ಗೃಹರಕ್ಷಕರಿಂದ ಬೈಕ್ ರ್ಯಾಲಿ

Spread the love

ಗೃಹರಕ್ಷಕರಿಂದ ಬೈಕ್ ರ್ಯಾಲಿ

ಮ0ಗಳೂರು : ಗೃಹರಕ್ಷಕರ ದಿನಾಚರಣೆ ಅಂಗವಾಗಿ ಗೃಹರಕ್ಷಕ ದಳ ದಕ್ಷಿಣ ಕನ್ನಡ ಜಿಲ್ಲೆ ಇದರ ಗೃಹರಕ್ಷಕರು ಮತ್ತು ಗೃಹರಕ್ಷಕಿಯರಿಂದ ಬೈಕ್ ರ್ಯಾಲಿ ನಡೆಯಿತು.

ಗೃಹರಕ್ಷಕ ದಳ ಮತ್ತು ಗೃಹರಕ್ಷಕರ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಬೈಕ್ ರ್ಯಾಲಿಯನ್ನು ಜಿಲ್ಲಾ ಗೃಹರಕ್ಷಕದಳ ಆಯೋಜಿಸಿತ್ತು. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ.ಮುರಲಿ ಮೋಹನ್ ಚೂಂತಾರು ಇವರು ಈ ಬೈಕ್ ರ್ಯಾಲಿಗೆ ಚಾಲನೆ ನೀಡಿದರು.

ಡಾ. ಚೂಂತಾರು ಅವರು ಮಾತನಾಡುತ್ತಾ 1962 ರ ಡಿಸೆಂಬರ್ 6 ರಂದು ನಿಷ್ಠಾಮ ದೇಶ ಸೇವೆ ಸಲ್ಲಿಸುವ ಸ್ವಯಂಸೇವಕರ ತಂಡಕ್ಕೆ ‘ಗೃಹರಕ್ಷಕ ದಳ” ಎಂದು ನಾಮಕರಣ ಮಾಡಿ, ಖಾಕಿಯನ್ನು ಅಧಿಕೃತವಾಗಿ ಸಮವಸ್ತ್ರವಾಗಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು ಈ ಸಂದದಲ್ಲಿ ಉಪ ಸಮಾದೇಷ್ಟರಾದ ರಮೇಶ, ಘಟಕಾಧಿಕಾರಿಯಾದ ಅಬಿಮನ್ಯು ರೈ ಹಿರಿಯ ಗೃಹರಕ್ಷಕರಾದ ಸುರೇಶ್ ಶೇಟ್, ಭಾಸ್ಕರ್, ಅಶೋಕ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಸುಮಾರು 50 ಮಂದಿ ಗೃಹರಕ್ಷಕರು ಈ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದರು. ಪೊಲೀಸ್ ಪೆರೇಡ್ ಮೈದಾನದಿಂದ ಆರಂಭವಾದ ರ್ಯಾಲಿ ಲೈಟ್ ಹೌಸ್ ರಸ್ತೆ, ಬಾವುಟ ರಸ್ತೆ ಮಾರ್ಗವಾಗಿ, ಜ್ಯೋತಿ ಸರ್ಕಲ್ ನಿಂದ ರೂಪ ಹೋಟೆಲ್ ಮೂಖಾಂತರ ಪುನ: ಪೋಲಿಸ್ ಪೆರೇಡ್ ಮೈದಾನದವರೆಗೆ ನಡೆಯಿತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love