ತದೆ.

ಈ ಮೇಲಿನ ಆರೋಪಿಯು ಈ ಹಿಂದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ . ಈತನು ಈ ಹಿಂದೆ ಕೆಲವು ಸಮಯದಿಂದ ತಾನು ಕೇರಳದ ಉಪ್ಪಳದಿಂದ ಗಾಂಜವನ್ನು ಖರೀದಿಸಿ ಸಾಲೆತ್ತೂರು, ಕುಡ್ತಮುಗೇರು, ಮಾದಕಟ್ಟೆ, ಬೋಳಂತೂರು , ಪರಿಸರದಲ್ಲಿ ಯುವಕರಿಗೆ ಮಾರಾಟ ಮಾಡುತ್ತಿದ್ದುದಾಗಿ ವಿಚಾರಣೆಯಲ್ಲಿ ತಿಳಿದು ಬಂದಿರುತ್ತದೆ.
ಸದರಿ ಆರೋಪಿ ಹಾಗೂ ಸೊತ್ತು ಪತ್ತೆ ಹಚ್ಚುವಲ್ಲಿ ಕೆ.ಯು.ಬೆಳ್ಳಿಯಪ್ಪ, ಸಿಪಿಐ ಬಂಟ್ವಾಳ ವೃತ್ತ, ಪಿ.ಎಸ್.ಐ ವಿಟ್ಲ ಪ್ರಕಾಶ್ ದೇವಾಡಿಗ, ಎಎಸ್‌ಐ ಆನಂದ ಪೂಜಾರಿ, ಬಾಲಕೃಷ್ಣ, ಜಿನ್ನಪ್ಪ ಗೌಡ ,ಜಯಕುಮಾರ್ ,ಪ್ರವೀಣ್ ರೈ, ರಕ್ಷಿತ್ ರೈ, ಪ್ರವೀಣ್ ಕುಮಾರ್, ರಮೇಶ್, ಮತ್ತು ರಘುರಾಮ ಇವರುಗಳು ಸಹಕರಿಸಿರುತ್ತಾರೆ.


Spread the love