ಗೋವಾ: ಸಮಾಜ ಕಂಟಕರಿಂದ ಸನಾತನದ ಸಾಧಕರ ವಾಹನದ ಮೇಲೆ ದಾಳಿ

Spread the love

ಗೋವಾ: ಇಲ್ಲಿನ ಸಮಾಜ ಕಂಟಕರು ಅಕ್ಟೋಬರ್ 12 ರಂದು ರಾತ್ರಿ 10.30 ಕ್ಕೆ ಸನಾತನದ ಆಶ್ರಮದ ಸಾಧಕರ ವಾಹನದ ಮೇಲೆ ಪೆಟ್ರೋಲ್‍ಬಾಂಬ್‍ನಿಂದ ಹಲ್ಲೆ ನಡೆಸಿದರು. ಅದೃಷ್ಠವಶಾತ್ ಪೆಟ್ರೋಲ್‍ಬಾಂಬ್ ವಾಹನದೆದುರು ಬಿದ್ದುದರಿಂದ ವಾಹನ ಚಾಲಕನು ಪ್ರಸಂಗಾವಧಾನದಿಂದ ವಾಹನವನ್ನು ತಕ್ಷಣ ನಿಲ್ಲಿಸಿದನು ಮತ್ತು ಅವಘಡ ತಪ್ಪಿತು. ಪೆಟ್ರೋಲ್ ಬಾಂಬ್ ಎಸೆಯುವ ಸಮಾಜಕಂಟಕರು ಕತ್ತಲೆಯಲ್ಲಿ ಓಡಿಹೋದರು.

ಇದಕ್ಕೂ ಮೊದಲು ರಾತ್ರಿ 9.45 ಕ್ಕೆ ಮತ್ತೊಂದು ಪ್ರಸಂಗದಲ್ಲಿ ಸನಾತನದ ಸಾಧಕರ ವಾಹನವೊಂದರ ಮೇಲೆ ಕಲ್ಲು ಮತ್ತು ಒಂದು ಬಾಟಲಿ ಎಸೆದರು. ಈ ಎರಡೂ ಘಟನೆಗಳ ವಿಷಯದಲ್ಲಿ ಫೆÇೀಂಡಾ ಆರಕ್ಷಕ ಠಾಣೆಯಲ್ಲಿ ದೂರು ದಾಖಲಿಸಿದಾಗ ಆರಕ್ಷಕರು ಘಟನಾ ಸ್ಥಳಕ್ಕೆ ಬಂದು ನಿರೀಕ್ಷಣೆ ಮಾಡಿದರು. ಪೆಟ್ರೋಲ್ ಬಾಂಬ್‍ಗಾಗಿ ಉಪಯೋಗಿಸಿದ ಬಾಟ್ಲಿಯನ್ನು ವಶಪಡಿಸಿಕೊಂಡರು.

ಈ ಮೊದಲೂ 2014 ರ ನವೆಂಬರ್ 6 ರ ರಾತ್ರಿ ಸಮಾಜಕಂಟಕರು 2 ಪೆಟ್ರೋಲ್ ಬಾಂಬ್‍ಗಳನ್ನು ಸನಾತನದ ಆಶ್ರಮದ ಮೇಲೆ ಎಸೆದಿದ್ದರು. ಅನಂತರ 2014 ರ ನವೆಂಬರ್ 9 ರಂದು ರಾತ್ರಿ 10 ಗಂಟೆಗೆ ಸಮಾಜಕಂಟಕರು ಜೀವಹಾನಿ ಮಾಡುವ ಉದ್ದೇಶದಿಂದ ಕವಳಿಯ ಕಪಿಲೇಶ್ವರಿಯಲ್ಲಿ ನಿಲ್ಲಿಸಿದ್ದ ಸನಾತನ ಸಂಸ್ಥೆಯ ಚತುಷ್ಚಕ್ರ ವಾಹನ ವನ್ನು ಪೆಟ್ರೋಲ್ ಬಾಂಬ್ ಎಸೆದು ಬೆಂಕಿ ಹಚ್ಚಲು ಪ್ರಯತ್ನಿಸಿದ್ದರು. ಇದರಲ್ಲಿ ವಾಹನಕ್ಕೆ ಹಾಕಿದ್ದ ಪ್ರಚಾರಫಲಕ ಭಸ್ಮವಾಯಿತು.

ಗೋವಾ ಸರಕಾರ ಪೆಟ್ರೋಲ್‍ ಬಾಂಬ್‍ನಿಂದ ಹಲ್ಲೆ ನಡೆಸಿದ ಉಗ್ರಗಾಮಿಗಳನ್ನು ಎನ್‍ಐಎದಿಂದ ತನಿಖೆ ನಡೆಸಲಿ ! – ಸನಾತನ ಸಂಸ್ಥೆ
11 ಅಕ್ಟೋಬರ್ 2015 ರಂದು ರಾಮನಾಥಿಯಲ್ಲಿ ನೆರವೇರಿದ ಸಭೆಯಲ್ಲಿ ರಾಮನಾಥ ಯುವಾ ಸಂಘದ ಸೌರಭ ಲೋಟ್ಲೀಕರರು ಹಿಂಸಾತ್ಮಕ ಆಂದೋಲನ ಮಾಡುತ್ತೇವೆ, ಎಂದು ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಸನಾತನದ ಸಾಧಕರ ವಾಹನಗಳ ಮೇಲೆ ಪೆಟ್ರೋಲ್ ಬಾಂಬ್‍ನಿಂದ ಹಲ್ಲೆ ನಡೆಸಲಾಗುತ್ತಿದೆ. ಸ್ಫೋಟಕಗಳ ಮಾಧ್ಯಮದಿಂದ ನಡೆಸುತ್ತಿರುವ ಈ ಅಪರಾಧ ಉಗ್ರಗಾಮಿ ಕೃತ್ಯವಾಗಿದ್ದು ಈ ಪ್ರಕರಣದಲ್ಲಿ ಗೋವಾ ಸರಕಾರ ಸಮಾಜಕಂಟಕರ ಮೇಲೆ ಅಪರಾಧವನ್ನು ದಾಖಲಿಸಿ ಅವರನ್ನು ಎನ್‍ಐಎ ಮೂಲಕ ತನಿಖೆ ನಡೆಸಬೇಕು!, ಎಂದು ಸನಾತನ ಸಂಸ್ಥೆಯು ಆಗ್ರಹಿಸುತ್ತಿದೆ.


Spread the love