ಜಿಲ್ಲಾ ಮಟ್ಟದ ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಕಾರ್ಯಕ್ರಮ

Spread the love

ಜಿಲ್ಲಾ ಮಟ್ಟದ ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಕಾರ್ಯಕ್ರಮ 

ಮ0ಗಳೂರು : ಜಿಲ್ಲಾ ಮಟ್ಟದ ಜನಸಂಖ್ಯಾ ಶಿಕ್ಷಣ ಕಾರ್ಯಕ್ರಮದ ಜಾನಪದ ನೃತ್ಯ ಹಾಗೂ ಪಾತ್ರಾಭಿನಯ ಸ್ಪರ್ಧೆಗಳು ಲೇಡಿಹಿಲ್ ವಿಕ್ಟೋರಿಯಾ ಪ್ರೌಢಶಾಲೆ ಮಂಗಳೂರು ಇಲ್ಲಿ ನಡೆದವು.

ಲಿಂಗ ತಾರತಮ್ಯ ನಿವಾರಣೆ, ಹೆಣ್ಣು ಭ್ರೂಣ ಹತ್ಯೆ, ಬೇಟೀ ಬಚಾವೋ ಬೇಟೀ ಪಡಾವೋ, ಹಿರಿಯರಿಗೆ ಗೌರವ ನೀಡುವುದು, ಪರಿಸರ ಸಂರಕ್ಷಣೆ, ಮಾದಕ ದ್ರವ್ಯಗಳ ಪರಿಣಾಮಗಳು, ಹೆಚ್‍ಐವಿ/ಏಡ್ಸ್ ಹದಿಹರೆಯದ ಮಕ್ಕಳ ಸಮಸ್ಯೆಗಳು ಮುಂತಾದ ವಿಷಯಗಳ ಆಧಾರದಲ್ಲಿ ಮಕ್ಕಳಿಗೆ ಅರಿವು ಮೂಡಿಸಲು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.ಈ ಸ್ಪರ್ಧೆಗಳು ಶಾಲಾಹಂತದಿಂದ ರಾಷ್ಟ್ರ ಹಂತದವರೆಗೂ ನಡೆಯಲಿವೆ, ಕಾರ್ಯಕ್ರಮವನ್ನು ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಾದ ವೈ. ಶಿವರಾಮಯ್ಯನವರು ಉದ್ಘಾಟಿಸಿ ಜನಸಂಖ್ಯಾ ಶಿಕ್ಷಣ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.

ಜಿಲ್ಲಾಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಸಿಪ್ರಿಯಾನ್ ಮೊಂತೆರೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ಪರ್ಧೆಗಳನ್ನು ಶಾಲಾಹಂತದಿಂದಲೇ ಎಲ್ಲಾ ಶಾಲೆಗಳಲ್ಲಿ ನಡೆಸಿ ಮಕ್ಕಳಿಗೆ ಅರಿವು ಮೂಡಿಸುವಂತೆ ತಿಳಿಸಿದರು.

ಮಂಗಳೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಕೆ.ಎಲ್, ಲೇಡಿಹಿಲ್ ವಿಕ್ಟೊರಿಯಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗ್ರೇಸ್ ಮಿರಾಂಡ, ಡಯಟ್ ಉಪನ್ಯಾಸಕರಾದ ಸುಮಂಗಲಾ ನಾಯಕ, ಶೇಖರಪ್ಪ ಬಳಬಟ್ಟಿ, ಶ್ರೀನಿವಾಸ ಅಡಿಗ, ವಿಜಯಲಕ್ಷ್ಮಿ, ವಿದ್ಯಾಶೆಟ್ಟಿ , ಪ್ರವೀಣಕುಮಾರಿ ಮುಂತಾದವರು ಉಪಸ್ಥಿತರಿದ್ದರು

ಡಯಟ್ ಉಪನ್ಯಾಸಕ ಪೀತಾಂಬರ್.ಕೆ ಸ್ವಾಗತಿಸಿದರು. ಹಿರಿಯ ಉಪನ್ಯಾಸಕರಾದ ಚಂದ್ರಪ್ರಭಾವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಪ್ರಾಂಶುಪಾಲರಾದ ದಯಾವತಿ ವಂದಿಸಿದರು.

ಪಾತ್ರಾಭಿನಯದಲ್ಲಿ ಜಿಲ್ಲೆಯ 7 ಬ್ಲಾಕ್‍ಗಳಿಂದ ಪ್ರಥಮ ಸ್ಥಾನ ಗಳಿಸಿದ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿವೆ. ಸರ್ಕಾರಿ ಪದವಿ ಪೂರ್ವಕಾಲೇಜು ಬೆಳ್ಳಾರೆ ಸುಳ್ಯ-ಪ್ರಥಮ, ಸರ್ಕಾರಿ ಪ್ರೌಢಶಾಲೆ ಪಾಪೆಮಜಲು ಪುತ್ತೂರು-ದ್ವಿತೀಯ, ಸರ್ಕಾರಿ ಪ್ರೌಢಶಾಲೆ ಶಂಭೂರು ಬಂಟ್ವಾಳ-ತೃತೀಯ ಬಹುಮಾನ ಗಳಿಸಿವೆ.

ಜಾನಪದ ನೃತ್ಯ ಸ್ಪರ್ಧೆಯಲ್ಲಿ ಜಿಲ್ಲೆಯ 05 ಶೈಕ್ಷಣಿಕ ಬ್ಲಾಕ್‍ಗಳಿಂದ ಪ್ರಥಮ ಸ್ಥಾನ ಗಳಿಸಿದ ತಂಡಗಳು ಸ್ಪರ್ಧಿಸಿವೆ ಇವುಗಳಲ್ಲಿ ಸರ್ಕಾರಿ ಪ್ರೌಢಶಾಲೆ ಪಾಪೆಮಜಲು ಪುತ್ತೂರು-ಪ್ರಥಮ, ಸರ್ಕಾರಿ ಪದವಿಪೂರ್ವ ಕಾಲೇಜು ಬೆಳ್ಳಾರೆ ಸುಳ್ಯ- ದ್ವಿತೀಯ, ಸರ್ಕಾರಿ ಪ್ರೌಢಶಾಲೆ ಕಡೇಶಿವಾಲಯ-ತೃತೀಯ ಬಹುಮಾನ ಪಡೆದಿವೆ. ಪ್ರಥಮ ಸ್ಥಾನ ಪಡೆದ ತಂಡಗಳು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ.


Spread the love