ಗೋರಕ್ಷಣೆಗೆ ರಾಮಚಂದ್ರಾಪುರ ಮಠದಿಂದ ಸಹಿಸಂಗ್ರಹ ಅಭಿಯಾನ  

Spread the love

ಗೋರಕ್ಷಣೆಗೆ ರಾಮಚಂದ್ರಾಪುರ ಮಠದಿಂದ ಸಹಿಸಂಗ್ರಹ ಅಭಿಯಾನ  
 

ಉಜಿರೆ : ದೇಶದೆಲ್ಲೆಡೆ ಗೋ ಹತ್ಯೆ ನಿಷೇಧ ಕುರಿತು ಚರ್ಚೆಯಾಗಯತ್ತಿದೆ. ಮೂಕ ಪ್ರಾಣಿಗಳೆಂದು ಕಡೆಗಾಣಿಸಿ ಗೋ ಹತ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲ್ಲೇಇದೆ. ಇದನ್ನು ತಡೆಯಲು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಸಿಬ್ಬಂದಿ ವರ್ಗ ಜಾಗೃತಿ ಅಭಿಯಾನ ಆರಂಭಿಸಿದೆ. ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಲಕ್ಷದೀಪೋತ್ಸವದಲ್ಲಿಯೂ ಗೋ ಹತ್ಯೆ ನಿಷೇಧದ ಕುರಿತು ಅರಿವು ಮೂಡಿಸಲಾಗುತ್ತಿದ್ದು, ಹಸ್ತಕ್ಷಾರ ಅಭಿಯಾನ ಜನರ ಗಮನ ಸೆಳೆಯಿತು.

ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದ್ದರೂ, ಯಾವುದೇ ಪ್ರತಿಫಲ ಸಂದಿಲ್ಲ. ಈ ನಿಟ್ಟಿನಲ್ಲಿ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಕಳುಹಿಸಿಕೊಡಲಾಗುತ್ತಿದ್ದು, ಸಮಾಜದ ಸಹಾಯ ಹಾಗೂ ಸಹಕಾರ ಪ್ರಮುಖ ಪಾತ್ರವಹಿಸುತ್ತದೆ ಎಂದು ಅಭಿಯಾನದ ಪ್ರತಿನಿಧಿ ರಮ್ಯ ಶಂಕರ್ ತಿಳಿಸಿದರು. ವಸ್ತುಪ್ರದರ್ಶನ, ಅಮೃತವರ್ಷಿಣಿ ಸೇರಿದಂತೆ ದೇವಳದ ಸುತ್ತಮುತ್ತ ಶ್ರೀ ಮಠದ ಸದಸ್ಯರು ಮನವಿ ಪತ್ರಗಳಿಗೆ ಸಾರ್ವಜನಿಕರ ಸಹಿಯನ್ನು ಸಂಗ್ರಹಿಸುತ್ತಿದ್ದಾರೆ.

ಜಾತ್ರೆಯ ಸಂಭ್ರಮದ ನಡುವೆಯೂ ಕಾಲೇಜು ವಿದ್ಯಾರ್ಥಿಗಳು ಗೋ ಹತ್ಯೆಯನ್ನು ತಡೆಗಟ್ಟುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಉಜಿರೆ ವಲಯದಲ್ಲಿ ನಡೆಯುವ ಜಾತ್ರೆ, ಮದುವೆಗಳಿಗೆ ತೆರಳಿ ಜನರ ಮನವೂಲಿಸುವ ಮೂಲಕ ಮನವಿ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲಾಗುತ್ತಿದೆ. ದೇಶೀಯ ಗೋ ತಳಿಗಳನ್ನು ಸಂರಕ್ಷಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಉಜಿರೆ ವಲಯದಲ್ಲಿ ಅತ್ತಾಜಿಕೆ ಕೇಶವ್ ಭಟ್ ಹಾಗೂ ಹರೀಶ್ ಪೂಂಜ ಇವರ ಪ್ರಯತ್ನಕ್ಕೆ ಸಾಥ್ ನೀಡುತ್ತಿದ್ದಾರೆ.

