ಜೆಡಿಎಸ್ ಪಕ್ಷದತ್ತ ರಾಜ್ಯದ ಜನತೆ ಒಲವು – ಕುಮಾರಸ್ವಾಮಿ

Spread the love

ಜೆಡಿಎಸ್ ಪಕ್ಷದತ್ತ ರಾಜ್ಯದ ಜನತೆ ಒಲವು – ಕುಮಾರಸ್ವಾಮಿ

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ – ಬಿಜೆಪಿ ಅಧಿಕಾರದಿಂದ ಜನ ಬೇಸತ್ತಿದ್ದು, ಪ್ರಾದೇಶಿಕ ಪಕ್ಷದ ಬಗ್ಗೆ ಒಲವು ಹೊಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ 131 ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಲಿದ್ದು ಪ್ರಾದೇಶಿಕ ಪಕ್ಷವಾಗಿ ರಾಜ್ಯದಲ್ಲಿ ಅಧಿಕಾರ ಪಡೆಯಲಿದೆ. ಬೆಂಗಳೂರಿನ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಮಂಗಳೂರಿನ ಬಂದರು ಅಭಿವೃದ್ಧಿಗೆ ಜೆಡಿೆಸ್ ಯೋಜನೆ ರೂಪಿಸಲಿದೆ.

ರಾಜ್ಯದಲ್ಲಿ ಬರ ತಲೆದೋರಿದ್ದರೂ ಕೇಂದ್ರ ಸರಕಾರ 450 ಕೋಟಿ ರೂಗಳ ಕನಿಷ್ಠ ಮೊತ್ತವನ್ನು ಮಾತ್ರ ಬಿಡುಗಡೆ ಮಾಡಿದೆ. ಕೇಂದ್ರ ಸರಕಾರ ಬಿಡುಗಡೆ ಮಾಡುತ್ತೇವೆ ಎಂದು ಹಣವನ್ನು ಬಿಡುಗಡೆ ಮಾಡಿಲ್ಲ ಏಕೆಂದರೆ ಕೇಂದ್ರದ ಬಳಿಯೂ ಹಣದ ಕೊರತೆ ಇದೆ ಹೀಗಿರುವಾಗ ರಾಜ್ಯದಲ್ಲಿರುವ ಆಲಸ್ಯದಿಂದ ಕೂಡಿದ ಸರಕಾರ ಬರ ಪರಿಹಾರದ ಬಗ್ಗೆ ತುರ್ತುರ ಕ್ರಮ ಕೈಗೊಳ್ಳುವ ಬಗ್ಗೆ ನಂಬಿಕೆ ಇಲ್ಲ ಎಂದರು.

ಎತ್ತಿನಹೊಳೆ ಯೋಜನೆಗೆ ಶಿಲನ್ಯಾಸ ನಡೆಸಿ ಹಣ ಬಿಡುಗಡೆ ಮಾಡಿ ಒಂದು ವರ್ಷದಲ್ಲಿ ಕೋಲಾರಕ್ಕೆ ನೀರು ನೀಡುತ್ತೇವೆ ಎಂದು ಆಗಿನ ಮುಖ್ಯಮಂತ್ರಿ ಸದಾನಂದ ಗೌಡ ಹಾಗೂ ವೀರಪ್ಪ ಮೊಯ್ಲಿ, ಆಗಿನ ಹಾಗೂ ಪ್ರಸ್ತುತ ಸಂಸದ ನಳಿನ್ ಕುಮಾರ್ ಕಟೀಲ್ ಇಷ್ಟು ದಿನ ಮೌನ ವಹಿಸಿ ಈಗ ಪ್ರತಿಭಟನೆ ನಡೆಸುತ್ತಿರುವುದು ವಿಪರ್ಯಾಸ. ಇದರಲ್ಲಿ ಹಣದ ಹಗರಣ ನಡೆದಿದ್ದು, ಜೆಡಿಎಸ್ ಅಧಿಕಾರಕ್ಕೆ ಬಂದರೆ ಈ ಬಗ್ಗೆ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಹೇಳದರು.

ಜಿಲ್ಲಾ ಜೆಡಿಎಸ್ ಯುವ ಮೋರ್ಚಾ ಅಧ್ಯಕ್ಷ ಅಕ್ಷಿತ್ ಸುವರ್ಣ ಹಾಗೂ ಇತರ ನಾಯಕರು ಉಪಸ್ಥಿತರಿದ್ದರು


Spread the love