ಚಿಕಿತ್ಸೆಗಾಗಿ ಬಿರುವೆರ್ ಕುಡ್ಲ ಸಂಘಟನೆಯ ಮಹಿಳಾ ಘಟಕದ ವತಿಯಿಂದ ಸಹಾಯ ಧನ

Spread the love

ಚಿಕಿತ್ಸೆಗಾಗಿ ಬಿರುವೆರ್ ಕುಡ್ಲ ಸಂಘಟನೆಯ ಮಹಿಳಾ ಘಟಕದ ವತಿಯಿಂದ ಸಹಾಯ ಧನ

ಮಂಗಳೂರು: ಪಡುಬಿದ್ರಿ ಬಳಿಯ ಹೆಜಮಾಡಿ ಎಂಬಲ್ಲಿನ ಅವರಾಲು ಮಟ್ಟಿ ಎಂಬಲ್ಲಿ ವಾಸಿಸುತ್ತಿರುವ ಲೀಲಾ ಪೂಜಾರಿ ಎಂಬವರು ಮಾರಕ ಕಾಯಿಲೆಯಿಂದ ಬಳಲುತ್ತಿದ್ದು, ಇವರ ಚಿಕಿತ್ಸೆಗಾಗಿ ಬಿರುವೆರ್ ಕುಡ್ಲ ಸಂಘಟನೆಯ ಮಹಿಳಾ ಘಟಕದ ವತಿಯಿಂದ ಸಹಾಯ ಧನ ವಿತರಿಸಲಾಯಿತು.

ಬಿರುವೆರ್ ಕುಡ್ಲ-ಫ್ರೆಂಡ್ಸ್ ಬಳ್ಳಾಲ್‍ಬಾಗ್ ಸಂಘಟನೆ ಅಸ್ತಿತ್ವಕ್ಕೆ ಬಂದು ಕೇವಲ 3 ವರ್ಷಗಳಲ್ಲಿ ತನ್ನ ಸಮಾಜಮುಖಿ ಕಾರ್ಯಗಳಿಂದ ಮನೆಮಾತಾಗಿದ್ದರೆ, ಈಗ ಈ ಸಂಘಟನೆಯ ಮಹಿಳಾ ಘಟಕವೂ ಇದೇ ಸಹಾಯಹಸ್ತ ಚಾಚುವ ಹಾದಿಯಲ್ಲಿ ಮುನ್ನಡೆಯುತ್ತಿದೆ.

ಪಡುಬಿದ್ರಿ ಬಳಿಯ ಹೆಜಮಾಡಿ ಎಂಬಲ್ಲಿನ ಅವರಾಲು ಮಟ್ಟಿ ಎಂಬಲ್ಲಿ ವಾಸಿಸುತ್ತಿರುವ ಲೀಲಾ ಪೂಜಾರಿ ಎಂಬವರು ಮಾರಕ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಲೀಲಾ ಅವರ ಪತಿ ಅಶೋಕ್ ಪೂಜಾರಿ ಕೂಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದು, ಮಕ್ಕಳಾದ ಪವನ್ ಹಾಗೂ ಪೃಥ್ವಿ ಸ್ಥಳೀಯ ಕನ್ನಡ ಮಾಧ್ಯಮ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆಯುತ್ತಿದ್ದಾರೆ. ಇಂತಹ ಬಡ ಕುಟುಂಬಕ್ಕೆ 2 ವರ್ಷಗಳ ಮುಂಚೆ ಲೀಲಾ ಅವರು ಕ್ಯಾನ್ಸರ್ ಎಂಬ ಮಾರಕ ಕಾಯಿಲೆಗೆ ತುತ್ತಾಗಿದ್ದಾರೆ ಎಂಬ ಆಘಾತಕಾರಿ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ. ಸಾಲ ಸೋಲ ಮಾಡಿ ಈಗಾಗಲೇ ಲಕ್ಷಾಂತರ ರೂಪಾಯಿ ವ್ಯಯಿಸಿರುವ ಈ ಕುಟುಂಬ ಈಗ ದಾನಿಗಳ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

ಇವರ ಕಷ್ಟದ ಕುರಿತು ಅರಿತ ಬಿರುವೆರ್ ಕುಡ್ಲ ಸಂಘಟನೆಯ ಮಹಿಳಾ ಘಟಕವು ಮಾರ್ಗದರ್ಶಕರಾದ ವಿದ್ಯಾ ರಾಕೇಶ್ ನೇತೃತ್ವದಲ್ಲಿ ಲೀಲಾ ಅವರ ನಿವಾಸಕ್ಕೆ ತೆರಳಿ 32,500 ಧನ ಸಹಾಯ ವಿತರಿಸಿದೆ.

ಈ ಕುರಿತು ಮಾಹಿತಿ ನೀಡಿದ ಘಟಕದ ರೇಖಾ ಗೋಪಾಲ್, ಸಹೃದಯಿ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಈ ಕುಟುಂಬಕ್ಕೆ ನೀಡಿದ್ದೇವೆ. ಚಿಕಿತ್ಸೆಗಾಗಿ ಇನ್ನಷ್ಟು ಹಣದ ಅಗತ್ಯವಿದ್ದು ದಾನಿಗಳು ಸಹಾಯ ನೀಡಬೇಕೆಂದು ಕೇಳಿಕೊಳ್ಳುತ್ತೇವೆ ಎಂದು ತಿಳಿಸಿದರು.

ಬಿರುವೆರ್ ಕುಡ್ಲ ಸಂಘಟನೆಯ ಮಹಿಳಾ ಘಟಕದ ಸದಸ್ಯರಾದ ಪ್ರಮೋದಾ ಸತೀಶ್, ಭವ್ಯ, ದೀಪಿಕಾ ಸುವರ್ಣ, ರೇಶ್ಮಾ ಉಳ್ಳಾಲ್, ರಾಜೀವಿ, ಪೂಜಾ, ನಳಿನಿ ಈ ಸಂದರ್ಭ ಉಪಸ್ಥಿತರಿದ್ದರು.


Spread the love