ಪುರಾತನ ಕಾಲದಿಂದಲೂ ನಮ್ಮ ಸಂಸ್ಕೃತಿಯಲ್ಲಿ ಉನ್ನತ ಸ್ಥಾನವಿತ್ತು. ಗೋವು ಶ್ರೀಮಂತಿಕೆಯ ಸಂಕೇತ ಎಂಬುದು ಜನರ ಪರಂಪರಾಗತ ನಂಬಿಕೆಯಾಗಿತ್ತು. ಆದರೆ ಇತ್ತೀಚೆಗೆ ದೇಶೀಯ ಗೋತಳಿಗಳು ಕಣ್ಮರೆಯಾಗುತ್ತಿವೆ.  ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದೆ. ಆದರೂ ಗೋವುಗಳ ಕಳ್ಳ ಸಾಗಣೆ ನಡೆಯುತ್ತಲೇ ಇದೆ. ಈ ನಿಟ್ಟಿನಲ್ಲಿ ಹೊಸನಗರ ಶ್ರೀ ರಾಮಚಂದ್ರಾ ಪುರ ರಾಘವೇಶ್ವರ ಸ್ವಾಮಿ ಅವರು ಗೋ ಹತ್ಯೆ ವಿರುದ್ದ ಜಾಗೃತಿ ಅಭಿಯಾನ ಪ್ರಾರಂಭಿಸಿದ್ದಾರೆ ಎಂದು ಅಭಿಯಾನದ ಸದಸ್ಯೆ ರಮ್ಯಶಂಕರಿ ತಿಳಿಸಿದರು. ಶ್ರೀಗಳ ನೇತೃತ್ವದಲ್ಲಿ ಪ್ರಪ್ರಥಮವಾಗಿ ಬೆಂಗಳೂರಿನಲ್ಲಿ ಪ್ರಾರಂಭಗೊಂಡಿತ್ತು. ಗೋ ಹತ್ಯೆಯನ್ನು ನಿಲ್ಲಿಸಿ, ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಶ್ರೀಗಳ ಮುಖ್ಯಉದ್ದೇಶವಾಗಿದೆ. ಇದೀಗ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆರಂಭಗೊಂಡಿದೆ. ಹೊನ್ನಾವರ, ಕುಮಟಾ ಸೇರಿದಂತೆ ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಶಾಲಾ-ಕಾಲೇಜು ಮಕ್ಕಳು ಸೇರಿದಂತೆ ಸ್ವಯಂಪ್ರೇರಿತ ಸದಸ್ಯರು ಜಾಗೃತಿ ಅಭಿಯಾನದಲ್ಲಿ ಶ್ರಮಿಸುತ್ತಿದ್ದಾರೆ. ಕಳೆದ ಎರಡು ದಿನಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸಹಿಯನ್ನು ಶೇಖರಿಸಲಾಗಿದೆ ಎಂದು ಸದಸ್ಯೆ ರಶ್ಮಿ ಪಲ್ಲವಿ ಅಭಿಪ್ರಾಯಪಟ್ಟರು. ಈ ಅಭಿಯಾನ ಮುಂದಿನ ದಿನಗಳಲ್ಲಿ ದೇಶದೆಲ್ಲೆಡೆ ವ್ಯಾಪಕವಾಗಲಿದೆ. ಪ್ರತಿಯೊಂದು ಜಿಲ್ಲೆಯಲ್ಲಿಯೂ ಹಲವಾರು ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್, ವಾಟ್ಸ್‌ಪ್‌ಗಳಲ್ಲಿ ಶಿಷ್ಯ ಮಾಧ್ಯಮ, ಹರೇರಾಮ್ ಶ್ರೀ ಶ್ರೀ ಸೇರಿದಂತೆ ಹಲವು ಗ್ರುಪ್‌ಗಳು ಕಾರ್ಯೋನ್ಮುಖವಾಗಿವೆ. ಈ ಸತ್ಕಾರ್ಯಕ್ಕೆ ಖಾವಂದರ ಸಹಕಾರ ದೊರೆತಿದ್ದು, ಅವರ ಕುಟುಂಬದ ಸದಸ್ಯರೆಲ್ಲಾ ಮನವಿಪತ್ರಕ್ಕೆ ಸಹಿ ಮಾಡಿದ್ದಾರೆಂದು ತಿಳಿಸಿದರು.


Spread the love