ಜಿಲ್ಲಾ ಗ್ರಂಥಾಲಯ ಪ್ರಾಧಿಕಾರಕ್ಕೆ ಉಪಾಧ್ಯಕ್ಷರನ್ನಾಗಿ ವಸಂತಿಶೆಟ್ಟಿ ಬ್ರಹ್ಮಾವರ

Spread the love

ಜಿಲ್ಲಾ ಗ್ರಂಥಾಲಯ ಪ್ರಾಧಿಕಾರಕ್ಕೆ ಉಪಾಧ್ಯಕ್ಷರನ್ನಾಗಿ ವಸಂತಿಶೆಟ್ಟಿ ಬ್ರಹ್ಮಾವರ

ಉಡುಪಿ: ಉಡುಪಿ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ 30ನೇ ಸಾಮಾನ್ಯ ಸಭೆಯು ಉಡುಪಿ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯವರಾದ ಶಿವಾನಂದ ಕಾಪಶಿ (ಕೆ.ಎ.ಎಸ್.), ಇವರ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ಜರುಗಿತು.

2017-18 ನೇ ಸಾಲಿಗೆ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರಕ್ಕೆ ನೂತನವಾಗಿ ನಾಮಕರಣಗೊಂಡ ಸದಸ್ಯರಲ್ಲಿ ವಸಂತಿಶೆಟ್ಟಿ ಬ್ರಹ್ಮಾವರ ಇವರನ್ನು ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ನೂತನ ಉಪಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸದರಿ ಸಭೆಯಲ್ಲಿ ನೂತನ ಸದಸ್ಯರುಗಳಾದ ಪ್ರತಾಪ್ ಹೆಗ್ಡೆ ಮಾರಾಳಿ, ರೇಷ್ಮಾ ಉದಯ ಶೆಟ್ಟಿ, ಮಹೇಂದ್ರ ಕುಮಾರ್, ಆಶಾ ಟಿ., ಎಸ್. ಸಂಗೀತ ಜಾನ್ಸನ್, ಭಾಸ್ಕರ ಕನ್ಯಾನ ಹಾಗೂ ಜಿಲ್ಲಾ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ ಇವರುಗಳು ಉಪಸ್ಥಿತರಿದ್ದರು.


Spread the love